Video: ವೃದ್ಧೆಯ ಮೇಲೆ ದಾಳಿ ಮಾಡಿದ ಗೂಳಿ! ಬಿಡಿಸಲು ಬಂದವರ ಮೇಲೂ ಅಟ್ಯಾಕ್- ವಿಡಿಯೋ ವೈರಲ್
ದಾರಿ ತಪ್ಪಿದ ಗೂಳಿಯೊಂದು ವೃದ್ಧೆಯ ಮೇಲೆ ದಾಳಿ ಮಾಡಿದ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ದಾರಿಯಲ್ಲಿ ತಮ್ಮ ಪಾಡಿಗೆ ತಾವು ಹೋಗುತ್ತಿದ್ದ ವೃದ್ಧೆಯ ಮೇಲೆ ಏಕಾಏಕಿ ಗೂಳಿ ದಾಳಿ ಮಾಡಿದೆ. ಇದರಿಂದಾಗಿ ವೃದ್ಧೆ ಕೆಳಗೆ ಬಿದ್ದಿದ್ದಾರೆ. ಆದರೂ ಕೂಡ ಗೂಳಿ ಬಿಡದೆ ಆಕೆಯ ಮೇಲೆ ಎರಗಿದೆ. ಈ ದೃಶ್ಯ ನೋಡುಗರನ್ನು ಬೆಚ್ಚಿಬೀಳಿಸಿದೆ.
ದೆಹಲಿಯ ಆಯಾ ವಿಹಾರ್‌ನಲ್ಲಿ ನಡೆದ ಘಟನೆ ಇದಾಗಿದೆ. ಸಿಸಿಟಿವಿ ಗೂಳಿ ದಾಳಿಯ ದೃಶ್ಯ ಸೆರೆಯಾಗಿದೆ. ಆದರೆ ಈ ವೇಳೆ ವೃದ್ಧೆ ಧೈರ್ಯಗುಂದುವುದಿಲ್ಲ. ಬದಲಿಗೆ ಧೈರ್ಯದಿಂದ ಗೂಳಿಯನ್ನು ಎದುರಿಸಿದ್ದಾಳೆ. ಈ ಘಟನೆಯು ಅಕ್ಟೋಬರ್ 30, 2024 ರಂದು ಸಂಜೆ 5.20 ರ ಸುಮಾರಿಗೆ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಮಹಿಳೆಯ ಶೌರ್ಯವನ್ನು ಕಂಡು, ಇಂಟರ್ನೆಟ್ ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ ಆಕೆಯನ್ನು ಹೊಗಳಿದ್ದಾರೆ.

ವೈರಲ್ ವೀಡಿಯೋದಲ್ಲಿ ಗುಲಾಬಿ ಬಣ್ಣದ ಸೀರೆಯನ್ನು ಧರಿಸಿರುವ ಮಹಿಳೆಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಈ ವೇಳೆ ಗೂಳಿಯೊಂದು ಅವರ ಮೇಲೆ ದಾಳಿ ಮಾಡುತ್ತದೆ. ಇದರಿಂದಾಗಿ ವೃದ್ಧೆ ಕೆಳಗೆ ಬೀಳುತ್ತಾಳೆ. ಆದರೂ ಕೂಡ ಬಿಡದ ಗೂಳಿ ತನ್ನ ಕೊಂಬುಗಳಿಂದ ಪೂರ್ಣ ಬಲದಿಂದ ಅವಳ ಮೇಲೆ ದಾಳಿ ಮಾಡುತ್ತದೆ. ಆದರೆ ವೃದ್ಧೆ ಅದರ ಕೊಂಬುಗಳನ್ನು ಹಿಡಿದು ಧೈರ್ಯದಿಂದ ಅದನ್ನು ತಡೆಯಲು ಪ್ರಯತ್ನಿಸುತ್ತಾಳೆ.
ವೃದ್ಧ ಮಹಿಳೆ ಸ್ವತಃ ಸುಮಾರು 30 ಸೆಕೆಂಡುಗಳ ಕಾಲ ಗೂಳಿಯನ್ನು ಎದುರಿಸುತ್ತಾಳೆ. ಆಗ ಸಹಾಯಕ್ಕೆ ಬಂದವರೂ ಗೂಳಿಯನ್ನು ಓಡಿಸಲು ಪ್ರಯತ್ನಿಸುತ್ತಾರೆ. ನೀಲಿ ಟೀ ಶರ್ಟ್‌ನಲ್ಲಿದ್ದ ವ್ಯಕ್ತಿ ಗೂಳಿಯ ಕೊಂಬನ್ನು ಹಿಡಿದುಕೊಳ್ಳುತ್ತಾನೆ. ಕ್ಲಿಪ್‌ನ ಕೊನೆಯಲ್ಲಿ, ಮಹಿಳೆಯೊಬ್ಬಳು ಕೋಲಿನಿಂದ ಗೂಳಿಯ ಮೇಲೆ ದಾಳಿ ಮಾಡುತ್ತಾಳೆ. ಆಗ ಅದು ಓಡಿಹೋಗುತ್ತದೆ.
ಗೂಳಿ ದಾಳಿಯ ಈ ವೀಡಿಯೊಗೆ ಬಳಕೆದಾರರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಗೂಳಿಯೊಂದಿಗೆ ಹೋರಾಡಿದ ವೃದ್ಧೆಯನ್ನು ಹೊಗಳಿದ್ದಾಳೆ. ವ್ಯಕ್ತಿಯೊಬ್ಬರು ವೃದ್ಧೆಯನ್ನು ಹೊಗಳಿ - ಆ ಮಹಿಳೆ ನಿಜವಾಗಿಯೂ ಧೈರ್ಯಶಾಲಿಯಾಗಿದ್ದಾರೆ. ಅವರು ತಕ್ಷಣ ಜಾಗರೂಕರಾದರು. ಇಲ್ಲದಿದ್ದರೆ ಈ ಗೂಳಿ ಅವರಿಗೆ ದೊಡ್ಡ ಸಮಸ್ಯೆಯನ್ನುಂಟು ಮಾಡುತ್ತಿತ್ತು' ಎಂದು ಬರೆದಿದ್ದಾರೆ. ಮತ್ತೊಬ್ಬರು ಈ ರೀತಿ ಅಲೆದಾಡುವ ಪ್ರಾಣಿಗಳಿಗೆ ಕಡಿವಾಣ ಹಾಕಬೇಕು, ಇಲ್ಲದಿದ್ದರೆ ಮೂಳೆ ಮುರಿದು ಗ್ಯಾರಂಟಿ ಎಂದು ಕಿಡಿ ಕಾರಿದ್ದಾರೆ.
ಕಾಲ್ನಡಿಗೆಯಲ್ಲಿ ಹೋಗುತ್ತಿದ್ದ ಮಹಿಳೆಯ ಮೇಲೆ ಗೂಳಿ ದಾಳಿ...
🚨हादसों का शहर!
— Delhi Complaint (@DelhiComplaint) November 5, 2024
देश की राजधानी दिल्ली!
राष्ट्रीय राजधानी दिल्ली में 🐂आवारा मवेशी के कारण एक और दुर्घटना हुई। समस्या विकराल होने के बाद भी समाधान इसलिए नहीं हो पा रहा है, क्योंकि निगम के स्थानीय अधिकारियों से लेकर पुलिस और प्रशासन की मिलीभगत से रिहायशी क्षेत्रों में… https://t.co/ycdxZF6C3H pic.twitter.com/doshDdBoar
@gharkekalesh ಅವರು ಈ ವೀಡಿಯೊವನ್ನು X ನಲ್ಲಿ ಪೋಸ್ಟ್ ಮಾಡಿದ್ದಾರೆ @DelhiComplaint ಎಂದು ಉಲ್ಲೇಖಿಸಿ ವಿಡಿಯೋ ಶಿರ್ಷೀಕೆಯನ್ನು ಬರೆದಿದ್ದಾರೆ- ದೆಹಲಿಯಲ್ಲಿ ಗೂಳಿಯೊಂದು ಕಾಲ್ನಡಿಗೆಯಲ್ಲಿ ನಡೆಯುತ್ತಿದ್ದ ಮಹಿಳೆಯ ಮೇಲೆ ದಾಳಿ ಮಾಡಿದೆ. ಸದ್ಯ ಈ ವೀಡಿಯೊ 11 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 5 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಸ್ವೀಕರಿಸಿದೆ. ಆದರೆ ಕಾಮೆಂಟ್ ವಿಭಾಗದಲ್ಲಿ 600 ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದಿವೆ.












Click it and Unblock the Notifications