Sunny Leone: ಸನ್ನಿ ಲಿಯೋನ್ ಮಥುರಾ ಇವೆಂಟ್‌ಗೆ ಹಿಂದೂಗಳ ವಿರೋಧ, ಡಿಜೆ ಪಾರ್ಟಿ ಕ್ಯಾನ್ಸಲ್ ಆಗಿದ್ದೇಕೆ?
ನವದೆಹಲಿ: ಕೃಷ್ಣನಗರಿ ಮಥುರಾದಲ್ಲಿ ಹೊಸ ವರ್ಷಾಚರಣೆ 2026 ಮುನ್ನ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮ (ಡಿಜೆ ಪಾರ್ಟಿ) ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಇವೆಂಟ್‌ನಲ್ಲಿ ಪಾಲ್ಗೊಂಡಿದ್ದ ನಟಿ ಹಾಗೂ ರೂಪದರ್ಶಿ ಸನ್ನಿ ಲಿಯೋನ್ ಅವರಿಗೆ ಭಾರೀ ಹಿನ್ನಡೆ ಆಗಿದೆ. ಈ ಕಾರ್ಯಕ್ರಮ, ಆಯೋಜಕರ ವಿರುದ್ಧ ಹಿಂದೂಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ವಿವಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಂಗಳ ತಲುಪಿದ್ದು, ಈ ಡಿಜೆ ಪಾರ್ಟಿಗೆ ಲಕ್ಷ ಲಕ್ಷ ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ.
ಉತ್ತರ ಪ್ರದೇಶ ರಾಜ್ಯದ ಮಥುರಾದಲ್ಲಿ ಬಾಲಿವುಡ್ ನಟಿ ಮತ್ತು ರೂಪದರ್ಶಿ ಸನ್ನಿ ಲಿಯೋನ್ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಂತರ ಕೆಂಗಣ್ಣಿಗೆ ಗುರಿ ಆಯಿತು. ನಟಿಯ ಭಾಗವಹಿಸುವಿಕೆಯನ್ನು ಇಲ್ಲಿನ ಹಿಂದೂಗಳು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಮಥುರಾದ ಧಾರ್ಮಿಕ ಪ್ರತಿನಿಧಿಗಳು ಸನ್ನಿ ಲಿಯೋನ್ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಪತ್ರ ಬರೆದಿದ್ದಾರೆ. ಕಾರ್ಯಕ್ರಮ ಆಯೋಜಕರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.

ಮಥುರಾ ಪಾವಿತ್ರ್ಯತೆಗೆ ಧಕ್ಕೆ ತರಲು ಪಿತೂರಿ
ಸನ್ನಿ ಲಿಯೋನ್ ಕಾರ್ಯಕ್ರಮ ವಿರೋಧಿಸಿ ಮಥುರಾದಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಪವಿತ್ರ ಶ್ರೀ ಕೃಷ್ಣ ಜನ್ಮಭೂಮಿಯನ್ನು ಕಳಂಕಗೊಳಿಸಲು ಬಿಡುವುದಿಲ್ಲ. ಇಲ್ಲಿ ಅಶ್ಲೀಲತೆಗಳು ರಾರಾಜಿಸಲಿವೆ. ಅದಕ್ಕಾಗಿ ತಯಾರಿ ನಡೆದಿದೆ. ಕೆಲವರು ಕೃಷ್ಣ ನಗರದ ಪಾವಿತ್ರ್ಯತೆ ಕೆಡಿಸಲು ಪಿತೂರಿ ನಡೆಸುತ್ತಿದ್ದಾರೆ ಎಂದು ಅರ್ಜಿದಾರರಾದ ದಿನೇಶ್ ಫಲ್ಹಾರಿ ಮಹಾರಾಜ್ ಅವರು ದೂರಿದ್ದಾರೆ. ಈ ಕಾರ್ಯಕ್ರಮ ನಿಷೇಧಿಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಶ್ರೀ ಕೃಷ್ಣ ಪರಮಾತ್ಮನು ಸನಾತನಿಗಳಿರುವ ಈ ನಾಡಿನಲ್ಲಿ ಆಗ ರಾಸಲೀಲೆ ಪ್ರದರ್ಶಿಸಿದ್ದನು. ಪ್ರಪಂಚದಾದ್ಯಂತದ ಭಕ್ತರು ಪೂಜೆಗಳನ್ನು ಮಾಡಲು ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಇಲ್ಲಿಗೆ ಬರುತ್ತಾರೆ. ಇಂತಹ ಸ್ಥಳದಲ್ಲಿ ಹೊಸ ವರ್ಷದ ನೆಪವೊಡ್ಡಿ ನಟಿ ಸನ್ನಿ ಲಿಯೋನ್ ಮಥುರಾದ ಲಲಿತಾ ಮೈದಾನ ಮತ್ತು ಹೋಟೆಲ್ ಡಾ ಟ್ರಕ್‌ನಲ್ಲಿ ಸಂಗೀತ ಪ್ರದರ್ಶನ ನೀಡಲಿದ್ದಾರೆ. ಇದಕ್ಕೆ ನಾವು ಒಪ್ಪುವುದಿಲ್ಲ ಎಂದು ಅವರು ಕಿಡಿ ಕಾರಿದ್ದಾರೆ.
ವಿರೋಧ ಬೆನ್ನಲ್ಲೆ ಡಿಜೆ ಪಾರ್ಟಿ ಕ್ಯಾನ್ಸಲ್
"ಇಂತಹ ಕಾರ್ಯಕ್ರಮ ಆಯೋಜನೆ ಮೂಲಕ ಇಲ್ಲಿನ ಪವಿತ್ರ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸಲು ಹಾಗೂ ಧಾರ್ಮಿಕ ನಗರದ ಹೆಸರಿಗೆ ಕಳಂಕ ತರಲು ಪ್ರಯತ್ನಿಸಿದ್ದಾರೆ. ಈ ಕಾರ್ಯಕ್ರಮ ನಿಷೇಧಿಸುವ ಜೊತೆಗೆ ಆಯೋಜಕರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದರು.ಇದೆಲ್ಲ ಬೆಳವಣಿಗೆ ಮಧ್ಯ ಈ ಡಿಜಿ ಪಾರ್ಟಿ ಕ್ಯಾನ್ಸಲ್ ಆಗಿದ್ದು, ಸಾಮಾಜಿಕ ಜಾಲತಾಣದ ಮೂಲಕ ನಟಿ ಸನ್ನಿಲಿಯೋನ್ ಕಾರ್ಯಕ್ರಮದ ಪ್ರಚಾರ ಮುಂದುವರಿಸಿದ್ದಾರೆ.
ಮರೆಯಲಾಗದ ರಾತ್ರಿ ಕಳೆಯುವ ಮೂಲಕ ಹೊಸ ವರ್ಷಾಚರಣೆ ನಡೆಸುವುದು, ಸಂಗೀತ ರಾತ್ರಿಯಲ್ಲಿ ಹೆಜ್ಜೆ ಹಾಕುವ ಬಗ್ಗೆ ನಟಿ ಪ್ರಚಾರ ನಡೆಸಿದ್ದರು. ಈ ಕಾರ್ಯಕ್ರಮಕ್ಕೆ 300 ಜನರಿಗೆ ಅವಕಾಶ ನೀಡಲಾಗಿತ್ತು. ಇದರ ಟಿಕೆಟ್ ದರ ₹20,000 ರಿಂದ ₹2 ಲಕ್ಷವರೆಗೆ ವಿಂಗಡಿಸಲಾಗಿದೆ.
In #UttarPradesh’s #Mathura, priests have begun opposing a proposed event in which #SunnyLeone is scheduled to perform at a hotel in the city on #NewYear’s Eve. pic.twitter.com/5GezSvQr6Z
— Hate Detector 🔍 (@HateDetectors) December 30, 2025
ವರದಿಗಳ ಪ್ರಕಾರ ನಾಲ್ಕು ವಿಧದ ಟಿಕೆಟ್‌ಗಳು
* ಹಾಟ್- ₹2 ಲಕ್ಷ
* ಕಬಾನಾ (ಪ್ರೈವೇಟ್ ರೆಸ್ಟಿಂಗ್ ಸ್ಪಾಟ್)- ₹1 ಲಕ್ಷ
* ಹೈ ಟೆರೇಸ್ ಸಿಟ್ಟಿಂಗ್- ₹60,000
* ಸ್ಟ್ಯಾಡಿಂಗ್- ₹20,000 ರೂಪಾಯಿ ಟಿಕೆಟ್ ದರ ನಿಗದಿ ಪಡಿಸಲಾಗಿತ್ತು. ಹಿಂದೂಗಳ ವಿರೋಧ, ವ್ಯಾಪಕ ಪ್ರತಿಭಟನೆ ಬೆನ್ನಲ್ಲೆ ಕಾರ್ಯಕ್ರಮ ರದ್ದಾಗಿದ್ದು, ನಟಿ ಸನ್ನಿ ಲಿಯೋನ್‌ಗೆ ಹಿನ್ನಡೆ ಆಗಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications