ಆರೋಪದಲ್ಲೇ ಕಳೆದುಹೋದ ಬಜೆಟ್ ಮರುದಿನದ ಕಲಾಪ

Subscribe to Oneindia Kannada

ನವದೆಹಲಿ, ಮಾರ್ಚ್, 01: ತಮ್ಮ ಕಟುವಾದ ಮಾತುಗಳ ಮೂಲಕ ವಿರೋಧ ಪಕ್ಷಗಳಿಗೆ ಬಿಸಿ ಮುಟ್ಟಿಸಿದ್ದ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಮತ್ತೊಮ್ಮೆ ಗುಡುಗಿದ್ದಾರೆ. ತಮ್ಮ ಮೇಲೆ ಆರೋಪಗಳ ಸುರಿಮಳೆ ಮಾಡಿದ ವಿರೋಧಿಗಳಿಗೆ ತಕ್ಕ ಉತ್ತರವನ್ನೇ ನೀಡಿದ್ದಾರೆ.

ಬಜೆಟ್ ಮರುದಿನದ ಅಧಿವೇಶನದಲ್ಲೂ ಸಹ ಕಾಂಗ್ರೆಸ್ ಮತ್ತು ಬಹುಜನ ಸಮಾಜವಾದಿ ಪಾರ್ಟಿ ಇರಾನಿ ವಿರುದ್ಧ ತಿರುಗಿ ಬಿದ್ದವು. ಹೈದರಾಬಾದ್ ವಿವಿಯ ರೋಹಿತ್ ವೇಮುಲ ಆತ್ಮಹತ್ಯೆ ಮತ್ತು ಜವಾಹರಲಾಲ್ ನೆಹರು ವಿವಿ ಗಲಾಟೆಯನ್ನು ಮತ್ತೇ ಎಳೆದು ತಂದವು.[ಮತ್ತೊಮ್ಮೆ ವಿಪಕ್ಷಗಳ ವಿರುದ್ದ ಸ್ಮೃತಿ ಇರಾನಿ 'ರಣಭೀಷಣ' ಭಾಷಣ]

india

ಇದಕ್ಕೆಲ್ಲ ಸ್ಪಷ್ಟ ಉತ್ತರ ನೀಡಿದ ಇರಾನಿ, ರೋಹಿತ್ ವೇಮುಲ ಸಾವಿನ ನಡೆದ ಘಟನಾವಳಿಗಳನ್ನು ಮತ್ತೆ ಬಿಚ್ಚಿಟ್ಟರು. ಯಾವುದೇ ವೈದ್ಯರು ವೇಮುಲ ಸಾವಿನ ಬಗ್ಗೆ ಬಾಯಿ ಬಿಡದ ವಿಚಾರವನ್ನು ತೆರೆದಿಟ್ಟಿದ್ದರೂ ಸಹ ವಿಪಕ್ಷಗಳ ಆರೋಪ ನಿಲ್ಲಲಿಲ್ಲ.

ಎಐಎಡಿಎಂಕೆ ಸಂಸದರು ಕಾರ್ತಿ ಚಿದಂಬರಂ ವಿರುದ್ಧ ಘೋಷಣೆ ಕೂಗಿದರು. "ಹಿಂದುಗಳು ರಾಕ್ಷಸ ಎಂದು ಕರೆಯುವ ಮಹಿಷಾಸುರ ಜೆ ಎನ್ ಯು ವಿದ್ಯಾರ್ಥಿಗಳ ಪ್ರಕಾರ ಹುತಾತ್ಮ! ದುರ್ಗಾ ಪೂಜೆ ವಿವಾದಾತ್ಮಕ ಹಬ್ಬ. ಮಹಿಷಾಸುರನನ್ನು ಮದುವೆಯಾದ ದುರ್ಗೆ ನಂತರ ಆತನ ಹತ್ಯೆ ಮಾಡಿದ್ದಳು" ಈ ಬಗೆಯ ವಿವರಗಳನ್ನು ಇರಾನಿ ನೀಡಿದ್ದು ಗೊಂದಲಕ್ಕೆ ಕಾರಣವಾಗಿತ್ತು. [ಅಂದು ಮೋದಿ ರಾಜೀನಾಮೆ ಕೇಳಿದ್ದ ಸ್ಮೃತಿ ಇರಾನಿ ಇಂದು ಮೋದಿ ಪರಮಾಪ್ತೆ]

ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಮತ್ತು ಕಾಂಗ್ರೆಸ್ ನ ಜ್ಯೋತಿತರಾಧ್ಯ ಸಿಂಧ್ಯಾ ನಡುವೆ ಮಾತಿನ ಚಕಮಕಿ ನಡೆಯಿತು. ಯಾವುದೇ ಗಂಭೀರ ಚರ್ಚೆ ನಡೆಯದೇ ಎರಡು ಸದನಗಳನ್ನು ಬುಧವಾರಕ್ಕೆ ಮುಂದೂಡಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Both the Houses of Parliament saw repeated adjournments as Opposition confronted the Government on a range of issues, including MoS for Human Resource Development Ram Shankar Katheria's remark following a Vishwa Hindu Parishad (VHP) leader's murder in Agra.
Please Wait while comments are loading...