ಮೋದಿ ಸರ್ಕಾರದಿಂದ 10 ಕೋಟಿ ಕುಟುಂಬಗಳಿಗೆ ಆರೋಗ್ಯ ವಿಮೆ
ನವದೆಹಲಿ, ಮಾರ್ಚ್ 22: ದೇಶದ ಸುಮಾರು 10 ಕೋಟಿಗೂ ಅಧಿಕ ಕುಟುಂಬಗಳಿಗೆ 5 ಲಕ್ಷ ರೂ.ಗಳ ಆರೋಗ್ಯ ವಿಮೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಮಹತ್ವಾಕಾಂಕ್ಷಿ ಯೋಜನೆ ಆಯುಷ್ಮಾನ್ ಭಾರತ್ ಗೆ ಕೇಂದ್ರ ಸಂಪುಟ ಬುಧವಾರದಂದು ಒಪ್ಪಿಗೆ ನೀಡಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
Ayushman Bharat-National Health Protection Mission (AB-NHPM) ಯೋಜನೆಯಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಜಾತಿ ಸಮೀಕ್ಷೆಯ ಆಧಾರದ ಮೇಲ 10 ಕೋಟಿ ಬಡ ಕುಟುಂಬಗಳನ್ನು ಗುರುತಿಸಿ ಅವರಿಗೆ ಆರೋಗ್ಯ ವಿಮೆ ನೀಡಲಾಗುತ್ತದೆ.
ಈಗಿರುವ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ (RSBY) ನಲ್ಲಿ 30 ಸಾವಿರ ರೂ.ಗಳ ವಿಮೆ ಮಾತ್ರ ನೀಡಲಾಗುತ್ತಿದೆ. ನೂತನ ಯೋಜನೆಯಲ್ಲಿ RSBY ಅಲ್ಲದೇ ಹಿರಿಯ ನಾಗರಿಕರ ಆರೋಗ್ಯ ವಿಮಾ ಯೋಜನೆಯನ್ನೂ ಸಹ ವಿಲೀನಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಯೋಜನೆ ಯಾವಾಗ ಜಾರಿಗೆ ತರಲಾಗುವುದು ಎಂಬುದನ್ನು ಸರ್ಕಾರ ಪ್ರಕಟಿಸಿಲ್ಲ. ಆದರೆ, ಆಗಸ್ಟ್ 15ರಂದು ಈ ಯೋಜನೆ ಜಾರಿಗೆತರಲಾಗುವುದು ಎನ್ನಲಾಗುತ್ತಿದೆ.
ಈ ಯೋಜನೆಯಿಂದ ಯಾರೂ ಹೊರಗುಳಿಯಬಾರದು ಎಂದು ಕುಟುಂಬದ ಗಾತ್ರದ ಮೇಲೆ ಯಾವುದೇ ಸಂಖ್ಯಾಮಿತಿ ಹೇರಲಾಗಿಲ್ಲ.
Working steadfastly towards quality and affordable healthcare for the poor, neo-middle class and middle class. https://t.co/832yEM4hyH
— Narendra Modi (@narendramodi) March 21, 2018
via NMApp
ಆಸ್ಪತ್ರೆ ಪೂರ್ವ ಹಾಗೂ ಆಸ್ಪತ್ರೆಗೆ ದಾಖಲಾದ ನಂತರದ ಖರ್ಚುಗಳೆರಡನ್ನೂ ಸಹ ಈ ಯೋಜನೆಯಡಿ ಭರಿಸಲಾಗುವುದು. ಪ್ರಸಕ್ತ ಇರುವ ಬಹುತೇಕ ವಿಮೆಗಳು, ವಿಮಾ ಪೂರ್ವ ಇರುವ ಆರೋಗ್ಯ ಪರಿಸ್ಥಿತಿಗಳಿಗೆ ನೆರವಾಗುವುದಿಲ್ಲ. ಒಟ್ಟಾರೆ, ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 20 ರಿಂದ 25 ಸಾವಿರ ಕೋಟಿ ರುಗಳ ಹೆಚ್ಚುವರಿ ಹೊರೆ ಬೀಳಲಿದೆ.












Click it and Unblock the Notifications