ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್; ಔಷಧ ಬೆಲೆ ನಿಯಂತ್ರಣದಿಂದ 70% ಬೆಲೆ ಇಳಿಕೆ, ವಾರ್ಷಿಕ ₹2,500 ಕೋಟಿ ಉಳಿಕೆ

ನವದೆಹಲಿ: ಕೇಂದ್ರ ಸರ್ಕಾರ ದೇಶದ ಕ್ಯಾನ್ಸರ್ ರೋಗಿಗಳ ಸುಮಾರು ವಾರ್ಷಿಕ ಸುಮಾರು 2500 ಕೋಟಿ ರೂಪಾಯಿ ಉಳಿತಾಯವಾಗುವ ಸಾಧ್ಯತೆ ಇದೆ. ನಿಗದಿತವಲ್ಲದ (non-scheduled) ಕ್ಯಾನ್ಸರ್ ವಿರೋಧಿ ಔಷಧಗಳ ಪೂರೈಕೆ ಮತ್ತು ಮಾರಾಟದಲ್ಲಿ ವಿಧಿಸಲಾಗುವ ಲಾಭಕ್ಕೆ ಕೇಂದ್ರವು ಶೇ.30ರ ಮಿತಿ ನಿಗದಿಪಡಿಸಿದೆ. ಇದರಿಂದ ಕ್ಯಾನ್ಸರ್ ಔಷಧಿಗಳ ಬೆಲೆಗಳು ಶೇ.70ರಷ್ಟು ಇಳಿಕೆ ಆಗಲಿದ್ದು, ವಾರ್ಷಿಕ ಸಾವಿರಾರು ಕೋಟಿ ರೂಪಾಯಿ ಉಳಿಕೆ ಆಗಲಿದೆ.

ಈ ಲಾಭದ ಮಿತಿಯನ್ನು ಗರಿಷ್ಠ ಚಿಲ್ಲರೆ ಬೆಲೆಯ (MRP) ಶೇಕಡಾ 30 ಕ್ಕೆ ಸೀಮಿತಗೊಳಿಸಲಾಗುತ್ತದೆ. ಈ ನಿಯಮವು ಜನರಿಕ್, ಬ್ರಾಂಡೆಡ್ ಔಷಧಿಗಳಿಗೆ ಅನ್ವಯವಾಗುತ್ತದೆ. ಮೆಡಿಷನ್ ಬೆಲೆ ಇಳಿಕೆಯಾದರೆ ರೋಗಿಗಳು ತಮ್ಮ ಜೇಬಿನಿ ಖರ್ಚು ಮಾಡುವುದು ಕಡಿಮೆ ಆಗುತ್ತದೆ. ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಔಷಧಿಗಳ ಬೆಲೆ ಭಾರೀ ಇಳಿಕೆ ಆಗಲಿವೆ.

Cancer Drug

ನಿಗದಿತ ಪಟ್ಟಿಯಲ್ಲಿ ಸೇರಿಸಲಾದ ಅಗತ್ಯ ಕ್ಯಾನ್ಸರ್ ಔಷಧಗಳು ಈಗಾಗಲೇ ಸರ್ಕಾರ ನಿಗದಿಪಡಿಸಿದ ಕಟ್ಟುನಿಟ್ಟಾದ ಗರಿಷ್ಠ ಬೆಲೆಗೆ ಒಳಪಟ್ಟಿವೆ. ಹೊಸ ನಿರ್ಧಾರವು ಆ ಪಟ್ಟಿಯಿಂದ ಹೊರಗಿರುವ, ನಿಗದಿತವಲ್ಲದ ಕ್ಯಾನ್ಸರ್ ಔಷಧಗಳಿಗೆ ರೋಗಿಗಳನ್ನು ತಲುಪುವ ಮೊದಲು ಸೇರಿಸಲಾಗುವ ಲಾಭದ ಮಿತಿಯು ತಗ್ಗಿ, ಬೆಲೆಯಲ್ಲಿ ಇಳಿಕೆಯಾಗಲಿದೆ. ಆರೋಗ್ಯ ಸೇವೆಗಳ ನಿರ್ದೇಶನಾಲಯದ (DGHS) ಅಡಿಯಲ್ಲಿರುವ ತಜ್ಞರ ಸಮಿತಿಯು, ಈ ವ್ಯಾಪ್ತಿಗೆ ಒಳಪಡುವ ಎಲ್ಲ ವಿಧದ ಔಷಧಗಳ ಪಟ್ಟಿಯನ್ನು ಫೈನಲ್ ಮಾಡಲಿದ್ದಾರೆ. ಬಳಿಕ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರವು (NPPA) ಅಂತಿಮ ನಿರ್ಧಾರ ಕೈಗೊಂಡು, ಅಧಿಸೂಚನೆ ಹೊರಡಿಸಲಿದೆ.

ಖರೀದಿ, ಗ್ರಾಹಕರ ಮಾರಾಟ ನಡುವಿನ ಬೆಲೆ ವ್ಯತ್ಯಾಸ

ದೇಶದಲ್ಲಿ ಒಂದು ಲಕ್ಷ ಜನರಲ್ಲಿ ಅಂದಾಜು 60 ಜನರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಚಿಕಿತ್ಸೆಯು ರೋಗಿಗಳು ಮತ್ತು ಅವರ ಕುಟುಂಬಗಳ ಮೇಲೆ ಭಾರಿ ಆರ್ಥಿಕ ಹೊರೆ ಉಂಟು ಮಾಡುತ್ತಿತ್ತು. ಔಷಧಿಗಾಗಿ ಭಾರೀ ಪ್ರಮಾಣದ ಹಣ ವಿನಿಯೋಗಿಸಬೇಕಿತ್ತು. ಇನ್ನು ಮುಂದೆ ಚಿಂತೆ ತಪ್ಪಲಿದೆ. ನಿಗದಿತವಲ್ಲದ ಕ್ಯಾನ್ಸರ್ ವಿರೋಧಿ ಔಷಧಗಳು ಸರಾಸರಿ 170 ರಷ್ಟು ಇತ್ತು ಎಂದುಕೊಳ್ಳೋಣ. ಅದು ವಿವಿಧ ಸಂದರ್ಭಗಳಲ್ಲಿ ಶೇಕಡಾ 700 ಅಥವಾ ಅದಕ್ಕಿಂತ ಹೆಚ್ಚಿನ ಬೆಲೆ ತಲುಪುತ್ತಿತ್ತು. ರೋಗಿ ಅದನ್ನು ಕೊಳ್ಳುವ ಹೊತ್ತಿಗೆ ಬೆಲೆ ಮತ್ತಷ್ಟು ಹೆಚ್ಚಾಗುತ್ತಿತ್ತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಚಿಲ್ಲರೆ ಔಷಧ ಮಳಿಗೆ, ಆಸ್ಪತ್ರೆ ಔಷಧಾಲಯ, ಆನ್‌ಲೈನ್ ಫಾರ್ಮಸಿಯಲ್ಲಿ ಬೆಲೆ ಒಂದೇ ರೀತಿ ಇರದೇ ವ್ಯತ್ಯಾಸವಾಗುತ್ತಿತ್ತು.

ಬೆಲೆ ಏರಿಕೆ ಕಳವಳ

ಮಹಾರಾಷ್ಟ್ರ, ರಾಜಸ್ಥಾನ ಮತ್ತು ಕರ್ನಾಟಕ ಸೇರಿದಂತೆ ರಾಜ್ಯ ಪ್ರಾಧಿಕಾರಗಳು, ರೋಗಿಗಳು ಮತ್ತು ನಾಗರಿಕ ಸಮಾಜದೊಂದಿಗೆ, ಅತಿಯಾದ ಔಷಧ ಬೆಲೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿವೆ. ಔಷಧ ಖರೀದಿ ಬೆಲೆ ಮತ್ತು ಗ್ರಾಹಕರಿಗೆ ವಿಧಿಸುವ ಎಂಆರ್‌ಪಿ (MRP) ನಡುವಿನ ಬೃಹತ್ ಅಂತರ ಹೆಚ್ಚಿತ್ತು. ಈ ಬಗ್ಗೆ ವ್ಯಾಪಕ ಕಳವಳ ವ್ಯಕ್ತವಾದ ಬೆನ್ನಲ್ಲೆ ಲಾಭದ ಮಿತಿ ನಿಗದಿಗೆ ಸರ್ಕಾರ ಅನುಮೋದನೆ ನೀಡಿದೆ. ಶೀಘ್ರವೇ ಜಾರಿ ಆದೇಶವು ಹೊರ ಬೀಳಲಿದೆ.

ಫೆಬ್ರವರಿ 2019 ರಲ್ಲಿ, ಸರ್ಕಾರದ ನಿರ್ದೇಶನದ ಮೇರೆಗೆ, ಎನ್‌ಪಿಪಿಎ ಡ್ರಗ್ಸ್ (ಬೆಲೆ ನಿಯಂತ್ರಣ) ಆದೇಶದ, 2013 ರ ಪ್ಯಾರಾಗ್ರಾಫ್ 19 ರ ಅಡಿಯಲ್ಲಿ ಆಯ್ಕೆ ಮಾಡಿದ 42 ನಿಗದಿತವಲ್ಲದ ಕ್ಯಾನ್ಸರ್ ವಿರೋಧಿ ಔಷಧಗಳ ಮೇಲಿನ ವ್ಯಾಪಾರ ಲಾಭದ ಮಿತಿಯನ್ನು ಸೀಮಿತಗೊಳಿಸಿತು. ಆ ನಿರ್ಧಾರವು ಎಂಆರ್‌ಪಿಗಳನ್ನು ಶೇಕಡಾ 91 ರಷ್ಟು ಕಡಿಮೆ ಮಾಡಿತು, 526 ಬ್ರ್ಯಾಂಡ್‌ಗಳಲ್ಲಿ ವಾರ್ಷಿಕ ₹984 ಕೋಟಿ ಉಳಿತಾಯವಾಗಿದೆ ಎಂದು ವರದಿಯಾಗಿದೆ. ಇದು ಕ್ಯಾನ್ಸರ್ ರೋಗಿಗಳ ಮೇಲಿನ ಆರ್ಥಿಕ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡಿತು ಮತ್ತು ಅವರ ಸುಲಭ ಜೀವನಮಟ್ಟವನ್ನು ಸುಧಾರಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+