ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2021: ಕೇಂದ್ರ ಬಜೆಟ್‌ನ ಪ್ರಮುಖ ಅಂಶಗಳು

|
Google Oneindia Kannada News

ನವದೆಹಲಿ, ಫೆಬ್ರವರಿ 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ನೇ ಸಾಲಿನ ಬಜೆಟ್ ಅನ್ನು ಸೋಮವಾರ ಮಂಡಿಸಿದ್ದಾರೆ. ಅದರಲ್ಲಿ ಆರ್ಥಕತೆಯ ಉತ್ತೇಜನಕ್ಕಾಗಿ ಅನೇಕ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಸಾರಿಗೆ, ಉದ್ಯಮ, ಕೃಷಿ, ಶಿಕ್ಷಣ, ಆರೋಗ್ಯ ಸೇರಿದಂತೆ ಸಾಮಾಜಿಕ-ಆರ್ಥಿಕ ವಲಯಗಳಿಗೆ ಅನೇಕ ಯೋಜನೆಗಳನ್ನು ಘೋಷಿಸಲಾಗಿದೆ.

ವಿವಿಧ ವಲಯಗಳಲ್ಲಿನ ಉತ್ಪನ್ನಗಳ ಮೇಲೆ ಸೆಸ್ ವಿಧಿಸಲಾಗಿದೆ. ಕೆಲವು ಕ್ಷೇತ್ರಗಳಿಗೆ ತೆರಿಗೆ ಕಡಿಮೆ ಮಾಡಲಾಗಿದೆ. ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ ವ್ಯವಸ್ಥೆಯಲ್ಲಿ ಕೂಡ ಬದಲಾವಣೆಗಳನ್ನು ಮಾಡಲಾಗಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ 20,000 ಕೋಟಿ ರೂ ಹೆಚ್ಚುವರಿ ನೆರವು, ಕೃಷಿ ಅನುದಾನದಲ್ಲಿನ ಒಂದು ಭಾಗವನ್ನು ಎಪಿಎಂಸಿ ಮೂಲಸೌಕರ್ಯ ಬಲವರ್ಧನೆಗೆ ಬಳಸುವುದು. ಒಂದು ದೇಶ ಒಂದು ರೇಷನ್ ಕಾರ್ಡ್ ಯೋಜನೆಗಳನ್ನು ಘೋಷಿಸಲಾಗಿದೆ.

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿರುವ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.

1.75 ಲಕ್ಷ ಕೋಟಿ ಬಂಡವಾಳ ಹಿಂದೆಗೆತ

1.75 ಲಕ್ಷ ಕೋಟಿ ಬಂಡವಾಳ ಹಿಂದೆಗೆತ

1.75 ಲಕ್ಷ ಕೋಟಿ ಬಂಡವಾಳ ಹಿಂದೆಗೆತ

* 2022ರ ಹಣಕಾಸು ವರ್ಷದ ವೇಳೆಗೆ 1.75 ಲಕ್ಷ ಕೋಟಿ ಬಂಡವಾಳ ಹಿಂದೆಗೆತದ ಗುರಿಯನ್ನು ಸರ್ಕಾರ ಹೊಂದಿದೆ.

* 2022ರಲ್ಲಿ ಜೀವ ವಿಮಾ ನಿಗಮದ ಷೇರುಗಳನ್ನು ಮಾರಾಟ ಮಾಡಲು ಅನುಕೂಲವಾಗುವಂತೆ ಐಪಿಒ ಪ್ರಕ್ರಿಯೆ ಜಾರಿ.

ಕೃಷಿ ಸೆಸ್ ಏರಿಕೆ

ಕೃಷಿ ಸೆಸ್ ಏರಿಕೆ

* 2022ರ ವೇಳೆಗೆ ಏರ್ ಇಂಡಿಯಾ ಮತ್ತು ಬಿಪಿಸಿಎಲ್ ಮಾರಾಟ ಪ್ರಕ್ರಿಯೆ ಪೂರ್ಣ

* ಕೆಲವು ವಸ್ತುಗಳ ಮೇಲೆ ಕೃಷಿ ಮೂಲಸೌಕರ್ಯ ಸೆಸ್ ಹೇರಿಕೆ.

* 64,180 ಕೋಟಿ ರೂ ವೆಚ್ಚದಲ್ಲಿ ಪಿಎಂ ಆತ್ಮನಿರ್ಭರ ಸ್ವಸ್ಥ ಭಾರತ ಯೋಜನೆಯ ಜಾರಿ.

ಜಿಡಿಪಿ ವಿತ್ತೀಯ ಕೊರತೆ

ಜಿಡಿಪಿ ವಿತ್ತೀಯ ಕೊರತೆ

* ವಿಮಾ ಕಂಪೆನಿಗಳಲ್ಲಿನ ಎಫ್‌ಡಿಐ ಶೇ 49ರಿಂದ ಶೇ 74ಕ್ಕೆ ಏರಿಕೆ. ಸುರಕ್ಷತಾ ನಿಯಮಗಳೊಂದಿಗೆ ವಿದೇಶಿ ಮಾಲೀಕತ್ವಕ್ಕೆ ಅವಕಾಶ.

* 2021ರ ಹಣಕಾಸು ವರ್ಷದ ವಿತ್ತೀಯ ಕೊರತೆಯು ಜಿಡಿಪಿಯ ಶೇ 9.5ರಷ್ಟು.

* 2022ರ ಹಣಕಾಸು ವರ್ಷದ ವಿತ್ತೀಯ ಕೊರತೆಯು ಜಿಡಿಪಿಯ ಶೇ 6.8ರಷ್ಟು.

ಮಾರುಕಟ್ಟೆ ಸಾಲ

ಮಾರುಕಟ್ಟೆ ಸಾಲ

* 2022ರ ಹಣಕಾಸು ವರ್ಷದ ಒಟ್ಟು ಮಾರುಕಟ್ಟೆ ಸಾಲದ ಗುರಿ 12 ಲಕ್ಷ ಕೋಟಿ ರೂ.

* 2025-26ರ ವೇಳೆಗೆ ಆರ್ಥಿಕ ಕೊರತೆಯನ್ನು ಶೇ 5ರ ಒಳಗೆ ಇಳಿಸಲು ಸರ್ಕಾರದ ಗುರಿ.

* ಸ್ಟಾರ್ಟ್‌ಅಪ್‌ಗಳ ತೆರಿಗೆ ವಿನಾಯಿತಿ ಒಂದು ವರ್ಷ ವಿಸ್ತರಣೆ

* ಹಿರಿಯ ನಾಗರಿಕರು ಐಟಿ ರಿಟರ್ನ್ಸ್ ಸಲ್ಲಿಸುವುದರಿಂದ ವಿನಾಯಿತಿ.

English summary
Here are the key highlights of the Full Union Budget 2021 from Finance Minister Nirmala Sitharaman’s speech in Kannada. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X