ತೆರಿಗೆ ಕಳ್ಳರಿಗೆ ಕಡಿವಾಣ, 'ಆಪರೇಷನ್ ಕ್ಲೀನ್ ಮನಿ' ವೆಬ್ಸೈಟಿಗೆ ಚಾಲನೆ

Subscribe to Oneindia Kannada

ನವದೆಹಲಿ, ಮೇ 16: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ 'ಆಪರೇಷನ್ ಕ್ಲೀನ್ ಮನಿ' ವೆಬ್ಸೈಟಿಗೆ ಚಾಲನೆ ನೀಡಿದ್ದಾರೆ. ಈ ವೆಬ್ಸೈಟಿನಲ್ಲಿ ತೆರಿಗೆ ಕಳ್ಳರಿಗೆ ರೇಟಿಂಗ್ ನೀಡಲಾಗುತ್ತದೆ. ಕಾಳ ಧನ ವಿರುದ್ಧ ಹೋರಾಡುವ ಉದ್ದೇಶದಿಂದ ಈ ವೆಬ್ಸೈಟಿಗೆ ಚಾಲನೆ ನೀಡಲಾಗಿದೆ.

ಈ ವೆಬ್ಸೈಟಿನಲ್ಲಿ ಸರಕಾರ ಯಾರ ಮೇಲೆಲ್ಲಾ ದಾಳಿ ನಡೆಸಿದೆಯೋ ಆ ಎಲ್ಲಾ ವಿವರಗಳನ್ನು ಇಲ್ಲಿ ಪ್ರಕಟಿಸಲಿದೆ. ಜತೆಗೆ 'ತುಂಬಾ ಅಪಾಯಕಾರಿ'ಯಿಂದ 'ತುಂಬಾ ಕಡಿಮೆ ಅಪಾಯಕಾರಿ'ವರೆಗೆ ಅವರನ್ನೆಲ್ಲಾ ಇಲ್ಲಿ ಪಟ್ಟಿ ಮಾಡಲಿದೆ.

 Campaign against black money, Arun Jaitley launched website 'Operation Clean Money’

"ಟ್ಯಾಕ್ಸ್ ಕಟ್ಟದಿರುವವರನ್ನು ತೆರಿಗೆ ಕಟ್ಟುವಂತೆ ಬದಲಾಯಿಸಬೇಕು. ಇದೇ ನಮ್ಮ ಉದ್ದೇಶ" ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿಯ ಅಧ್ಯಕ್ಷ ಸುಶೀಲ್ ಚಂದ್ರ ವೆಬ್ಸೈಟ್ ಉದ್ಘಾಟನೆ ವೇಳೆ ಹೇಳಿದ್ದಾರೆ.

ಇದೇ ವೆಬ್ಸೈಟಿನಲ್ಲಿ ಬೇರೆ ಬೇರೆ ಕಾನೂನು ಉಲ್ಲಂಘನೆಗಳಿಗೆ ಶಿಕ್ಷೆಯ ಪ್ರಮಾಣಗಳನ್ನೂ ಪ್ರಕಟಿಸಲಾಗುತ್ತದೆ. ತುಂಬಾ ಅಪಾಯಕಾರಿ, ಸಾಧಾರಣ ಅಪಾಯಕಾರಿ, ಕಡಿಮೆ ಅಪಾಯಕಾರಿ, ತುಂಬಾ ಕಡಿಮೆ ಅಪಾಯಕಾರಿ ಎಂದು ತೆರಿಗೆ ಕಳ್ಳರಿಗೆ ನಾಲ್ಕು ರೇಟಿಂಗ್ ನೀಡಲಾಗುತ್ತದೆ.

 Campaign against black money, Arun Jaitley launched website 'Operation Clean Money’

ಮೂಲಗಳ ಪ್ರಕಾರ ತುಂಬಾ ಅಪಾಯಕಾರಿಯಾದ ವ್ಯಕ್ತಿಗಳು ಜಪ್ತಿ, ಮನೆ ಮೇಲೆ ದಾಳಿ, ವಿಚಾರಣೆಗಳನ್ನು ಎದುರಿಸಬೇಕಾಗಿ ಬರಬಹುದು.

ಇನ್ನು ಸಾಧಾರಣ ಅಪಾಯಕಾರಿಗಳಿಗೆ ಎಸ್ಎಂಎಸ್ ಅಥವಾ ಇ-ಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ. ಇನ್ನು ಕಡಿಮೆ ಮತ್ತು ತುಂಬಾ ಕಡಿಮೆ ಟ್ಯಾಕ್ಸ್ ಕಳ್ಳರ ವಿರುದ್ಧ ಕಣ್ಣಿಡಲಾಗುತ್ತದೆ. ಮತ್ತು ಈ ರೀತಿ ಕಣ್ಣಿಟ್ಟಿರುವವ ಮಾಹಿತಿಯನ್ನು ವೆಬ್ಸೈಟಿನಲ್ಲಿ ಪ್ರಕಟಿಸುವುದಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Union Finance Minister Arun Jaitley launched a website 'Operation Clean Money', in campaign against black money. In this website tax defaulters to be rated.
Please Wait while comments are loading...