ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ 2022: ಕ್ಷೇತ್ರವಾರು ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ

|
Google Oneindia Kannada News

ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣಾ ಫಲಿತಾಂಶದೊಂದಿಗೆ ಕಳೆದ ದಿನ ಆರು ವಿಧಾನಸಭೆ ಕ್ಷೇತ್ರಗಳು ಮತ್ತು ಒಂದು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಲೋಕಸಭಾ ಕ್ಷೇತ್ರವಾದ ಮೈನ್‌ಪುರಿ, ಉತ್ತರ ಪ್ರದೇಶದ ರಾಂಪುರ ಮತ್ತು ಖತೌಲಿ, ರಾಜಸ್ಥಾನದ ಸರ್ದರ್ಶಹರ್, ಒಡಿಶಾದ ಪದಂಪುರ, ಬಿಹಾರದ ಕುರ್ಹಾನಿ ಮತ್ತು ಛತ್ತೀಸ್‌ಗಢದ ಭಾನುಪ್ರತಾಪುರ್ ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆಯ ಫಲಿತಾಂಶ ಬಿಡುಗಡೆಯಾಗಿದೆ. ಬೈಪೋಲ್ ಚುನಾವಣಾ ಫಲಿತಾಂಶ 2022 ವಿಜೇತರ ಸಂಪೂರ್ಣ ಪಟ್ಟಿಯನ್ನು ನೋಡುವುದಾದರೆ-

ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲಿ ಕೂಡ ಅಧಿಕಾರಕ್ಕೆ ತರುತ್ತೇವೆ ಎಂದ ಸುನೀಲ್ ಕುಮಾರ್ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲಿ ಕೂಡ ಅಧಿಕಾರಕ್ಕೆ ತರುತ್ತೇವೆ ಎಂದ ಸುನೀಲ್ ಕುಮಾರ್

ಆರು ಅಸೆಂಬ್ಲಿ ಸ್ಥಾನಗಳು ಮತ್ತು ಮೈನ್‌ಪುರಿ ಲೋಕಸಭಾ ಕ್ಷೇತ್ರದ ಮತಗಳ ಎಣಿಕೆ ನಿನ್ನೆ (ಡಿಸೆಂಬರ್ 8) ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಯಿತು. ಅಕ್ಟೋಬರ್‌ನಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ನಿಧನದಿಂದ ಉತ್ತರ ಪ್ರದೇಶದ ಮೈನ್‌ಪುರಿ ಕ್ಷೇತ್ರದಲ್ಲಿ ಉಪಚುನಾವಣೆ ನಡೆದಿತ್ತು.

ಬಿಜೆಪಿ ವಿರುದ್ಧ ಡಿಂಪಲ್ ಯಾದವ್‌ಗೆ ಜಯ

ಬಿಜೆಪಿ ವಿರುದ್ಧ ಡಿಂಪಲ್ ಯಾದವ್‌ಗೆ ಜಯ

ಫಲಿತಾಂಶದ ವೇಳೆ ಮೈನ್‌ಪುರಿಯಲ್ಲಿ ಸಮಾಜವಾದಿ ಪಕ್ಷ ಬಿಜೆಪಿಯೊಂದಿಗೆ ತನ್ನ ಪ್ರತಿಷ್ಠೆಯ ಹೋರಾಟವನ್ನು ನಡೆಸಿತು. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್ ಅವರ ಹಿರಿಯ ಸೊಸೆ ಮತ್ತು ಬಿಜೆಪಿಯ ರಘುರಾಜ್ ಸಿಂಗ್ ಶಾಕ್ಯಾ ನಡುವೆ ಕಠಿಣ ಸ್ಪರ್ಧೆ ನಡೆಯಿತು. ಮೈನ್‌ಪುರಿ ಉಪಚುನಾವಣೆಯಲ್ಲಿ ಎಸ್‌ಪಿ ಅಭ್ಯರ್ಥಿ ಡಿಂಪಲ್ ಯಾದವ್ ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ರಘುರಾಜ್ ಸಿಂಗ್ ಶಾಕ್ಯಾ ಅವರನ್ನು 2,88,461 ಮತಗಳಿಂದ ಸೋಲಿಸಿದರು.

'ಕೈ' ಹಿಡಿದ ಸರ್ದರ್ಶಹರ್ ಮತದಾರರು

'ಕೈ' ಹಿಡಿದ ಸರ್ದರ್ಶಹರ್ ಮತದಾರರು

ಕಾಂಗ್ರೆಸ್‌ನ ಅನಿಲ್ ಶರ್ಮಾ ಅವರು ಪ್ರತಿಸ್ಪರ್ಧಿಗಿಂತ 26,852 ಮತಗಳ ಮುನ್ನಡೆ ಸಾಧಿಸಿ ಸರ್ದರ್ಶಹರ್ ವಿಧಾನಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ರಾಂಪುರದಲ್ಲಿ ಎಸ್‌ಪಿಯ ಅನುಭವಿ ಅಜಂ ಖಾನ್‌ ಅವರನ್ನು ಹಿಂದಿಕ್ಕಿ ಬಿಜೆಪಿ ಅಭ್ಯರ್ಥಿ ಆಕಾಶ್ ಸಕ್ಸೇನಾ 3 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಬಿಹಾರದ ಆಡಳಿತಾರೂಢ ಮಹಾಘಟಬಂಧನ್‌ನಿಂದ ಕುರ್ಹಾನಿ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ಗುರುವಾರ ವಶಪಡಿಸಿಕೊಂಡಿತು. ಅಲ್ಲಿ ಅದರ ಅಭ್ಯರ್ಥಿ ಕೇದಾರ್ ಪ್ರಸಾದ್ ಗುಪ್ತಾ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯುನ ಮನೋಜ್ ಸಿಂಗ್ ಕುಶ್ವಾಹಾ ಅವರನ್ನು 3,645 ಮತಗಳಿಂದ ಸೋಲಿಸಿದರು.

ಕ್ಷೇತ್ರವಾರು ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ-

ಕ್ಷೇತ್ರವಾರು ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ-

*ಮೈನ್‌ಪುರಿ ಲೋಕಸಭಾ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಡಿಂಪಲ್ ಯಾದವ್ ಗೆಲುವು ಸಾಧಿಸಿದ್ದಾರೆ

*ರಾಂಪುರ ವಿಧಾನಸಭಾ ಉಪಚುನಾವಣೆ ಫಲಿತಾಂಶ - ಬಿಜೆಪಿಯ ಆಕಾಶ್ ಸಕ್ಸೇನಾ ಗೆಲುವು

*ಖತೌಲಿ ವಿಧಾನಸಭಾ ಉಪಚುನಾವಣೆ ಫಲಿತಾಂಶ - ಆರ್‌ಜೆಡಿಯ ಮದನ್ ಭಯ್ಯಾ ಗೆಲುವು

*ಸರ್ದರ್ಶಹರ್ ವಿಧಾನಸಭಾ ಉಪಚುನಾವಣೆ ಫಲಿತಾಂಶ - ಕಾಂಗ್ರೆಸ್‌ನ ಅನಿಲ್ ಕುಮಾರ್ ಗೆಲುವು

*ಪದಂಪುರ ವಿಧಾನಸಭಾ ಉಪಚುನಾವಣೆ ಫಲಿತಾಂಶ - ಬಿಜೆಡಿಯ ಬರ್ಶಾ ಸಿಂಗ್ ಗೆಲುವು

*ಕುರ್ಹಾನಿ ವಿಧಾನಸಭಾ ಉಪಚುನಾವಣೆ ಫಲಿತಾಂಶ - ಬಿಜೆಪಿಯ ಕೇದಾರ್ ಪ್ರಸಾದ್ ಗುಪ್ತಾ ಗೆಲುವು

*ಭಾನುಪ್ರತಾಪುರ್ ವಿಧಾನಸಭಾ ಉಪಚುನಾವಣೆ ಫಲಿತಾಂಶ - ಕಾಂಗ್ರೆಸ್‌ನ ಸಾವಿತ್ರಿ ಮಾಂಡವಿ ಗೆಲುವು

ಆರ್‌ಜೆಡಿ ಬಿಜೆಡಿ ತಲಾ ಒಂದು

ಆರ್‌ಜೆಡಿ ಬಿಜೆಡಿ ತಲಾ ಒಂದು

ಆರಂಭದಲ್ಲಿ ಕುರ್ಹಾನಿಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು. ಬಿಹಾರದ ಉಪಚುನಾವಣೆಯಲ್ಲಿ ಇದು ನೆಕ್ ಟು ನೆಕ್ ಪೈಪೋಟಿಯಾಗಿತ್ತು. 21ನೇ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ 70789 ಮತಗಳನ್ನು ಗಳಿಸಿದರೆ ಜೆಡಿಯು 69022 ಮತಗಳನ್ನು ಗಳಿಸಿತ್ತು. ಬಳಿಕ ಬಿಜೆಪಿಯ ಕೇದಾರ್ ಪ್ರಸಾದ್ ಗುಪ್ತಾ ಗೆಲುವು ಸಾಧಿಸಿದರು. ಒಟ್ಟಿನಲ್ಲಿ ಏಳು ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವನ್ನು ಸಮಾಜವಾದಿ ಪಕ್ಷ ಪಡೆದುಕೊಂಡರೆ, ಎರಡು ಸ್ಥಾನವನ್ನು ಬಿಜೆಪಿ ಪಡೆದುಕೊಂಡಿದೆ, ಕಾಂಗ್ರೆಸ್ ಎರಡು, ಆರ್‌ಜೆಡಿ ಒಂದು, ಬಿಜೆಡಿ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.

English summary
Assembly constituencies by-election result 2022: Constituency wise complete list of winners is here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X