ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಯುಪಿಯಂತೆ ಬಂಗಾಳದಲ್ಲಿ ಬುಲ್ಡೋಜರ್‌ಗಳು ಓಡಾಡುತ್ತವೆ' ಸುವೆಂದು ಅಧಿಕಾರಿ

|
Google Oneindia Kannada News

ಉತ್ತರಪ್ರದೇಶದಂತೆ ಪಶ್ಚಿಮ ಬಂಗಾಳದಲ್ಲಿ ಬುಲ್ಡೋಜರ್‌ಗಳು ಓಡಾಡುತ್ತವೆ ಎಂದು ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ. ಇಂದು ತಮ್ಮ ತವರು ಕಂಠಿಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

'ಚುನಾವಣೆಯಲ್ಲಿ ಗೆದ್ದ ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಬಂಗಾಳದಲ್ಲಿ ರಾಷ್ಟ್ರೀಯವಾದಿ ಸರ್ಕಾರ ಬರಲಿದೆ. ಡಬಲ್ ಎಂಜಿನ್ ಸರ್ಕಾರ ಇರುತ್ತದೆ. ಉತ್ತರ ಪ್ರದೇಶದಂತೆಯೇ ಬಂಗಾಳದಲ್ಲೂ ಬುಲ್ಡೋಜರ್‌ಗಳು ಓಡುತ್ತವೆ" ಎಂದು ಅವರು ಹೇಳಿದರು. ಇತ್ತೀಚೆಗೆ ಡಿಸೆಂಬರ್ (12, 14 ಮತ್ತು 21) ಮೂರು ದಿನಾಂಕಗಳನ್ನು ಘೋಷಿಸುವ ಮೂಲಕ ಅಧಿಕಾರಿ ರಾಜ್ಯದಲ್ಲಿ ರಾಜಕೀಯ ಬದಲಾವಣೆಯ ಬಗ್ಗೆ ಸೂಚನೆಯನ್ನು ನೀಡಿದ್ದಾರೆ. ಈ ದಿನಗಳಲ್ಲಿ ದೊಡ್ಡ ಬೆಳವಣಿಗೆಗಳು ನಡೆಯಲಿವೆ ಎಂದು ಹೇಳಿದ್ದರು.

ವಿಧಾನಸಭಾ ಚುನಾವಣೆಯಲ್ಲಿ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಎಸ್‌ಡಿಪಿಐ ಸ್ಪರ್ಧೆ ವಿಧಾನಸಭಾ ಚುನಾವಣೆಯಲ್ಲಿ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಎಸ್‌ಡಿಪಿಐ ಸ್ಪರ್ಧೆ

ಕಂಠಿಯಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಸುಭೇಂದು ಅಧಿಕಾರಿ 'ನಾನು ಡಿಸೆಂಬರ್‌ನಲ್ಲಿ ಸರ್ಕಾರ ಪತನವಾಗಲಿದೆ ಎಂದು ಹೇಳಿಲ್ಲ. ಆದರೆ ನಾನು ಡಿಸೆಂಬರ್‌ನಲ್ಲಿ ಮೂರು ಪ್ರಮುಖ ದಿನಾಂಕಗಳನ್ನು ಉಲ್ಲೇಖಿಸಿದೆ. ಡಿಸೆಂಬರ್ ನಲ್ಲಿ ಮಹತ್ವದ ಬದಲಾವಣೆಯಾಗಲಿದೆ' ಎಂದು ಅವರು ಹೇಳಿದರು.

Bulldozers run around in Bengal like UP said Suvendu Adhikari

ಆಲ್ ಇಂಡಿಯಾ ತೃಣಮೂಲ ಪಕ್ಷದ ಅಧ್ಯಕ್ಷೆಯಾಗಿರುವ ಮಮತಾ ಬ್ಯಾನರ್ಜಿ ಪ್ರಸ್ತುತ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಕುದುರೆ ವ್ಯಾಪಾರ ನಡೆಸಿ ಸರ್ಕಾರ ರಚನೆ ಮಾಡಿದಂತೆ ಪಶ್ಚಿಮ ಬಂಗಾಳದಲ್ಲೂ ಇದೇ ರೀತಿ ಸರ್ಕಾರ ರಚನೆ ಮಾಡುವ ಬಿಜೆಪಿ ಹಲವಾರು ಬಾರಿ ಪ್ರಯತ್ನಿಸಿದೆ. ಈ ಬಗ್ಗೆ ಸಿಎಂ ಮಮತಾ ಬ್ಯಾನರ್ಜಿ ಕೂಡ ಕೇಂದ್ರ ತಮ್ಮನ್ನು ಗುರಿಯಾಗಿಸಿಕೊಳ್ಳುವುದರ ವಿರುದ್ಧ ಹಲವಾರು ಬಾರಿ ಆರೋಪ ಮಾಡಿದ್ದಾರೆ.

ಹೀಗಾಗಿ ಈ ಹಿಂದೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಿಜೆಪಿಯೇತರ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಬಿಜೆಪಿಯ ವಿರುದ್ಧ ಒಗ್ಗೂಡುವಂತೆ ಕರೆ ನೀಡಿದ್ದಾರೆ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಮುಂದಿನ ದಾರಿಯ ಬಗ್ಗೆ ಚರ್ಚಿಸಲು ಸಿಎಂ ಮಮತಾ ಬ್ಯಾನರ್ಜಿ ಬಿಜೆಪಿಯೇತರ ಸಿಎಂಗಳ ಸಭೆ ಕರೆದಿದ್ದರು. ದೇಶಕ್ಕೆ ಯೋಗ್ಯವಾದ ಸರ್ಕಾರಕ್ಕೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ ಒಗ್ಗಟ್ಟಿನ ವಿಪಕ್ಷದ ಉದ್ದೇಶಕ್ಕಾಗಿ ಬದ್ಧರಾಗಿರೋಣ, ಎಲ್ಲಾ ಪ್ರಗತಿಪರ ಶಕ್ತಿಗಳು ಒಂದಾಗುವುದು ಈಗಿನ ಅಗತ್ಯತೆ ಎಂದು ಬ್ಯಾನರ್ಜಿ ಹೇಳಿದ್ದರು. ಆದರೀಗ ಬಿಜೆಪಿ ವಿರುದ್ಧ ದೀದಿ ದೂರಿದಂತೆ ನಡೆಯುತ್ತಿದೆ.

English summary
Bengal opposition leader Suvendu Adhikari has warned that bulldozers will run in Bengal like Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X