ದೇಶಕ್ಕೆ ಬಂದು ಶರಣಾಗು ಅಂದರೆ, ನೀರವ್ ಮೋದಿ ಮಾಡಿದ್ದು ಇನ್ನೊಂದು
ಉದ್ದೇಶಪೂರ್ವಕ ಸುಸ್ತಿದಾರ ನೀರವ್ ಪಟೇಲ್, ಭಾರತಕ್ಕೆ ಬಂದರೆ ನನ್ನ ಮೇಲೆ ದಾಳಿ ನಡೆಯಬಹುದು, ಭಯವಾಗುತ್ತಿದೆ, ಹಾಗಾಗಿ ಸದ್ಯ ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂದು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಇಮೇಲ್ ಬರೆದಿದ್ದಾರೆ.
ನವದೆಹಲಿ, ಡಿ 1: ಉದ್ದೇಶಪೂರ್ವಕ ಸುಸ್ತಿದಾರ ನೀರವ್ ಮೋದಿ, ಭಾರತಕ್ಕೆ ಬಂದರೆ ನನ್ನ ಮೇಲೆ ದಾಳಿ ನಡೆಯಬಹುದು, ಭಯವಾಗುತ್ತಿದೆ, ಹಾಗಾಗಿ ಸದ್ಯ ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂದು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಇಮೇಲ್ ಬರೆದಿದ್ದಾರೆ.
ದೇಶಕ್ಕೆ ಹಿಂದಿರುಗಿದರೆ ನನ್ನ ಜೀವಕ್ಕೆ ಅಪಾಯವಿದೆ. ನನ್ನ ಪ್ರತಿಕೃತಿಯನ್ನು ದಹನ ಮಾಡಿದ ಹಲವಾರು ಘಟನೆಗಳು ನಡೆದಿದ್ದು, ಭದ್ರತಾ ದೃಷ್ಟಿಯಿಂದ, ಸದ್ಯದ ಮಟ್ಟಿಗೆ ಭಾರತಕ್ಕೆ ವಾಪಸ್ ಆಗಲು ಸಾಧ್ಯವಿಲ್ಲ ಎಂದು ಇಡಿ ಮತ್ತು ಸಿಬಿಐಗೆ, ನೀರವ್ ಮೋದಿ, ಇಮೇಲ್ ನಲ್ಲಿ ಮನವಿ ಮಾಡಿದ್ದಾರೆ.

ಈ ಸಂಬಂಧ ಹೇಳಿಕೆಯನ್ನು ನೀಡಿರುವ ನೀರವ್ ಪರ ವಕೀಲ ವಿ ಅಗರವಾಲ್, ಬ್ಯಾಂಕ್ ವಂಚನೆ ಪ್ರಕರಣದಲ್ಲಿ ನನ್ನ ಕಕ್ಷಿದಾರನನ್ನು ಪೋಸ್ಟರ್ ಬಾಯ್ ರೀತಿಯಲ್ಲಿ ಅವಮಾನಿಸಲಾಗುತ್ತಿದೆ. ಬನ್ಸಾಲ್ ಎನ್ನುವ ವ್ಯಕ್ತಿ ಸಿಬಿಐ ನೀಡಿದ ಟಾರ್ಚರ್ ನಿಂದ ಆತ್ಮಹತ್ಯೆ ಮಾಡಿಕೊಂಡರು ಎಂದು ಸಿಬಿಐ ಕಾರ್ಯವೈಖರಿಯನ್ನು ವಕೀಲರು ದೂರಿದ್ದಾರೆ.
ಅವರ ಬ್ಯಾಂಕ್ ಖಾತೆ ಎನ್ಪಿಎ (non performance asset) ಆಗದಿದ್ದಾಗ, ದೇಶದ ಕಾನೂನಿಗೆ ಮಾನ್ಯವಾಗಿರುವ ಪಾಸ್ಪೋರ್ಟ್ ಮತ್ತು ಅಧಿಕೃತವಾದ ವೀಸಾ ಮೂಲಕ, ವಿದೇಶಕ್ಕೆ ತೆರಳಿದ್ದರು ಎಂದು ವಕೀಲರು ಹೇಳಿದ್ದಾರೆ.
ಪಿಎಂಎಲ್ಎ ಕೋರ್ಟೀನಲ್ಲಿ ಉದ್ದೇಶಪೂರ್ವಕ ಸುಸ್ತಿದಾರನೋ, ಅಲ್ಲವೋ ಎನ್ನುವುದು ವಿಚಾರಣೆಯ ಹಂತದಲ್ಲಿದೆ. ಆದರೆ, ಇದಕ್ಕೆ ಮೊದಲೇ ಸಿಬಿಐ, ನನ್ನ ಕಕ್ಷಿದಾರನನ್ನು ಉದ್ದೇಶಪೂರ್ವಕ ಸುಸ್ತಿದಾರ ಎಂದು ನಿರ್ಧರಿಸಿಬಿಟ್ಟಿದೆ ಎಂದು ನೀರವ್ ಪರ ವಕೀಲರು ಬೇಸರ ವ್ಯಕ್ತಪಡಿಸಿದ್ದಾರೆ.
ದೇಶ ಬಿಟ್ಟು ಹೋಗಿ ತಲೆ ತಪ್ಪಿಸಿಕೊಂಡಿರುವ ನೀರವ್ ಮೋದಿಯ 56 ಕೋಟಿ ಮೌಲ್ಯದ 11 ಆಸ್ತಿಗಳನ್ನು ದುಬೈನಲ್ಲಿ ಜಾರಿ ನಿರ್ದೇಶನಾಲಯ ಜಪ್ತಿ ಮಾಡಿಕೊಂಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚಿಸಿ, 200 ಕೋಟಿ ಅಮೆರಿಕನ್ ಡಾಲರ್ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪ ಮೋದಿ ಮೇಲಿದೆ.












Click it and Unblock the Notifications