ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Budget 2023: ಧೂಮಪಾನಿಗಳೇ ನಿಮ್ಮ ಜೇಬಿಗೆ ಕತ್ತರಿ ಹಾಕಲಿದೆ ಸಿಗರೇಟ್, ಶೇ.16ರಷ್ಟು ಸುಂಕ ಹೆಚ್ಚಳ

|
Google Oneindia Kannada News

ನವದೆಹಲಿ, ಫೆಬ್ರವರಿ. 01: ಸಿಗರೇಟ್ ಸೇದುವ ಮುನ್ನ ಒಮ್ಮೆ ಜೇಬು ಮುಟ್ಟಿ ನೋಡಿಕೊಳ್ಳುವಂತೆ ಮಾಡಿದೆ ಇಂದಿನ ಕೇಂದ್ರ ಬಜೆಟ್. ಹೌದು ಸಿಗರೇಟ್ ಮೇಲೆ ಶೇಕಡಾ 16ರಷ್ಟು ಸುಂಕ ಹೆಚ್ಚಳ ಮಾಡಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕೊನೆಯ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ವೇಳೆ ಸಿಗರೇಟ್ ಹೆಚ್ಚು ದುಬಾರಿಯಾಗಲಿದೆ ಎಂದು ಹೇಳಿ, ಅಡಿಗೆ ಚಿಮಣಿಗಳ ಮೇಲಿನ ಕಸ್ಟಮ್ಸ್ ಕಡಿಮೆಯಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

Budget 2023: ಮೆಡಿಕಲ್ ಕಾಲೇಜುಗಳ ಹತ್ತಿರದಲ್ಲಿ 157 ಹೊಸ ನರ್ಸಿಂಗ್ ಕಾಲೇಜು ಆರಂಭBudget 2023: ಮೆಡಿಕಲ್ ಕಾಲೇಜುಗಳ ಹತ್ತಿರದಲ್ಲಿ 157 ಹೊಸ ನರ್ಸಿಂಗ್ ಕಾಲೇಜು ಆರಂಭ

"ಜವಳಿ ಮತ್ತು ಕೃಷಿ ಹೊರತುಪಡಿಸಿ ಇತರ ಸರಕುಗಳ ಮೇಲಿನ ಮೂಲ ಕಸ್ಟಮ್ ಸುಂಕದ ದರಗಳನ್ನು 21 ರಿಂದ 13 ಕ್ಕೆ ಇಳಿಸಲು ನಾನು ಪ್ರಸ್ತಾಪಿಸುತ್ತೇನೆ. ಇದರ ಪರಿಣಾಮವಾಗಿ, ಆಟಿಕೆಗಳು, ಬೈಸಿಕಲ್‌ಗಳು ಸೇರಿದಂತೆ ಕೆಲವು ವಸ್ತುಗಳ ಮೂಲ ಕಸ್ಟಮ್ ಸುಂಕಗಳು, ಸೆಸ್ಗಳು, ಆಟೋಮೊಬೈಲ್ಸ್ ಮತ್ತು ಹೆಚ್ಚುವರಿ ಶುಲ್ಕಗಳಲ್ಲಿ ಸಣ್ಣ ಬದಲಾವಣೆಗಳಿವೆ" ಎಂದು ತಿಳಿಸಿದ್ದಾರೆ.

Budget 2023 : Cigarettes to be more expensive as FM Increased Custom duty on cigarettes

ಈ ಶೇ.16ರಷ್ಟು ಸುಂಕ ಹೆಚ್ಚಳದಿಂದಾಗಿ ಒಂದು ಸಿಗರೇಟ್ ಪ್ಯಾಕಿನ ಬೆಲೆ 25 ರೂಪಾಯಿಯಿಂದ 30 ರೂಪಾಯಿಗೆ ಏರಿಕೆಯಾಗುವ ಸಾಧ್ಯತೆಯಿದೆ. ಇದರಿಂದ ಧೂಮಪಾನ ಮಾಡುವವರ ಜೇಬಿಗೂ ಕತ್ತರಿ ಬೀಳಲಿದೆ.

ಇನ್ನು, ಚಿನ್ನ, ಬೆಳ್ಳಿ, ವಜ್ರ, ಪ್ಲಾಟಿನಂ ಬೆಲೆ ಮತ್ತಷ್ಟು ದುಬಾರಿಯಾಗಿದ್ದು ಒಡವೆ ಕೊಳ್ಳುವವರಿಗೆ ಭಾರಿ ನಿರಾಸೆಯಾಗಿದೆ. ಈಗಾಗಲೇ ಚಿನ್ನ ಹಾಗೂ ಬೆಳ್ಳಿಯ ದರಗಳು ಗಗನಕ್ಕೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಚಿನ್ನ ಕೊಳ್ಳುವ ಮುನ್ನ ನೂರು ಬಾರಿ ಯೋಚಿಸುವಂತಾಗಿದೆ.

ಪ್ರಸ್ತುತ ಪ್ರತಿ 10 ಗ್ರಾಂ ಚಿನ್ನಕ್ಕೆ ರೂ 56,916 ಕ್ಕೆ ವಹಿವಾಟು ನಡೆಯುತ್ತಿದ್ದು, ರೂಪಾಯಿ 6 ಅಥವಾ ಶೇ 0.01 ರಷ್ಟು ಹೆಚ್ಚಾಗಿದೆ. ಬೆಳ್ಳಿಯು ಮಾರ್ಚ್ ಫ್ಯೂಚರ್ಸ್ ಎಂಸಿಎಕ್ಸ್‌ನಲ್ಲಿ ಪ್ರತಿ ಕೆಜಿಗೆ 140 ರೂಪಾಯಿ ಕಡಿಮೆಯಾಗಿ 68,689 ರೂಪಾಯಿಯಷ್ಟು ವಹಿವಾಟು ನಡೆಸುತ್ತಿದೆ.

English summary
Union Budget 2023: Cigarettes to be more expensive as Finance Minister Increased Custom duty on cigarettes. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X