BSNL e-Sim: ಬಿಎಸ್‌ಎನ್‌ಎಲ್ ಇ-ಸಿಮ್ ಸೇವೆ ಪರಿಚಯ, QR ಕೋಡ್ ಒಂದಿದ್ರೆ ಸಾಕು
ನವದೆಹಲಿ, ಅಕ್ಟೋಬರ್ 02: ಟಾಟಾ ಕಮ್ಯುನಿಕೇಷನ್ಸ್ ಮತ್ತು ಬಿಎಸ್‌ಎನ್‌ಎಲ್ (BSNL) ಸೇರಿ ಭಾರತದ ಟೆಲಿಕಾಂ ವ್ಯವಸ್ಥೆಯಲ್ಲಿ ಬಳಕೆದಾರ ಸ್ನೇಹಿ ಪ್ಲಾನ್, ವೇಗ ಸೇವೆ, ಇನ್ನಿತರ ಸೌಲಭ್ಯ ನೀಡುತ್ತಿವೆ. ಇದೀಗ ಹೊಸದಾಗಿ eSIM (ಇ-ಸಿಮ್) ಸೇವೆ ಪರಿಚಯಿಸಿದೆ. ಮುಂದಿನ ದಿನಗಳಲ್ಲಿ ಬಿಎಸ್‌ಎನ್‌ಎಲ್ ಗ್ರಾಹಕರು ಭೌತಿಕ ಸಿಮ್ ಕಾರ್ಡ್ ಇಲ್ಲದೆ ತಮ್ಮ ಮೊಬೈಲ್ ಸಂಪರ್ಕ ಸಾಧಿಸಬಹದು. ಇದಕ್ಕೆ ಕ್ಯೂಆರ್ ಕೋಡ್ ಒಂದೊಂದಿದ್ದರೆ ಸಾಕು.
ಹೌದು, ಸಿಮ್ ಕಾರ್ಡ್ ಬೇಡ, ಕ್ಯೂಆರ್ ಕೋಡ್ ಇದ್ದಾರೆ ಸಾಕು ನೀವು ಸಂಪರ್ಕ ಸಾಧಿಸುವ ಇ-ಸಿಮ್ ಸೇವೆಯನ್ನು ಬಳಕೆದಾರರಿಗೆ ನೀಡುತ್ತಿದೆ. ನೀವು 2G, 3G, 4G ಸಂಪರ್ಕ ಸಹ ಪಡೆಯಬಹುದು. ಕ್ಯೂಆರ್ ಕೋಡ್‌ನಿಂದಲೇ ಇ-ಸಿಎಮ್ ಆಕ್ವಿವ್ ಮಾಡಿಕೊಳ್ಳಬಹುದು. ಎರಡು ಸಿಮ್ ಬಳಕೆದಾರರಿಗೆ ಇದು ಅನುಕೂಲ ಒದಗಿಸಲಿದೆ. ಒಂದು ವೇಳೆ ನೀವು ಭಾರತದಿಂದ ವಿದೇಶಕ್ಕೆ ತೆರಳಿದಾಗ, ಅಲ್ಲಿಂದಲೂ ಇ-ಸಿಮ್ ಕಾರ್ಯ ನಿರ್ವಹಿಸುತ್ತದೆ. ಅಲ್ಲಿದ್ದುಕೊಂಡೆ ನೀವು ಭಾರತದವರನ್ನು ಸಂಪರ್ಕಿಸಬಹುದು. ಸ್ಥಳೀಯ ಆಪರೇಟರ್ ಸೇವೆಗಳನ್ನು ಪಡೆಯಬಹುದು ಎಂದು BSNL ಮಾಹಿತಿ ನೀಡಿದೆ.

ಟಾಟಾ ಕಮ್ಯುನಿಕೇಷನ್ಸ್‌ನ ಮೂವ್ ಪ್ಲಾಟ್‌ಫಾರ್ಮ್‌ನಿಂದ BSNL ಇ-ಸಿಮ್ ಸೇವೆ ನಿರ್ವಹಣೆ ಮಾಡಲಾಗುತ್ತಿದೆ. ಇದರಿಂದ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆ ಇಡಲಾಗಿದೆ. eSIM ತಂತ್ರಜ್ಞಾನ ಗ್ರಾಹಕರಿಗೆ ಹೆಚ್ಚು ಭದ್ರತೆ ಒದಗಿಸುತ್ತದೆ. ಅಂತಾರಾಷ್ಟ್ರೀಯ ರೋಮಿಂಗ್‌ನಲ್ಲಿ ಸಹಾಯ ಮಾಡಲಿದೆ ಎಂದು ಬಿಎಸ್‌ಎನ್‌ಎಲ್‌ನ ಅಧ್ಯಕ್ಷ ಎ. ರಾಬರ್ಟ್ ರವಿ ತಿಳಿಸಿದರು.
ಬಿಎಸ್‌ಎನ್ ಎಲ್ ತನ್ನ ಸೇವೆಗಳನ್ನು ದೇಶಾದ್ಯಮತ ವೇಗವಾಗಿ ವಿಸ್ತರಿಸುತ್ತಿದೆ. ಇತ್ತೀಚೆಗಷ್ಟೇ ದೆಹಲಿಯಲ್ಲಿ 4G ನೆಟ್‌ವರ್ಕ್ ಆರಂಭಿಸಿದೆ. ಅದಕ್ಕಾಗಿ ಅಂಚೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ದೇಶದ 1.65 ಲಕ್ಷ ಅಂಚೆ ಕಚೇರಿಗಳಲ್ಲಿ ಸಿಮ್ ಮತ್ತು ರೀಚಾರ್ಜ್ ಲಭ್ಯವಾಗುವಂತೆ ಮಾಡಿದೆ. ತಮಿಳುನಾಡಿನಲ್ಲಿ ಈಗಾಗಲೇ eSIM ಸೇವೆ ಪ್ರಾರಂಭಿಸಿದ್ದು, ದೇಶಾದ್ಯಂತ ಶೀಘ್ರವೇ ವಿಸ್ತರಣೆ ಆಗಲಿದೆ.
ಬಿಎಸ್‌ಎನ್‌ಎಲ್ 4ಜಿ ಸೇವೆಯನ್ನು ಎಲ್ಲ ನಗರಗಳಿಗೆ ವಿಸ್ತರಣೆ ಮಾಡಲಿದೆ. ಇದರೊಂದಿಗೆ 5ಜಿ ಸೇವೆ ಆರಂಭಿಸಲು ಈಗಾಗಲೇ ಹಲವು ನಗರಗಳಲ್ಲಿ ಪ್ರಾಯೋಗಿಕ ಪ್ರಯೋಗವನ್ನು ಯಶಸ್ವಿ ಮಾಡಿದೆ. 3ಜಿ ಸೇವೆ ನಿಲ್ಲಿಸಿ ಹೊಸದಾಗಿ ಸ್ಥಾಪಿಸಿದ್ದ ಒಂದು ಲಕ್ಷಕ್ಕೂ ಹೆಚ್ಚು ಟವರ್‌ಗಳಲ್ಲಿ 4ಜಿ ಇಂಟರ್‌ನೆಟ್ ಸೇವೆ ಶುರು ಮಾಡಿದೆ. ಮುಂದಿನ ದಿನಗಳಲ್ಲಿ 5 ಸೇವೆ ಸಹ ಆರಂಭಿಸುವ ಪ್ಲಾನ್ ಮಾಡಿಕೊಂಡಿದೆ. ಅಷ್ಟೇ ಅಲ್ಲದೇ ಗ್ರಾಹಕರನ್ನು ಸೆಳೆಯು ಜನಸ್ನೇಹಿ ಮೊಬೈಲ್ ರಿಚಾರ್ಜ್ ಪ್ಲಾನ್‌ಗಳು, ಉಚಿತ ಸಿಮ್‌ಗಳನ್ನು ವಿತರಿಸಿದೆ. ಹೆಚ್ಚುವರಿ ಟಾವರ್‌ಗಳನ್ನು ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ.












Click it and Unblock the Notifications