ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆ ಉಪಾಧ್ಯಕ್ಷರ ಆಯ್ಕೆ ಕುತೂಹಲ!

ನವದೆಹಲಿ, ಜುಲೈ 17: ಸಂಸತ್ತಿನಲ್ಲಿ ಮುಂಗಾರು ಅಧಿವೇಶನದಲ್ಲಿ ಪ್ರಮುಖ ಐದು ಮಸೂದೆಗಳನ್ನು ಮಂಡಿಸಲು ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಮುಂದಾಗಿದೆ. ಇದಲ್ಲದೆ ರಾಜ್ಯಸಭೆ ಉಪಾಧ್ಯಕ್ಷರ ಆಯ್ಕೆ ಹೊಣೆಯನ್ನು ಎನ್ಡಿಎ ಹೊತ್ತುಕೊಂಡಿದೆ.

ಡಿಸೆಂಬರ್ 17, 1969 ರಿಂದ ಏಪ್ರಿಲ್ 1, 1972ರ ಅವಧಿಯಲ್ಲಿ ಬಿಡಿ ಖೋಬ್ರಾಗಡೆ(ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ) ಅವರು ಉಪಾಧ್ಯಕ್ಷರಾಗಿದ್ದು ಬಿಟ್ಟರೆ, ಕಾಂಗ್ರೆಸ್ ಅಭ್ಯರ್ಥಿಗೆ ಉಪಾಧ್ಯಕ್ಷ ಸ್ಥಾನ ಲಭಿಸುತ್ತಾ ಬಂದಿದೆ.

ಆದರೆ, ರಾಜ್ಯಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿಗೆ ಈಗ ಸಂಖ್ಯಾಬಲದ ಪ್ರಭಾವದಿಂದ ಗೆಲ್ಲುವ ಹುಮ್ಮಸ್ಸಿನಲ್ಲಿದ್ದರೂ, ಒಂದೆರಡು ಸಣ್ಣಪುಟ್ಟ ಪಕ್ಷಗಳ ಬೆಂಬಲ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬಿಜೆಡಿ ಅಥವಾ ಎಐಎಡಿಎಂಕೆ ಬೆಂಬಲದ ನಿರೀಕ್ಷೆಯಿದೆ.

Can BJP elect its candidate at Rajya Sabha deputy chairman: Here are the numbers

ಗೆಲ್ಲಲು ಎಷ್ಟು ಮತ ಬೇಕು?: 244 ಸಂಖ್ಯಾಬಲದ ಸದನದಲ್ಲಿ ಅಭ್ಯರ್ಥಿಯು ಗೆಲ್ಲಲು 123 ಮತಗಳು ಬೇಕಾಗುತ್ತದೆ. ಬಿಹಾರದ ಒಂದು ಸ್ಥಾನ ಖಾಲಿ ಇದೆ.

ಬಿಜೆಪಿ 71 ಸಂಖ್ಯಾಬಲ ಹೊಂದಿದ್ದು ಹಾಗೂ ಮಿತ್ರಪಕ್ಷಗಳ ನೆರವಿನಿಂದ 115 ಸಂಖ್ಯೆ ತಲುಪಬಹುದಾಗಿದೆ. ಹೀಗಾಗಿ, ಎಐಎಡಿಎಂಕೆಯ 13 ಸದಸ್ಯರ ಬೆಂಬಲದ ನಿರೀಕ್ಷೆಯಿದೆ. ಇದಲ್ಲದೆ, ಬಿಜೆಡಿಯ 9 ಸದಸ್ಯರ ನೆರವು ಸಿಕ್ಕರೆ, ಬಿಜೆಪಿ ಅಭ್ಯರ್ಥಿಗೆ ಜಯ ಲಭಿಸಲಿದೆ.

ತೆಲುಗು ದೇಶಂ ಪಾರ್ಟಿ 6 ಜನ ಸದಸ್ಯರನ್ನು ಹೊಂದಿದ್ದು, ಈಗ ಎನ್ಡಿಎ ಮೈತ್ರಿಕೂಟದಿಂದ ದೂರಾಗಿದ್ದು, ವಿಪಕ್ಷಗಳು ಟಿಡಿಪಿ ಬೆಂಬಲದ ನಿರೀಕ್ಷೆಯಲ್ಲಿದ್ದು, 117 ಮತಗಳನ್ನು ಹೊಂದಲಿದೆ.

ಟಿಎಂಸಿಯ ಸುಖೆಂದು ಶೇಖರ್ ರಾಯ್ ಅವರ ಜತೆ ಮಾತು ಕತೆ ನಡೆಸಿರುವ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಕೂಟ, ಸಿಪಿಐ (ಎಂ) ಕೂಡಾ ಬೆಂಬಲದ ನಿರೀಕ್ಷೆಯಿದೆ.

BJP 71
JD(U) 06
SAD 03
Shiv Sena 03
BDF 01
NPF 01
Republican Party of India (A) 01
Sikkim Democratic Front 01
Congress 50
DMK 04
IUML 01
JD(S) 01
Kerala Congress (M) 01
RJD 05
INLD 01
AIADMK 13
TMC 13
SP 13
BJD 09
TDP 06
TRS 06
CPI(M) 05
BSP 04
NCP 04
AAP 03
CPI 03
PDP 02
YSR Congress 02
Nominated members 06
Independents 06
Total 245
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+