BNSL 5ಜಿ ಇಂಟರ್‌ನೆಟ್‌ಗೆ ಹೆಸರು ಸೂಚಿಸಿ: ಮೊದಲು 4ಜಿ ಸೇವೆ ಸರಿಯಾಗಿ ಕೊಡಿ! ಎಂದ ಬಳಕೆದಾರರು
ಬೆಂಗಳೂರು, ಜೂನ್ 13: ಅತೀ ಕಡಿಮೆ ಬೆಲೆಗೆ ಮೊಬೈಲ್ ರಿಚಾರ್ಜ್ ಸೇವೆ ನೀಡುತ್ತಿರುವ ಕೇಂದ್ರ ಸರ್ಕಾರಿ ಅಧೀನದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಟೆಲಿಕಾಂ ಕಂಪನಿಯು 5ಜಿ ಇಂಟರ್‌ನೆಟ್ ಸೇವೆ ಆರಂಭಿಸಲು ಸಜ್ಜಾಗಿದೆ. ಈ ಸಂಬಂಧ ಸಾರ್ವಜನಿಕರಿಂದ ಮುಂಬರಲಿರುವ BSNL 5G Internet Service ಗೆ ಹೆಸರು ನೀಡುಂತೆ ಕೋರಿತ್ತು. ಅದಕ್ಕೆ ಜೂನ್ 13ರೊಳಗೆ (ಇಂದು) ಮುಂದೆ ಇತಿಹಾಸ ಸೃಷ್ಟಿಸುವಂತಹ ಸೂಕ್ತ ಹೆಸರು ಸೂಚಿಸುವಂತೆ ತಿಳಿಸಿದೆ. ಸಾಕಷ್ಟು ಮಂದಿ ಅನೇಕ ಹೆಸರುಗಳನ್ನು ನೀಡಿದ್ದಾರೆ. ಅದರ ವಿವರ ಮುಂದಿದೆ.
ಸದರಿ ಜೂನ್ ಹೊತ್ತಿಗೆ BSNL ಒಂದು ಲಕ್ಷ ಹೊಸ ಟವರ್‌ಗಳನ್ನು ಯಶಸ್ವಿಯಾಗಿ ಸ್ಥಾಪಿಸಿದೆ. ದೇಶಾದ್ಯಂತ ಹೆಚ್ಚುವರಿಯಾಗಿ ಒಂದು ಲಕ್ಷ (100,000) 4G ಟವರ್‌ಗಳನ್ನು ಸ್ಥಾಪಿಸಲು ಮುಂದಾಗಿದೆ. ಇದಕ್ಕೆ ಕೇಂದ್ರ ಸಚಿವ ಸಂಪು ಸಭೆಯಲ್ಲಿ ಶೀಗ್ರವೇ ಅನುಮೋದನೆ ಸಿಗುವ ವಿಶ್ವಾಸ ಇದೆ ಎಂದು ಕೇಂದ್ರ ಸಂವಹನ ರಾಜ್ಯ ಸಚಿವ ಪೆಮ್ಮಸಾನಿ ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.

3ಜಿ ಯಿಂದ 4ಜಿಗೆ ಅಪ್‌ಗ್ರೇಡ್ ಆದ BSNL ವಿರುದ್ಧ ಜನರು ಕೆಂಡವಾಗಿದ್ದಾರೆ. ಪೋರ್ಟ್ ಆದ ಅದೆಷ್ಟೋ ಸಿಮ್‌ಗಳಿಗೆ ಸರಿಯಾದ ನೆಟ್‌ವರ್ಕ್ ಸಿಗುತ್ತಿಲ್ಲ. ಕರೆಗಳಲ್ಲಿ ಧ್ವನಿ ಸರಿಯಾಗಿ ಕೇಳುವುದಿಲ್ಲ. ಯಾಕಾದ್ರು ಈ ಬಿಎಸ್‌ಎನ್‌ಎಲ್‌ಗೆ ಪೋಟ್ ಆದೆ, ಹೊಸ ಸಿಮ್ ಖರೀದಿಸಿ ಎಂದು ಬಳಕೆದಾರರು ವ್ಯಥೆ ಪಡುತ್ತಿದ್ದಾರೆ.
5ಜಿ ಸೇವೆಗೆ ಸೂಕ್ತ ಹೆಸರುಗಳು..!
ಇದರ ಮಧ್ಯೆ 5ಜಿ ಗೆ ಅಪ್‌ಗ್ರೇಡ್ ಆಗುವ ತಯಾರಿಯು ಜೋರಾಗಿದೆ. ಅಗತ್ಯ ಟವರ್ ನಿರ್ಮಿಸುತ್ತಿದ್ದಂತೆ ವೇಗ ಅಂತರ್ಜಾಲ ಸೇವೆ ಜಾರಿಗೆ ತರಲಾಗುತ್ತಿದೆ. ಹೀಗಾಗಿ ಆ 5ಜಿ ಸೇವೆ ಸೂಕ್ತವಾದ ಹೆಸರು ನೀಡುವಂತೆ ಸಂಸ್ಥೆ ಕೇಳಿದೆ. BSNL ಪೋಸ್ಟ್ ಕೆಲಗೆ ಕಾಮೆಂಟ್ ಮಾಡುವಂತೆ ತಿಳಿಸಿತ್ತು. ಇದಕ್ಕೆ ನೆಟ್ಟಿಗರು ಕೊಟ್ಟ ಹೆಸರು ನೋಡುವುದಾದರೆ, 'BSNL 5G, Vaayu, Vidyut, Hi5, AryaWave 5G, BSNL Blitz, Bhaarat5G, ಸೇರಿದಂತೆ ಹಲವು ಹೆಸರುಗಳನ್ನು ನೀಡಿದ್ದಾರೆ. ಈ ಮೂಲಕ ಹಲವರು ಬಿಎಸ್‌ಎನ್‌ಎಲ್ ಸೇವೆ ಬಳಕೆಗೆ ಉತ್ಸುಕರಾಗಿದ್ದಾರೆ.
Brainstorm BSNL 5G Name
— BSNL India (@BSNLCorporate) June 12, 2025
Suggest a name for BSNL’s upcoming 5G service before 13th June 5 pm.
Make history. Name the future of BSNL 5G.
Drop your suggestion in the comments below!#BSNL5G#NameBSNL5G#5GWithBSNL#BSNIndia#DigitalIndia pic.twitter.com/o7KmFaeBvJ
ಮೊದಲು 4ಜಿ ಸೇವೆ ಸರಿಯಾಗಿ ಕೊಡಿ?
ಕರ್ನಾಟಕದ ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ, ಮುಂಬೈ, ಚೆನ್ನೈ ಸೇರಿದಂತೆ ಇತರ ಮಹಾನಗರಗಳಲ್ಲಿ BSNL ಸೇವೆ ಸಮರ್ಪಕವಾಗಿ ಸಿಗುತ್ತಿಲ್ಲ. 4ಜಿಗೆ ಅಪ್‌ಗ್ರೇಡ್ ಆಗಿದ್ದಾಗಿ ಸಂಸ್ಥೆ ತಿಳಿಸಿದೆ. ವ್ಯಾಪ್ತಿ ಪ್ರದೇಶದಿಂದ ದೂರವಿದ್ದಾರೆ ಎಂಬ ಧ್ವನಿ ಮಾತ್ರ ಕೇಳಿಸುತ್ತದೆ ವಿನಃ ಕರೆಗಳು ಸರಿಯಾಗಿ ಹೋಗುತ್ತಿಲ್ಲ. ಶೇಕಡಾ 10ರಷ್ಟು 4ಜಿ ಇಂಟರ್‌ನೆಟ್ ಸೇವೆ ಸರಿಯಾಗಿ ಸಿಗುತ್ತಿಲ್ಲ. ಮೊದಲಿದ್ದ 3 ಜಿ ಇಂಟರ್‌ನೆಟ್ ಸೇವೆ ಎಷ್ಟೋ ಪಾಲಿಗೆ ಉತ್ತಮವಾಗಿತ್ತು. ಸದ್ಯದ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಅದೆಷ್ಟೋ ಬಾರಿ ದೂರು ನೀಡಿದರೆ ಖ್ಯಾರೆ ಎನ್ನುತ್ತಿಲ್ಲ. ನಮ್ಮ ದೂರು, ಮನವಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕೆಲವರು ಸಮಸ್ಯೆ ವಿವರಿಸಿದ್ದಾರೆ.
ಮತ್ತೆ 01 ಲಕ್ಷ ಟವರ್ ಯೋಜನೆಗೆ ಅನುಮೋದನೆ?
ಕೆಲವರಿಗೆ ಮರುತ್ತರ ನೀಡಿರುವ BSNL ಶೀಘ್ರವೇ ಇಂಟರ್‌ನೆಟ್ ಸಮಸ್ಯೆ ಬಗೆಹರಿಸಲಾಗುವುದು. ಆದ ತೊಂದರೆಗೆ ವಿಷಾಧ ವ್ಯಕ್ತಪಡಿಸಿದೆ. 4ಜಿ ಸೇವೆಯಲ್ಲಿನ ವ್ಯತ್ಯಯ ಗಮನಿಸಿ ಸುಧಾರಿತ ಸೇವೆ ನೀಡಲಾಗುವುದು ಎಂದು ಭರವಸೆ ನೀಡಿದೆ. ಇತ್ತ ಹೊಸದಾಗಿ ಮತ್ತೆ ಒಂದು ಲಕ್ಷ ಹೆಚ್ಚುವರಿ ಟವರ್ ಸ್ಥಾಪಿಸಲು ನಿರ್ಧರಿಸಿರುವ BSNL ಗೆ ಕೇಂದ್ರ ಶೀಘ್ರವೇ ಯೋಜನೆಗೆ ಅನುಮೋದನೆ ನೀಡುವ ಸಾಧ್ಯತೆ ಇದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications