ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ರಾಜ್ಯಗಳ ಮತ ಎಣಿಕೆ; ಆಯೋಗದಿಂದ ಮಾರ್ಗಸೂಚಿ ಪ್ರಕಟ

|
Google Oneindia Kannada News

ನವದೆಹಲಿ, ಏಪ್ರಿಲ್ 28; ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಮೇ 2ರ ಭಾನುವಾರ ಪ್ರಕಟವಾಗಲಿದೆ. ಚುನಾವಣಾ ಆಯೋಗ ಮತ ಎಣಿಕೆಗಾಗಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ರಾಜ್ಯಗಳಲ್ಲಿ ಮತದಾನ ನಡೆದಿತ್ತು. ಎಲ್ಲಾ ರಾಜ್ಯಗಳ ಮತ ಎಣಿಕೆ ಮತ್ತು ವಿವಿಧ ಉಪ ಚುನಾವಣೆಗಳ ಫಲಿತಾಂಶ ಮೇ 2ರಂದು ಘೋಷಣೆಯಾಗಲಿದೆ.

ಮೂರು ಕ್ಷೇತ್ರಗಳ ಉಪಚುನಾವಣೆ, ಶಾಂತಿಯುತ ಮತದಾನಮೂರು ಕ್ಷೇತ್ರಗಳ ಉಪಚುನಾವಣೆ, ಶಾಂತಿಯುತ ಮತದಾನ

ಮತ ಎಣಿಕೆ ಕೇಂದ್ರಕ್ಕೆ ಬರುವ ಅಭ್ಯರ್ಥಿಗಳು, ಪಕ್ಷದ ಏಜೆಂಟರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ನಗೆಟಿವ್ ವರದಿಯನ್ನು ಹೊಂದಿರಬೇಕು. ಅವರು ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿರುವುದು ಕಡ್ಡಾಯವಾಗಿದೆ.

ತಮಿಳುನಾಡು: ಕತ್ತೆಗಳ ಮೇಲೆ ಇವಿಎಂ, ವಿವಿಪ್ಯಾಟ್ ಸಾಗಣೆತಮಿಳುನಾಡು: ಕತ್ತೆಗಳ ಮೇಲೆ ಇವಿಎಂ, ವಿವಿಪ್ಯಾಟ್ ಸಾಗಣೆ

Candidates Agents Should Have Negative COVID Report To Enter Counting Centers

48 ಗಂಟೆ ಮೊದಲಿನ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ಹೊಂದಿರದ ಯಾವುದೇ ಅಭ್ಯರ್ಥಿ, ಏಜೆಂಟ್‌ರನ್ನು ಮತ ಎಣಿಕೆ ಕೇಂದ್ರದ ಒಳಗೆ ಬಿಡಬಾರದು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಚುನಾವಣಾ ಪೂರ್ವ ಸಮೀಕ್ಷೆಗಳದ್ದು ಸುಳ್ಳು ಪ್ರಚಾರ; ತಮಿಳುನಾಡು ಸಿಎಂಚುನಾವಣಾ ಪೂರ್ವ ಸಮೀಕ್ಷೆಗಳದ್ದು ಸುಳ್ಳು ಪ್ರಚಾರ; ತಮಿಳುನಾಡು ಸಿಎಂ

ಅಭ್ಯರ್ಥಿ ಅಥವ ಏಜೆಂಟ್ ಎರಡು ಡೋಸ್ ಕೋವಿಡ್ ವಿರುದ್ಧದ ಲಸಿಕೆ ಪಡೆದಿದ್ದರೆ ಅವರು ಸಹ ಮತ ಎಣಿಕೆ ಬರಬಹುದು. ಆದರೆ, ಲಸಿಕೆ ಪಡೆದಿದ್ದಕ್ಕೆ ಅಗತ್ಯ ದಾಖಲೆಯನ್ನು ತೋರಿಸಬೇಕಿದೆ.

ಮತ ಎಣಿಕೆ ಸಂದರ್ಭದಲ್ಲಿ ಕೇಂದ್ರ ಹೊರಗೆ ಜನರು, ಕಾರ್ಯಕರ್ತರ ಜಮಾವಣೆಯನ್ನು ನಿಷೇಧಿಸಲಾಗಿದೆ. ಐದೂ ರಾಜ್ಯಗಳಲ್ಲಿ ಮತ ಎಣಿಕೆ ಸಂದರ್ಭದಲ್ಲಿ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸೂಚಿಸಲಾಗಿದೆ.

English summary
Election commission made it mandatory for candidates and their agents to show within 48 hours negative RT-PCR test reports or complete vaccination reports to enter the counting centers on May 2nd in 5 state assembly election counting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X