ಶುದ್ಧ ಇಂಧನಕ್ಕೆ ಕೇಂದ್ರ ಬೂಸ್ಟ್: ಸೋಲಾರ್ ಗ್ಲಾಸ್, ಇವಿ ಬ್ಯಾಟರಿ ಬಿಡಿಭಾಗಗಳ ಆಮದು ಸುಂಕ ವಿನಾಯಿತಿ ಘೋಷಣೆ
ನವದೆಹಲಿ: ಪ್ರಸಕ್ತ 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂಧನ, ಬ್ಯಾಟರಿ ಕುರಿತಂತೆ ಮಹತ್ವದ ಘೋಷಣೆ ಮಾಡಿದ್ದಾರೆ. ಬ್ಯಾಟರಿಗಳಿಗೆ ಲಿಥಿಯಂ-ಐಯಾನ್ ಕೋಶಗಳನ್ನು ತಯಾರಿಕೆ ಬಳಸುವ ಬಂಡವಾಳ ಸರಕುಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕ ವಿನಾಯಿತಿಯನ್ನು ವಿಸ್ತರಿಸುವುದಾಗಿ ತಿಳಿಸಿದ್ದಾರೆ. ಇದರಿಂದ ಪ್ರಾದೇಶಿಕ ಅಭಿವೃದ್ಧಿ, ಸ್ಥಳೀಯ ಉತ್ಪಾದನೆ ಸುಧಾರಣೆಗೊಳ್ಳಲಿದೆ.
ಭಾನುವಾರ (ಫೆಬ್ರವರಿ 1) ರಂದು ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ ಅವರು, ಬ್ಯಾಟರಿ ಶೇಖರಣೆಗೆ ಲಿಥಿಯಂ-ಐಯಾನ್ ಕೋಶಗಳನ್ನು ತಯಾರಿಸಲು ಬಳಸುವ ಬಂಡವಾಳ ಸರಕುಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕ ಕಡಿತ ಬಗ್ಗೆ ಮಾಹಿತಿ ನೀಡಿದರು. ಇನ್ನೂ ಸೌರ ಗಾಜಿನ ಉತ್ಪಾದನೆಗೆ ಸೋಡಿಯಂ ಆಂಟಿ-ಮೋನೋಟ್ ಆಮದು ಮೇಲೆ ಹಿಂದಿದ್ದ ವಿನಾಯಿತಿ ಮುಂದುವರಿಸಲಾಗುವುದು. ದೇಶದಲ್ಲಿ ನಿರ್ಣಾಯಕ ಖನಿಜಗಳನ್ನು ಸಂಸ್ಕರಿಸಲು ಅಗತ್ಯವಿರುವ ಬಂಡವಾಳ ಸರಕುಗಳಿಗೆ ಕಸ್ಟಮ್ಸ್ ಸುಂಕ ವಿನಾಯಿತಿ ನೀಡಲಾಗುವುದೆಂದು ಅವರು ತಿಳಿಸಿದರು.

ಜೈವಿಕ ಅನಿಲ-ಮಿಶ್ರಿತ ಸಿಎನ್‌ಜಿ ಮೇಲಿನ ಅಬಕಾರಿ ಸುಂಕದಿಂದ ಜೈವಿಕ ಅನಿಲದ ಮೌಲ್ಯವನ್ನು ಸರ್ಕಾರ ಹೊರಗಿಟ್ಟಿದೆ. ಶುದ್ಧ ಇಂಧನಗಳ ಉತ್ತೇಜನಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಇಂಧನ ವಿಷಯದಲ್ಲಿ ಸ್ಥಳೀಯ ಕೈಗಾರಿಕಾ ಉತ್ಪಾದನೆ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ. ಪೂರ್ವ ಕರಾವಳಿ ಕೈಗಾರಿಕಾ ಕಾರಿಡಾರ್ ರಚನೆ ಕುರಿತು ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ್ದಾರೆ.
ಇಂಧನ ಆಮದು ತಗ್ಗಿಸಲು ಕ್ರಮ
2026ರ ಬಜೆಟ್‌ನಲ್ಲಿ ಸಿಎನ್‌ಜಿ ಇಂಧನಕ್ಕೆ 'ಜೈವಿಕ ಅನಿಲ' (CBG) ಮಿಶ್ರಣ ಮಾಡುವ ಮಹತ್ವದ ಯೋಜನೆ ಘೋಷಣೆ ಆಗಿದೆ. ಇದು ಪೆಟ್ರೋಲ್‌ನಲ್ಲಿ ಎಥೆನಾಲ್ ಬೆರೆಸಿದಂತೆಯೇ ಇಂಧನ ಆಮದು ತಗ್ಗಿಸಲು ಮತ್ತು ಪರಿಸರ ಮಾಲಿನ್ಯ ಕಡಿಮೆ ಮಾಡಲು ಪೂರಕವಾಗಲಿದೆ. ದೇಶದಲ್ಲಿ ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ, ಬಳಕೆ ಉತ್ತೇಜಿಸಿರುವ ಕೇಂದ್ರ ಸರ್ಕಾರ, ಸಾರಿಗೆ ನಿಯಮಗಳಡಿ ವಿದ್ಯುತ್ ಬಸ್‌ಗಳ ಅಳವಡಿಕೆಯನ್ನು ಉತ್ತೇಜಿಸುವ ಗುರಿ ಕೇಂದ್ರ ಸರ್ಕಾರ ಹೊಂದಿದೆ.
ವಿನಾಯಿತಿ ಪಟ್ಟಿಗೆ ಸೇರಿ ಬಂಡವಾಳ ಸರಕುಗಳು
ಬ್ಯಾಟರಿ ದೇಶೀಯ ಉತ್ಪಾದನೆ ಹೆಚ್ಚಳಕ್ಕಾಗಿ ವಿದ್ಯುತ್ ವಾಹನಗಳ ಬ್ಯಾಟರಿ ತಯಾರಿಕೆಗೆ 35 ಹೆಚ್ಚುವರಿ ಬಂಡವಾಳ ಸರಕುಗಳ ಮೇಲೆ ಹಾಗೂ ಮೊಬೈಲ್ ಫೋನ್ ಬ್ಯಾಟರಿ ತಯಾರಿಕೆಗೆ ಬಳಸಲಾಗುವ 28ಕ್ಕೂ ಅಧಿಕ ವಸ್ತುಗಳು ವಿನಾಯಿತಿ ಪಟ್ಟಿಗೆ ಕೇಂದ್ರ ಸರ್ಕಾರ ಸೇರಿಸಿದೆ. 2024ರಲ್ಲಿ ಬಜೆಟ್‌ನಲ್ಲಿ ವಿನಾಯಿತಿ ನೀಡಿದ್ದ 25 ನಿರ್ಣಾಯಕ ಅಂಶಗಳಿಗೆ ಇದು ಸಂಬಂಧಪಡುತ್ತದೆ. ಒಟ್ಟಾರೆಯಾಗಿ ಸ್ಥಳೀಯ ಉತ್ಪನ್ನಗಳ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಆಮದು ಸಂಕ ಇಳಿಕೆ ಮಾಡಿದೆ. ಇದರಿಂದ ಪ್ರಾದೇಶಿಕ ಉತ್ಪಾದನೆಗೆ ಕೇಂದ್ರ ಬೆಂಬಲ ನೀಡುತ್ತದೆ.
ಕೇಂದ್ರ ಬಜೆಟ್ ಲೈವ್ ಜೊತೆಗೆ ವಿಶ್ಲೇಷಣೆಯೂ ಇಲ್ಲಿದೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ (ಫೆ 1) ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ ಭಾಷಣದ ಲೈವ್ ವಿಡಿಯೊ ಮತ್ತು ತಜ್ಞರ ವಿಶ್ಲೇಷಣೆಗಾಗಿ 'ಒನ್ ಇಂಡಿಯಾ ಕನ್ನಡ' ಯುಟ್ಯೂಬ್ ಚಾನೆಲ್‌ಗೆ ಭೇಟಿ ನೀಡಿ.












Click it and Unblock the Notifications