ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆರಿಗೆ ರಿಯಾಯಿತಿ, ನಿಧಿ ಹಂಚಿಕೆ: ಕೇಂದ್ರ ಬಜೆಟ್‌ನಿಂದ ಫಾರ್ಮಾ ವಲಯದ ನಿರೀಕ್ಷೆಗಳಿವು

|
Google Oneindia Kannada News

ನವದೆಹಲಿ, ಜನವರಿ 25: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಬಜೆಟ್ 2022 ಅನ್ನು ಮಂಡಿಸಲು ಕೆಲವೇ ದಿನಗಳು ಬಾಕಿಯಿದೆ. ಈ ನಡುವೆ ದೇಶೀಯ ಔಷಧೀಯ ಉದ್ಯಮವು ಆರೋಗ್ಯ ಕ್ಷೇತ್ರಕ್ಕೆ ಒಟ್ಟಾರೆ ನಿಧಿ ಹಂಚಿಕೆಯಲ್ಲಿ ಹೆಚ್ಚಳವನ್ನು ನಿರೀಕ್ಷಿಸುತ್ತಿದೆ. ಸಂಶೋಧನೆ ಮತ್ತು ಅಭಿವೃದ್ಧಿ (ಆರ್&ಡಿ) ಚಟುವಟಿಕೆಗಳನ್ನು ಉತ್ತೇಜಿಸುವ ಮತ್ತು ವಿವಿಧ ಔಷಧಿಗಳ ಮೇಲಿನ ತೆರಿಗೆ ರಿಯಾಯಿತಿಗಳನ್ನು ಹೆಚ್ಚಿಸುವ ನಿರೀಕ್ಷೆಯನ್ನು ಕೂಡಾ ವಲಯವು ಹೊಂದಿದೆ. ಇದಲ್ಲದೆ, ಫಾರ್ಮಾ ವಲಯವು ಖಾಸಗಿ ವಲಯದ ಕಂಪನಿಗಳಿಗೆ ವ್ಯವಹಾರವನ್ನು ಸುಲಭಗೊಳಿಸಲು ವಿವಿಧ ಪ್ರಕ್ರಿಯೆಗಳನ್ನು ಸರಳೀಕರಿಸಲು ಪ್ರಯತ್ನಿಸುತ್ತಿದೆ.

ಸುದ್ದಿ ಸಂಸ್ಥೆ ಪಿಟಿಐಗೆ ಮಾತನಾಡಿದ ಆರ್ಗನೈಸೇಶನ್ ಆಫ್ ಫಾರ್ಮಾಸ್ಯುಟಿಕಲ್ ಪ್ರೊಡ್ಯೂಸರ್ಸ್ ಆಫ್ ಇಂಡಿಯಾ (ಒಪಿಪಿಐ) ಅಧ್ಯಕ್ಷ ಎಸ್ ಶ್ರೀಧರ್, "ರಾಷ್ಟ್ರೀಯ ಆರೋಗ್ಯ ನೀತಿ 2017 ರಲ್ಲಿ ಕಲ್ಪಿಸಿರುವಂತೆ ಪ್ರಸ್ತುತ ಜಿಡಿಪಿಯ 1.8 ಪ್ರತಿಶತದಿಂದ 2.5-3 ಪ್ರತಿಶತಕ್ಕೆ ಬಜೆಟ್ ಹಂಚಿಕೆಯನ್ನು ಹೆಚ್ಚಿಸಲಾಗಿದೆ. ಜೈವಿಕ ಔಷಧೀಯ ವಲಯದ ಆರ್‌&ಡಿಗೆ ಪ್ರತ್ಯೇಕ ಬಜೆಟ್‌ ಹಂಚಿಕೆ ಅತ್ಯಗತ್ಯ," ಎಂದು ತಿಳಿಸಿದ್ದಾರೆ.

 ಭಾರತದ ಬಜೆಟ್‌ ಪ್ರಕ್ರಿಯೆಯು ಇತರ ದೇಶಗಳಿಗಿಂತ ಹೇಗೆ ಭಿನ್ನ? ಭಾರತದ ಬಜೆಟ್‌ ಪ್ರಕ್ರಿಯೆಯು ಇತರ ದೇಶಗಳಿಗಿಂತ ಹೇಗೆ ಭಿನ್ನ?

"ಕಳೆದ ವರ್ಷದಲ್ಲಿ ಉದ್ಯಮವು ಗಮನಾರ್ಹ ವೇಗವನ್ನು ಕಂಡಿದೆ. ವಿಶೇಷವಾಗಿ ಕೋವಿಡ್ -19 ಲಸಿಕೆಗಳು ಮತ್ತು ಔಷಧಿಗಳ ಲಭ್ಯತೆಯನ್ನು ಖಾತ್ರಿಪಡಿಸುವಲ್ಲಿ ಮತ್ತು ಈ ವರ್ಷದ ಬಜೆಟ್ ವಲಯದ ಬೆಳವಣಿಗೆಯನ್ನು ವೇಗಗೊಳಿಸಲು, ಕೋವಿಡ್ ಮಾತ್ರವಲ್ಲದೇ ವಿವಿಧ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಬಜೆಟ್‌ ಕೂಡಾ ಅತ್ಯಗತ್ಯ," ಎಂದಿದ್ದಾರೆ.

Budget 2022: Tax Concession, Fund Allocation: Here’s What Pharma Sector Expects

ಇನ್ನು ಈ ಬಗ್ಗೆ ಅಧಿಕ ವಿವರಗಳನ್ನು ನೀಡಿದ ಅಧ್ಯಕ್ಷ ಎಸ್ ಶ್ರೀಧರ್, "ಪ್ರಸ್ತುತ ಸನ್ನಿವೇಶದಲ್ಲಿ ಕೈಗೆಟುಕುವ ಬೆಲೆಯಲ್ಲಿ ಅಂತಹ ಔಷಧಿಗಳ ಲಭ್ಯತೆಯ ಮೇಲೆ ಪರಿಣಾಮ ಬೀರುವುದರಿಂದ ಔಷಧಿಗಳಿಗೆ ಅಸ್ತಿತ್ವದಲ್ಲಿರುವ ಕಸ್ಟಮ್ಸ್ ಸುಂಕದ ರಿಯಾಯಿತಿಗಳನ್ನು ಕೇಂದ್ರವು ಮುಂದುವರಿಸಬೇಕು," ಎಂದು ಹೇಳಿದರು. "ಎನ್‌ಪಿಆರ್‌ಡಿ ಪ್ರಸ್ತಾಪಿಸಿದಂತೆ ಜಾಗತಿಕವಾಗಿ ಅಭಿವೃದ್ಧಿಯಾದ ಕಾಯಿಲೆಗಳ ನವೀನ ಔಷಧಿಗಳಿಗೆ ಆಮದು ಸುಂಕ ವಿನಾಯಿತಿಗಳನ್ನು ಸಹ ಪರಿಗಣನೆಗೆ ತೆಗೆದುಕೊಳ್ಳಬೇಕು," ಎಂದು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2022; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೇಲಿನ ಪ್ರಮುಖ ನಿರೀಕ್ಷೆಗಳೇನು?ಕೇಂದ್ರ ಬಜೆಟ್ 2022; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೇಲಿನ ಪ್ರಮುಖ ನಿರೀಕ್ಷೆಗಳೇನು?

ಸರಳೀಕೃತ ಕ್ರಮ ಅತ್ಯಗತ್ಯ

ತಮ್ಮ ನಿರೀಕ್ಷೆಗಳನ್ನು ಹಂಚಿಕೊಂಡಿರುವ ಇಂಡಿಯನ್ ಫಾರ್ಮಾಸ್ಯುಟಿಕಲ್ ಅಲೈಯನ್ಸ್ (ಐಪಿಎ) ಪ್ರಧಾನ ಕಾರ್ಯದರ್ಶಿ ಸುದರ್ಶನ್ ಜೈನ್, "ಫಾರ್ಮಾ ವಲಯದಲ್ಲಿ ವ್ಯವಹಾರವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ, ಹಾಗೆಯೇ ಸರಳೀಕೃತ ಕ್ರಮ ಕೈಗೊಳ್ಳುವುದು ಕೂಡಾ ಮುಖ್ಯ. ಇದು ಉದ್ಯಮ ಸ್ನೇಹಿಯಾಗಿಸುವ ಅಡೆತಡೆಗಳನ್ನು ನಿವಾರಿಸುವ ಕಾರ್ಯ ಮಾಡಲಿದೆ. ಹೂಡಿಕೆಯನ್ನು ಉತ್ತೇಜಿಸುತ್ತದೆ, ಉದ್ಯಮದ ದೀರ್ಘಾವಧಿಯ ಬೆಳವಣಿಗೆಗೆ ಕೊಡುಗೆ ನೀಡುತ್ತದೆ," ಎಂದಿದ್ದಾರೆ.

ಕೊರೊನಾ ವೈರಸ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಟೆಲಿಮೆಡಿಸಿನ್, ಹೋಮ್ ಮತ್ತು ಸೀನಿಯರ್ ಕೇರ್‌ನಂತಹ ಮೂಲಸೌಕರ್ಯ ಮತ್ತು ಲಿಂಕ್ಡ್ ಇಂಟಿಗ್ರೇಟೆಡ್ ಸಾಮರ್ಥ್ಯಗಳನ್ನು ರಚಿಸಲು ಮತ್ತು ನಿರ್ಮಿಸಲು ಇದು ನಿರ್ಣಾಯಕ ಕಾಲ ಎಂದು ಹೆಲ್ತ್‌ಕೇರ್ ಇಂಡಸ್ಟ್ರಿ ಹೇಳಿದೆ. ಇದರಿಂದ ಜನರು ಗುಣಮಟ್ಟದ ಮತ್ತು ನಿರ್ಣಾಯಕ ಆರೋಗ್ಯ ಸೇವೆಗಳನ್ನು ಸಮಾನವಾಗಿ ಪಡೆಯಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.

"ಕೋವಿಡ್‌ ಸಾಂಕ್ರಾಮಿಕ ರೋಗವು ನಮಗೆ ಹೆಚ್ಚಿನ ಬಜೆಟ್ ವೆಚ್ಚವನ್ನು ನೀಡಿದೆ. ಕೇಂದ್ರಗಳು, ಆಮ್ಲಜನಕ ಹಾಸಿಗೆಗಳು, ಐಸಿಯುಗಳು ಮತ್ತು ಆಮ್ಲಜನಕ ಸ್ಥಾವರಗಳಂತಹ ಸಾಕಷ್ಟು ಮೂಲಸೌಕರ್ಯಗಳೊಂದಿಗೆ ಶ್ರೇಣಿ 2 ಮತ್ತು 3 ಪಟ್ಟಣಗಳಲ್ಲಿ ಆಸ್ಪತ್ರೆಗಳನ್ನು ಒದಗಿಸುವ ಅಗತ್ಯವನ್ನು ನಾವು ಈಗ ತಿಳಿದಿದ್ದೇವೆ," ಎಂದಿದ್ದಾರೆ.

ಬಜೆಟ್ ಅಧಿವೇಶನ ಜನವರಿ 31 ರಂದು ಆರಂಭವಾಗಲಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ವಾರ್ಷಿಕ ಬಜೆಟ್ ಮಂಡಿಸಲಿದ್ದಾರೆ. ಭಾರತದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2022 ರಂದು ತಮ್ಮ ನಾಲ್ಕನೇ ಕೇಂದ್ರ ಬಜೆಟ್ ಅನ್ನು ಘೋಷಿಸಲಿದ್ದಾರೆ. 2022 ರ ಬಜೆಟ್‌ ಹಲವಾರು ನಿರೀಕ್ಷೆಗಳನ್ನು ಹೊಂದಿದೆ. ಕೃಷಿ, ಆರೋಗ್ಯ ಮತ್ತು ರಿಯಲ್ ಎಸ್ಟೇಟ್ ಅಥವಾ ಉದ್ಯಮಿಗಳು ಮತ್ತು ಸಂಬಳ ವೃತ್ತಿಪರರಂತಹ ವ್ಯಕ್ತಿಗಳಿಗೆ ಈ ಬಜೆಟ್‌ ಮೇಲೆ ಹಲವಾರು ನಿರೀಕ್ಷೆಗಳು ಇದೆ. (ಒನ್‌ಇಂಡಿಯಾ ಸುದ್ದಿ)

English summary
Budget 2022: Tax Concession, Fund Allocation: Here’s What Pharma Sector Expects. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X