BSNL ರಕ್ಷಣೆಗೆ ಮುಂದಾದ ಕೇಂದ್ರ ಸರ್ಕಾರ, ನಿರ್ಧಾರವೇನು?
ನವದೆಹಲಿ, ಜುಲೈ 4: ಕಷ್ಟದಲ್ಲಿರುವ ಬಿಎಸ್‌ಎನ್‌ಎಲ್ ಕಂಪನಿ ಕೈಹಿಡಿಯಲು ಸರ್ಕಾರ ಧಾವಿಸಿದೆ. 74 ಸಾವಿರ ಕೋಟಿ ನೆರವು ನೀಡಲು ಕೇಂದ್ರ ಮುಂದಾಗಿದೆ.
ಈ ಕುರಿತು ಕರಡು ಪ್ರಸ್ತಾವನೆ ಸಂಪುಟಕ್ಕೆ ಸಲ್ಲಿಕೆಯಾಗಿದೆ.ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್‌ಗಳನ್ನು ಮುಚ್ಚಿದರೆ 1.20 ಲಕ್ಷ ಕೋಟಿ ಖರ್ಚಾಗುತ್ತದೆ.
ಹೀಗಾಗಿ ಇದು ಕಷ್ಟ, ಷೇರುವಿಕ್ರಯ ಮಾಡಬಹುದು. ಆದರೆ ಷೇರು ಖರೀದಿಸಲು ಮುಂದೆ ಬರುವವರ ಸಂಖ್ಯೆ ಕಡಿಮೆ. ಆದ್ದರಿಂದ ಸಿಬ್ಬಂದಿ ಸಂಖ್ಯೆ ಕಡಿಮೆ ಮಾಡುವ ಜೊತೆಗೆ ಸರ್ಕಾರ ಮತ್ತು ಇಲಾಖೆ ಜಂಟಿಯಾಗಿ ಮಾರ್ಗವನ್ನು ಹುಡುಕಬೇಕಿದೆ.

2018-19ನೇ ಸಾಲಿನಲ್ಲಿ ಬಿಎಸ್‌ಎನ್‌ಎಲ್ 13,804 ಕೋಟಿ ನಷ್ಟ ಅನುಭವಿಸಿದೆ. ಹಲವು ವರ್ಷಗಳಿಂದ ಬಿಎಸ್‌ಎನ್‌ಎಲ್ ಮತ್ತ ಎಂಟಿಎನ್‌ಎಲ್ ಸರ್ಕಾರಕ್ಕೆ ಬಿಳಿ ಆನೆಯಾಗಿ ಪರಿಣಮಿಸಿದೆ.
ಗ್ರಾಹಕರಿಗೆ ಕಳಪೆ ಸೇವೆ, ತಂತ್ರಜ್ಞಾನ ಮೇಲ್ದರ್ಜೆಗೇರಿಸುವಿಕೆಯಲ್ಲಿ ಮಂದಗತಿ, ಅಶಿಸ್ತಿನ ಆಡಳಿತ, ಅತಿ ವೇತನದಿಂದ ಹೊರೆಯಾಗಿರುವ ಸಿಬ್ಬಂದಿ, ಸರ್ಕಾರದ ಕೆಲವು ದಾರಿ ತಪ್ಪಿಸುವ ಸೂಚನೆ ಮತ್ತು ಅನಗತ್ಯ ಮೂಗು ತೂರಿಸುವಿಕೆಯಿಂದಲೂ ಈ ಸಂಸ್ಥೆಗಳು ಹೈರಾಣಾಗಿವೆ. ಎಂಟಿಎನ್‌ಎಲ್‌ಗೆ 3,398 ಕೋಟಿ ನಷ್ಟವಾಗಿದೆ.












Click it and Unblock the Notifications