ಸುಕ್ಮಾ ಹತ್ಯಾಕಾಂಡದ ಹಿಂದೆ ಅನುಮಾನ ಹುಟ್ಟಿಸುವ ನಿಗೂಢ ನಡೆಗಳು!

ಸುಕ್ಮಾ(ಛತ್ತೀಸ್ ಗಢ), ಜುಲೈ 5: ಛತ್ತೀಸ್ ಗಢದ ಸುಕ್ಮಾದಲ್ಲಿ ಏಪ್ರಿಲ್ 24, 2017 ರಲ್ಲಿ ನಡೆದ 25 ಸಿಆರ್ ಪಿಎಫ್ ಯೋಧರ ಹತ್ಯಾಕಾಂಡ ಭಾರತೀಯ ಇತಿಹಾಸದಲ್ಲೇ ಕರಾಳ ದಿನ. ನಕ್ಸಲರು ಸುಕ್ಮಾದ ಬುರ್ಕಾಪಾಲ್ ನ ಸೇನಾ ಶಿಬಿರದಲ್ಲಿ ವಿಶ್ರಾಂತಿಯಲ್ಲಿದ್ದ ಸಿಆರ್ ಪಿಎಫ್ ಯೋಧರ ಮೇಲೆ ದಾಳಿ ನಡೆಸಿ 25 ಯೋಧರನ್ನು ಹತ್ಯೆಗೈದಿದ್ದರು. ಈ ಕುರಿತು ತನಿಖೆ ನಡೆಸುತ್ತಿದ್ದ ತನಿಖಾ ದಳವೊಂದಕ್ಕೆ ನಿಗೂಢ ವಿಷಯವೊಂದು ಗಮನಕ್ಕೆ ಬಂದಿದೆ.

ಈ ದಾಳಿ ನಡೆಯುವ ಒಂದು ಗಂಟೆ ಮೊದಲು ಈ ಭಾಗದ ಬಿಎಸ್ ಎನ್ ಎಲ್ ಟವರ್ ಗಳು ಸಂಪೂರ್ಣ ಸ್ಥಗಿತಗೊಂಡಿದ್ದವು ಎಂಬ ಅಚ್ಚರಿಯ ಅಂಶವೊಂದು ಹೊರಬಿದ್ದಿದ್ದು, ಟವರ್ ಸ್ಥಗಿತವಾಗಿದ್ದಕ್ಕೂ, ಈ ದಾಳಿಯಲ್ಲಿ ಪಾಲ್ಗೊಂಡವರಿಗೂ ಸಂಬಂಧವಿದೆ ಎಂಬ ಅನುಮಾನ ದಟ್ಟವಾಗಿದೆ. ದಾಳಿಗೂ ಮೊದಲು ಟವರ್ ಸ್ಥಗಿತವಾಗುತ್ತದೆ ಎಂದಾದರೆ, ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುವ ಯಾರದೋ ಬೆಂಬಲ ನಕ್ಸಲರಿಗಿತ್ತೇ ಎಂಬ ಸಂಶಯವೂ ಎದ್ದಿದೆ.

BSNL towers mysteriously went dead before the Sukma attack

ಅಷ್ಟೇ ಅಲ್ಲ, ದಾಳಿ ನಡೆಯುವ ಕೆಲವು ಗಂಟೆ ಮೊದಲು ಈ ಊರಿಗೆ ಅಪರಿಚಿತಳಾದ ಮಹಿಳೆಯೊಬ್ಬರು ಕೆಂಪು ಸೀರೆ ಉಟ್ಟು ಸೇನೆಯ ಶಿಬಿರದ ಬಳಿ ಓಡಾಡುತ್ತಿದ್ದುದನ್ನೂ ಕಂಡವರಿದ್ದಾರೆ. ಇದೂ ಸಹ ದಾಳಿಯ ಸೂಚನೆಯೇ ಆಗಿತ್ತೆಂದು, ದಾಳಿಯ ನಂತರ ಅನುಮಾನಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಏನೇ ಆದರೂ, 25 ಸೈನಿಕರ ಮಾರಣ ಹೋಮವಂತೂ ಭಾರತಕ್ಕೆ ತುಂಬಲಾರದ ನಷ್ಟವೆನ್ನುವುದು ಸುಳ್ಳಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+