• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊಟ್ಟಿಗೆಯಲ್ಲಿ ಮನೆಯೊಡತಿಯೊಂದಿಗೆ ಹೆಜ್ಜೆ ಹಾಕಿದ ಎಮ್ಮೆ

By ಒನ್ಇಂಡಿಯಾ ಡೆಸ್ಕ್‌
|

ಶಿಮ್ಲಾ, ಡಿಸೆಂಬರ್ 31: ಮನುಷ್ಯ ಹಾಗೂ ಪ್ರಾಣಿ ನಡುವಿನ ಪ್ರೀತಿ ಎಂದರೆ ಹಾಗೆ,ಸ್ಪಂದನೆ-ಪ್ರತಿಸ್ಪಂದನೆ ಇದ್ದೇ ಇರುತ್ತದೆ. ಮನುಷ್ಯರು ಪ್ರೀತಿಸಿದರೆ ಅವುಗಳು ಕೂಡ ನಿಷ್ಕಲ್ಮಶ ಮನಸ್ಸಿನಿಂದ ಪ್ರೀತಿಸುತ್ತವೆ. ಹೊಡೆದರೆ ಬೇಸರ ಪಟ್ಟುಕೊಳ್ಳುತ್ತವೆ.

ಮನುಷ್ಯರಾದರೂ ಬಿಟ್ಟು ಹೋಗಬಹುದು ಆದರೆ ಪ್ರಾಣಿಗಳು ಎಂದಿಗೂ ತನ್ನ ಜೊತೆ ಇದ್ದವರನ್ನು ಮರೆಯುವುದೇ ಇಲ್ಲ. ಮನುಷ್ಯರು ಹಾಗೂ ಪ್ರಾಣಿಗಳ ನಡುವೆ ಎಷ್ಟೊಂದು ಪ್ರೀತಿ ಇರುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

ಮನೆಯೊಡತಿ ಜತೆ ಎಮ್ಮೆಯೊಂದು ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಷ್ಟಕ್ಕೂ ಆಗಿದ್ದೇನು, ಹಿಮಾಚಲಪ್ರದೇಶದ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ, ವಿಡಿಯೋದಲ್ಲಿ ಮನೆಯೊಡತಿಯೊಂದಿಗೆ ಎಮ್ಮೆ ಕುಣಿಯುವುದನ್ನು ನೋಡಬಹುದಾಗಿದೆ. ಆಕೆ ಹಾಡಿನೊಂದಿಗೆ ಎಮ್ಮೆಯ ಜತೆ ಹೆಜ್ಜೆ ಹಾಕಿದ್ದಾರೆ. ಅಲ್ಲದೆ ಎಮ್ಮೆಯೂ ಕೂಡ ಪ್ರತಿಕ್ರಿಯಿಸಿದೆ.

ಕೊಟ್ಟಿಗೆಯಲ್ಲಿ ಎಮ್ಮೆಯನ್ನು ಕಟ್ಟಿಹಾಕಲಾಗಿತ್ತು, ಅಲ್ಲದೆ ಅದರ ಮೇಲೆ ಕಂಬಳಿಯನ್ನು ಹೊದಿಸಲಾಗಿತ್ತು, ಹಾಡು ಹಾಕುತ್ತಿದ್ದಂತೆಯೇ ಎಮ್ಮೆ ನೃತ್ಯ ಮಾಡಲು ಆರಂಭಿಸಿತ್ತು. ಈ ವಿಡಿಯೋದಲ್ಲಿ ಸುತ್ತಮುತ್ತಲಿರುವ ಮಕ್ಕಳು ನಗುತ್ತಿರುವುದನ್ನು ಕೂಡ ಕೇಳುತ್ತದೆ.

ಎಮ್ಮೆಯ ನೃತ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಸಾಕಷ್ಟು ಮಂದಿ ಕಾಮೆಂಟ್ ಮಾಡುತ್ತಿದ್ದಾರೆ.

English summary
A video of a buffalo dancing, along with its owner, has gone viral on the internet. It will surely bring a smile on your face. The hilarious footage is being widely circulated on social media platforms. It was shot in one of the villages of Himachal Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X