ಕೇರಳದಲ್ಲಿ ಕೊರೊನಾ; ಜನರ ನಡವಳಿಕೆಯೇ ಮೂಲ ಎಂದ ತಜ್ಞರು
ನವದೆಹಲಿ, ಆಗಸ್ಟ್ 23: ಕೊರೊನಾ ಸೋಂಕಿನಿಂದ ದೂರವುಳಿಯಲು ಜನರಿಗೆ ಒತ್ತಾಯಪೂರ್ವಕವಾಗಿ ನಿಯಮಗಳನ್ನು ಹೇರಲು ಸಾಧ್ಯವಿಲ್ಲ. ಜನರು ತಮ್ಮ ನಡವಳಿಕೆಗಳನ್ನು ತಾವಾಗಿಯೇ ಬದಲಿಸಿಕೊಳ್ಳುವುದು ಅವಶ್ಯಕ ಎಂದು ತಜ್ಞರು ಹೇಳಿದ್ದಾರೆ.
ಹಬ್ಬದ ಸಮಯದಲ್ಲಿ ಸರ್ಕಾರ ಕೊರೊನಾ ನಿಯಮಗಳಲ್ಲಿ ಮಾಡಿದ ಸಡಿಲಿಕೆಗಳು ಹಾಗೂ ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸದ ಜನರಿಂದಾಗಿ ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿವೆ. ದೇಶದ ಅರ್ಧದಷ್ಟು ಕೊರೊನಾ ಪ್ರಕರಣಗಳು ಕೇರಳವೊಂದರಲ್ಲೇ ದಾಖಲಾಗಲು ಇದೇ ಕಾರಣ ಎಂದು ತಜ್ಞರು ಭಾನುವಾರ ಉಲ್ಲೇಖಿಸಿದ್ದಾರೆ.

ದೇಶದಲ್ಲಿ ಹಬ್ಬದ ಸೀಸನ್ ಇನ್ನೂ ಮುಗಿದಿಲ್ಲ. ಜನರು ಸಂಭ್ರಮಾಚರಣೆಯಲ್ಲಿ ಮೈಮರೆತಿದ್ದಾರೆ. ಶಾಂಪಿಂಗ್‌ಗೆ ಜನಸಂದಣಿ ಸೇರುತ್ತಿರುವುದು, ನಿಯಮಗಳ ಪಾಲನೆ ಮಾಡದಿರುವುದು ಪಾಸಿಟಿವಿಟಿ ಪ್ರಮಾಣ ಹೆಚ್ಚಲು ಕಾರಣವಾಗಲಿದೆ ಎಂದು ತಜ್ಞರಾದ ಅಮರ್ ಫೆಟಲ್ ಹಾಗೂ ಡಾ. ಕಣ್ಣನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವೇ ದಿನಗಳ ಅಂತರದಲ್ಲಿ ದೇಶದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೇರಳದಲ್ಲಿ ಆಗಸ್ಟ್ 16ರಂದು 14.03% ಇದ್ದ ಪಾಸಿಟಿವಿಟಿ ಪ್ರಮಾಣ ಆಗಸ್ಟ್ 21ರ ವೇಳೆಗೆ 17.73%ಗೆ ಏರಿಕೆಯಾಗಿದೆ. ಆಗಸ್ಟ್ 21ರ ಶನಿವಾರ ಕೇರಳದಲ್ಲಿ ಹೊಸ ಪ್ರಕರಣಗಳ ಸಂಖ್ಯೆ 17,106 ಆಗಿದ್ದು, ದೇಶದಲ್ಲಿ ಅಂದು ದಾಖಲಾದ 34,457 ಪ್ರಕರಣಗಳಲ್ಲಿ ಅರ್ಧದಷ್ಟು ಪ್ರಕರಣಗಳು ಕೇರಳವೊಂದರಲ್ಲೇ ಇದೆ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ನಿರ್ಬಂಧಗಳ ಸಡಿಲಿಕೆಯಿಂದ ಇಂಥ ಸನ್ನಿವೇಶ ಉಂಟಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, 'ಕಳೆದ ವರ್ಷ ಮಾರ್ಚ್‌ನಿಂದ ಜನರು ಒಂದು ವರ್ಷಕ್ಕೂ ಹೆಚ್ಚುಕಾಲ ಮನೆಯೊಳಗೇ ಇರುವುದರಿಂದ ಹೊರಗೆ ಬರುವುದು ಅವಶ್ಯಕವೆನಿಸಿದೆ. ಜತೆಗೆ ಆರ್ಥಿಕ ಬಿಕ್ಕಟ್ಟಿನಿಂದ ಹೊರಗೆ ಬರಲು ಇದು ಅನಿವಾರ್ಯವೂ ಆಗಿದೆ. ಆದರೆ ನಿಯಮಗಳ ಪಾಲನೆಯೆಡೆಗೆ ಜನರು ಗಮನ ನೀಡದೇ ಇರುವುದು ಸಮಸ್ಯೆ ತರುತ್ತಿದೆ' ಎಂದಿದ್ದಾರೆ.
ಕೇರಳವು ಕೊರೊನಾ ಸೋಂಕಿಗೆ ತುತ್ತಾಗದ ಹೆಚ್ಚು ಜನಸಂಖ್ಯೆ ಹೊಂದಿರುವುದರಿಂದ ಸೋಂಕಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಇದು ಪಾಸಿಟಿವಿಟಿ ದರದಲ್ಲಿನ ಏರಿಕೆಗೂ ಕಾರಣವಾಗಲಿದೆ ಎಂದು ತಿಳಿಸಿದ್ದಾರೆ.

ಕೊರೊನಾ ಮೊದಲ ಅಲೆಯಲ್ಲಿದ್ದ ಸೋಂಕಿಗಿಂತ ಈಗಿರುವ ಡೆಲ್ಟಾ ರೂಪಾಂತರ ಹೆಚ್ಚು ಉಗ್ರವಾಗಿದ್ದು, ಪಾಸಿಟಿವಿಟಿ ದರ ತಗ್ಗಿಸಲು ಸಾಕಷ್ಟು ಸಮಯದ ಅವಶ್ಯಕತೆ ಇದೆ ಎಂದಿದ್ದಾರೆ.
ಕೊರೊನಾ ಸಂಖ್ಯೆ ತಗ್ಗಿಸಲು ಕೇರಳ ಸರ್ಕಾರ ಚಿತ್ತ ನೆಟ್ಟಿದೆ. ಸಾಕಷ್ಟು ವೈದ್ಯಕೀಯ ಮೂಲಸೌಕರ್ಯ ಹಾಗೂ ಸಿಬ್ಬಂದಿಗಳ ಅವಶ್ಯಕತೆ ಇದೆ. ಅಗತ್ಯವಿದ್ದರೆ ಈ ಎಲ್ಲಾ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗುತ್ತದೆ ಎಂದು ರಾಜ್ಯ ಕೊರೊನಾ ನೋಡಲ್ ಅಧಿಕಾರಿಯೂ ಆದ ಡಾ. ಫೆಟಲ್ ಹೇಳಿದ್ದಾರೆ.
ಹಬ್ಬದ ಸಮಯದಲ್ಲಿ ಪೊಲೀಸ್ ಅಧಿಕಾರಿಗಳು ಅಂಗಡಿಗಳಲ್ಲಿ ಕೊರೊನಾ ನಿಯಮಗಳ ಉಲ್ಲಂಘನೆಯನ್ನು ಎತ್ತಿ ತೋರಿದಾಗ ಮಾಲೀಕರು ಅಥವಾ ಸಾರ್ವಜನಿಕರು ಎಚ್ಚೆತ್ತುಕೊಳ್ಳದೇ, ಉಲ್ಲಂಘನೆ ಮಾಡಿದ್ದಕ್ಕೆ ಕಾನೂನು ಪರಿಣಾಮಗಳನ್ನು ಎದುರಿಸಲು ಸಿದ್ಧ ಎಂದಿದ್ದಾರೆ. ಇಂಥ ಬೆಳವಣಿಕೆ ಮಾರಕವಾಗಿದೆ ಎಂದು ಡಾ.ಕಣ್ಣನ್ ಹೇಳಿದ್ದಾರೆ.
ಲಾಕ್‌ಡೌನ್‌ನಿಂದಾಗಿ ಆದಾಯವಿಲ್ಲದಿರುವುದು, ಆರ್ಥಿಕ ಬಿಕ್ಕಟ್ಟು ಎದುರಿಸಿರುವುದು, ವರ್ಷಗಳ ಕಾಲ ಜನರು ಮನೆಯೊಳಗೇ ಸೇರಿಕೊಂಡಿರುವುದು ವೈರಸ್ ಬಗ್ಗೆ ಜನರ ದೃಷ್ಟಿಕೋನವನ್ನೇ ಬದಲಿಸಿದೆ ಹಾಗೂ ಅವರು ಸೋಂಕಿಗೆ ಹೆದರುವುದು ಕೂಡ ಕಡಿಮೆಯಾಗಿದೆ ಎಂದು ಹೇಳಿದರು.
ಸಾರ್ವಜನಿಕರು, ಸೋಂಕಿನಿಂದ ತಪ್ಪಿಸಿಕೊಂಡವರು, ತಮ್ಮ ಜಾಗರೂಕತೆಯಲ್ಲಿ ತಾವಿರಬೇಕು. ರಜಾ ದಿನಗಳಿಲ್ಲದೇ ದಣಿವಿನಲ್ಲಿ ಕೆಲಸ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತರು ಹಾಗೂ ಸೋಂಕಿನಿಂದ ಪ್ರಾಣ ಕಳೆದುಕೊಂಡವರನ್ನು ನೋಡಿಯಾದರೂ ತಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.












Click it and Unblock the Notifications