ಯೋಗಿ-ಬಿಜೆಪಿ ಪತನಕ್ಕಾಗಿ ಕೈ ಜೋಡಿಸಿದ ಎಸ್ ಪಿ-ಬಿಎಸ್ಪಿ

ಲಕ್ನೋ, ಮಾರ್ಚ್ 04: ಉತ್ತರಪ್ರದೇಶದ ಮಾಜಿ ಸಿಎಂಗಳಾದ ಅಖಿಲೇಶ್ ಯಾದವ್ ಹಾಗೂ ಮಾಯಾವತಿ ಇಬ್ಬರು ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ನೇರ ಯುದ್ಧಗಿಳಿದಿದ್ದಾರೆ.

ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷಗಳು ಜಂಟಿಯಾಗಿ ಮುಂಬರುವ ಚುನಾವಣೆಗಳನ್ನು ಎದುರಿಸಲು ನಿರ್ಧರಿಸಿವೆ. ಮಾರ್ಚ್ 11ರಂದು ಲೋಕಸಭೆ ಉಪ ಚುನಾವಣೆ ನಡೆಯಲಿದ್ದು,ಮಾರ್ಚ್ 14ರಂದು ಫಲಿತಾಂಶ ಹೊರ ಬರಲಿದೆ.

ಫುಲ್ ಪುರ್ ಹಾಗೂ ಗೋರಖಪುರ್ ಉಪಚುನಾವಣೆಯಲ್ಲಿ ಎರಡು ಪಕ್ಷಗಳು ಒಟ್ಟಿಗೆ ಕಣಕ್ಕಿಳಿಯಲಿವೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ್ದರ ಸೇಡು ತೀರಿಸಿಕೊಳ್ಳಲು, ಈ ಎರಡು ಪಕ್ಷಗಳು ದ್ವೇಷ ಮರೆತು ಒಂದಾಗಿವೆ.

BSP and SP Join Hands to 'Eliminate the Yogi and BJP'

ಸಮಾಜವಾದಿ ಪಕ್ಷದ ಜತೆ ಕೈಜೋಡಿಸಿದ್ದರಿಂದ ದಲಿತ ಪ್ರತಿನಿಧಿಯಾಗಿ ಮಾಯಾವತಿ ಅವರಿಗೆ ರಾಜ್ಯಸಭೆಗೆ ಕಳಿಸಲು ಯತ್ನಿಸಲಾಗುತ್ತಿದೆ. ಬಿಎಸ್ ಪಿ 19, ಎಸ್ ಪಿ 47 ಹಾಗೂ ಕಾಂಗ್ರೆಸ್ 6 ಸ್ಥಾನ ಹೊಂದಿವೆ.

ಗೋರಖಪುರ್ ನಲ್ಲಿ ಬಿಜೆಪಿಯಿಂದ ಉಪೇಂದ್ರ ಶುಕ್ಲಾ, ಕಾಂಗ್ರೆಸ್ಸಿನಿಂದ ಸುರ್ಹಿತಾ ಚಟರ್ಜಿ ವಿರುದ್ಧ ನಿಷಾದ್ ಪಾರ್ಟಿಯ ಸ್ಥಾಪಕ ಸಂಜಯ್ ನಿಷಾದ್ ಅವರ ಮಗ ಪ್ರವೀಣ್ ಕುಮಾರ್ ನಿಷಾದ್ ಅವರು ಸ್ಪರ್ಧಿಸುತ್ತಿದ್ದಾರೆ. ನಿಷಾದ್ ಗೆ ಸಮಾಜವಾದಿ ಪಕ್ಷ ಬೆಂಬಲ ಸಿಗಲಿದೆ.

ಫುಲ್ ಫುರ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದಿಂದ ಒಬಿಸಿ ಮುಖಂಡ ನಾಗೇಂದ್ರ ಸಿಂಗ ಪಟೇಲ್ ಕಣಕ್ಕಿಳಿಯಲಿದ್ದು, ಬಿಜೆಪಿ ನಾಯಕ, ವಾರಣಾಸಿಯ ಮಾಜಿ ಮೇಯರ್, ಒಬಿಸಿ ನಾಯಕ ಕೌಶಲೇಂದ್ರ ಸಿಂಗ್ ಪಟೇಲ್ ಸ್ಪರ್ಧಿಸಿದ್ದರೆ, ಕಾಂಗೆಸ್ಸಿನಿಂದ ಮನೀಶ್ ಮಿಶ್ರಾ ಕಣದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+