67 ವರ್ಷಗಳ ನಂತರ ನನಸಾಯ್ತು ಕನಸು; ದೇವಸ್ಥಾನಕ್ಕೆ ಬೆಳ್ಳಿ ಪೆಟ್ರೋಲ್ ಪಂಪ್ ಯಂತ್ರ ನೀಡಿದ ಉದ್ಯಮಿ
ರಾಜಸ್ಥಾನದ ಪ್ರಸಿದ್ಧ ಸನ್ವಾಲಿಯಾ ಸೇಠ್ ದೇವಾಲಯದಲ್ಲಿ ಇತ್ತೀಚೆಗೆ ನಡೆದ ಒಂದು ವಿಶೇಷ ಘಟನೆ ಎಲ್ಲರ ಗಮನ ಸೆಳೆದಿದೆ. 67 ವರ್ಷಗಳ ನಂತರ ಕನಸು ನನಸಾಯಿತು ಎಂದು ಒಬ್ಬ ಯಶಸ್ವೀ ಉದ್ಯಮಿ, ದೇವರ ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ, ದೇವಾಲಯಕ್ಕೆ ಬೆಳ್ಳಿಯಿಂದ ತಯಾರಿಸಿದ ಇಂಧನ ಯಂತ್ರದ ಪ್ರತಿಮೆಯನ್ನು ಅರ್ಪಿಸಿದರು.
ಈ ಉದ್ಯಮಿಗೆ ತನ್ನ ವ್ಯವಹಾರದಲ್ಲಿ ಯಶಸ್ಸು ದೊರಕಿದ ನಂತರ, ದೇವರ ಅನುಗ್ರಹಕ್ಕೆ ಧನ್ಯವಾದ ಹೇಳಬೇಕೆಂದಿದ್ದ. ಈ ದೇವಾಲಯಕ್ಕೆ ವಿಶೇಷವಾಗಿ 10 ಕಿಲೋ ಬೆಳ್ಳಿಯಿಂದ ತಯಾರಿಸಿದ ಪೆಟ್ರೋಲ್ ಪಂಪ್ ರೂಪದ ಯಂತ್ರವನ್ನು ತಂದು ಅರ್ಪಿಸಿದರು. ಡಂಗ್ಲಾದ ಉದ್ಯಮಿ ಮಂಗಿಲಾಲ್ ಜರೋಲಿ ಅವರು ತಮ್ಮ ದಶಕಗಳ ಹಳೆಯ ಆಸೆ ಈಡೇರಿದ ನಂತರ, ಅಪರೂಪದ ಪೆಟ್ರೋಲ್ ಪಂಪ್ ಅನ್ನು ಕಾಣಿಕೆಯಾಗಿ ನೀಡಿದರು. ಇದರ ಜೊತೆಗೆ, ಕುಟುಂಬವು ದೇವರಿಗೆ ಕೃತಜ್ಞತೆಯ ಸೂಚಕವಾಗಿ 56 ಆಹಾರ ನೈವೇದ್ಯಗಳು ಅರ್ಪಿಸಲಾಯಿತು.

1958 ರಲ್ಲೇ ಪೆಟ್ರೋಲ್ ಪಂಪ್ ಹೊಂದುವ ಕನಸು ಕಂಡಿದ್ದಾಗಿ ಮಂಗಿಲಾಲ್ ಹಂಚಿಕೊಂಡರು. ಆದರೆ, ಜನವರಿ 6 ರಂದು ಬಾಡಿ ಸದ್ರಿ ಪ್ರದೇಶದಲ್ಲಿ ಶ್ರೀ ಸನ್ವಾಲಿಯಾ ಸೇಠ್ ಫಿಲ್ಲಿಂಗ್ ಸ್ಟೇಷನ್ ಉದ್ಘಾಟನೆಯಾಗಿದೆ. 1958 ರ ಕನಸು 2025 ರಲ್ಲಿ ಕನಸು ನನಸಾಯಿತು. ಈ ವಿಶೇಷ ಕ್ಷಣವನ್ನು ಹಂಚಿಕೊಳ್ಳಲು, ಇಡೀ ಜರೋಲಿ ಕುಟುಂಬವು ತಮ್ಮನ್ನು ಆಶೀರ್ವದಿಸಿದ್ದಕ್ಕಾಗಿ ಸನ್ವಾಲಿಯಾ ಸೇಠ್ ಅವರಿಗೆ ಧನ್ಯವಾದ ಹೇಳಲು ಒಟ್ಟಾಗಿ ಸಂಭ್ರಮದಿಂದ ದೇವಸ್ಥಾನಕ್ಕೆ ಆಗಮಿಸಿದ್ದಾರೆ.
ಮಂಗಿಲಾಲ್ ಅವರ ಪುತ್ರರಾದ ಕುಶಾಲ್ ಕುಮಾರ್ ಮತ್ತು ಸುಶೀಲ್ ಕುಮಾರ್ 2024 ರಲ್ಲಿ ಪಂಪ್ ತೆರೆಯಲು ಅರ್ಜಿ ಸಲ್ಲಿಸಿದ್ದರು. ಹಲವಾರು ಆಡಳಿತಾತ್ಮಕ ಅಡೆತಡೆಗಳಿಂದಾಗಿ, ಅನುಮೋದನೆ ಪ್ರಕ್ರಿಯೆಯು ಸ್ಥಗಿತಗೊಂಡಿತು. ನಂತರ ಕುಟುಂಬವು ದೇವಾಲಯದಲ್ಲಿ ಪ್ರತಿಜ್ಞೆ ಮಾಡಿ ನಂಬಿಕೆಯನ್ನ ಇಟ್ಟಿದ್ದರು. ಅನುಮತಿ ನೀಡಿದರೆ, ಸನ್ವಾಲಿಯಾ ಸೇಠ್‌ಗೆ ಬೆಳ್ಳಿ ಪೆಟ್ರೋಲ್ ಪಂಪ್ ಪ್ರತಿಕೃತಿ ಮತ್ತು 56 ಆಹಾರ ನೈವೇದ್ಯಗಳು ನೀಡುವುದಾಗಿ ಅವರು ದೇವರಿಗೆ ಹರಕೆ ಕಟ್ಟಿಕೊಂಡಿದ್ದರು. ಇದೀಗ ಆ ಕನಸು 67 ವರ್ಷಗಳ ನಂತರ ಆ ಕನಸು ಈಡೇರಿದೆ.
ತಮ್ಮ ಹರಕೆಯನ್ನ ಪೂರೈಸಲು, ಜರೋಲಿ ಕುಟುಂಬವು ಒಂದು ಭವ್ಯ ಕಾರ್ಯಕ್ರಮವನ್ನು ಆಯೋಜಿಸಿತು. ಅವರಿ ಮಾತಾ ರಸ್ತೆಯಲ್ಲಿರುವ ಹೋಟೆಲ್‌ನಿಂದ ಕಾಣಿಕೆಗಳನ್ನು ಹೊತ್ತುಕೊಂಡು, ನೃತ್ಯ, ಸಂಗೀತ ಮತ್ತು "ಜೈ ಸನ್ವಾಲಿಯಾ ಸೇಠ್ ಎಂಬ ಘೋಷಣೆಗಳಿಂದ ತುಂಬಿದ ಡಿಜೆ ನೇತೃತ್ವದಲ್ಲಿ ಭಕ್ತಿ ಮೆರವಣಿಗೆಯೊಂದಿಗೆ ದೇವಾಲಯವನ್ನು ತಲುಪಿದರು. ಕುಟುಂಬವು 56 ಭಕ್ಷ್ಯಗಳು ಮತ್ತು ಬೆಳ್ಳಿ ಮಾದರಿಯನ್ನು ಮರೆಯ ಮೂಲಕ ಅದ್ದೂರಿಯಾಗಿ ದೇವರ ಹರಕೆಯನ್ನ ಈಡೇರಿಸಿದ್ದಾರೆ. ಇನ್ನೂ ಈ ಅಪೂರ್ವ ಕಾಣಿಕೆಗೆ ದೇವಾಲಯದ ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿತು. ಭಕ್ತರು ಮತ್ತು ಸ್ಥಳೀಯರು ಈ ಘಟನೆಯನ್ನು ವಿಶೇಷವಾಗಿ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
-
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Rate March 23: ಚಿನ್ನ - ಬೆಳ್ಳಿ ದರ ಭಾರೀ ಕುಸಿತ: ಒಂದೇ ದಿನದಲ್ಲಿ ಶೇ. 4% ಇಳಿಕೆ, ಬಂಗಾರ ಪ್ರಿಯರಿಗೆ ಸಿಹಿ ಸುದ್ದಿ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
MT Aqua Titan: ಮಂಗಳೂರು ಕರಾವಳಿಗೆ ಆಗಮಿಸಿದ ರಷ್ಯಾದ ಕಚ್ಚಾ ತೈಲ ಹೊತ್ತ ಬೃಹತ್ ನೌಕೆ -
ಭಾರತದಲ್ಲಿ ಇಂಧನ ಭದ್ರತೆಗೆ ಒತ್ತು, ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ: ಮೋದಿ ನೇತೃತ್ವದಲ್ಲಿ ಸಭೆ, ಹಲವು ಮಹತ್ವದ ತೀರ್ಮಾನ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ












Click it and Unblock the Notifications