BSNL: ಕೈಗೆಟುಕುವ ಬೆಲೆಗೆ ಸಿಮ್ ಇಲ್ಲದೇ 5ಜಿ ಸೇವೆ ಪಡೆಯಲು ಸಿದ್ಧರಾಗಿ, ಏನಿದು?
ಬೆಂಗಳೂರು, ಜೂನ್ 24: ಭಾರತ ಸರ್ಕಾರದ ಅಧಿನದಲ್ಲಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಬಳಕೆದಾರ ಸ್ನೇಹಿ ರಿಚಾರ್ಜ್ ಪ್ಲಾನ್‌ಗಳನ್ನು ಘೋಷಿಸುವ ಜೊತೆಗೆ ಹೊಸ ಉಪಕ್ರಮ ತಂದಿದೆ. ಸಿಮ್ ಕಾರ್ಡ್ ಇಲ್ಲದೇ ನೀವು ಅತೀ ಕಡಿಮೆ ಬೆಲೆಗೆ 5ಜಿ ಸೇವೆಯನ್ನು ಪಡೆಯುವ ಹೊಸ ತಾಂತ್ರಿಕ ಸೌಕರ್ಯವನ್ನು ಈ ಟೆಲಿಕಾಂ ಸಂಸ್ಥೆ ಇತ್ತೀಚೆಗೆ ಲೋಕಾರ್ಪಣೆ ಮಾಡಿದೆ.
BSNL ವಾರ ತನ್ನ ಕ್ವಾಂಟಮ್ 5G ಸ್ಥಿರ ವೈರ್‌ಲೆಸ್ ಆಕ್ಸೆಸ್ (FWA) ಸೇವೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿದೆ. ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆ ಮುಖ್ಯಸ್ಥರಾದ ಅಮೀರ್‌ಪೇಟೆ, ಎ. ರಾಬರ್ಟ್ ಜೆ. ರವಿ ನೇತೃತ್ವದಲ್ಲಿ ಸೇವೆಗೆ ಚಾಲನೆ ನೀಡಲಾಗಿದೆ. ಸಿಮ್ ಇಲ್ಲದೇ ಇದನ್ನು ವಿನ್ಯಾಸ ಮಾಡಲಾಗಿದ್ದು, ನೂತನ 5ಜಿ ಸೇವೆ ಲಭ್ಯವಾಗಲಿದೆ. ಸದ್ಯ 4ಜಿಗೆ ಪರಿಪೂರ್ಣವಾಗಿ ಬಿಎಸ್‌ಎನ್ಎಲ್ ಅಪ್‌ಗ್ರೇಡ್ ಆಗಿದೆ. ಹೀಗಿದ್ದರು ಕೆಲವೆಡೆ ಉಂಟಾದ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸುವಲ್ಲಿ ಅಧಿಕಾರಿಗಳು ನಿರತವಾಗಿದ್ದಾರೆ.

BSNL ಡೈರೆಕ್ಟ್-ಟು-ಡಿವೈಸ್ ಗೆ ಸಂಪರ್ಕ ಸಾಧಿಸುತ್ತದೆ. ಇದಕ್ಕೆ ಯಾವುದೇ ಸಿಮ್ ಅಗತ್ಯ ಇರುವುದಿಲ್ಲ. ಬದಲಾಗಿ ಬಳಕೆದಾರರ ಸ್ವಯಂ ದೃಢೀಕರಣ ಬೇಕಾಗಿರುತ್ತದೆ. ದೇಶದ ಭಾರತದ ಮೊದಲ ಉತ್ಪಾದನಾ-ದರ್ಜೆಯ ಸಿಮ್ ರಹಿತ 5ಜಿ ಸೇವೆಯಾಗಿದೆ. ದೇಶಿಯ ತಂತ್ರಜ್ಞಾನ ಬಳಿಸಿ ಈ ಸೇವೆ ವಿನ್ಯಾಸ ಮಾಡಲಾಗಿದೆ. ನೆಟ್‌ವರ್ಕ್ ಸ್ಟ್ಯಾಕ್ - ಕೋರ್‌ನಿಂದ RAN ಮತ್ತು CPE ವರೆಗೆ ಎಲ್ಲ ತಾಂತ್ರಿಕವು ಭಾರತದ್ದೆ ಆಗಿದೆ. ಇದು ಆತ್ಮನಿರ್ಭರ ಭಾರತ್ ಸಾಕಾರಕ್ಕೆ ಪೂರಕವಾಗಿದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.
ಅಧಿಕ ವೇಗದ ಸೇವೆ, ಕಾರ್ಯಕ್ಷಮತೆ
ಹೌದು, ಹೈದರಾಬಾದ್ ನಲ್ಲಿನ ಅಮೀರ್‌ಪೇಟೆಯಲ್ಲಿ 5G ಸ್ಥಿರ ವೈರ್‌ಲೆಸ್ ಆಕ್ಸೆಸ್ (FWA) ಪರೀಕ್ಷೆಗಳನ್ನು ನಡೆಸಲಾಯಿತು. ಅಲ್ಲಿ ಪ್ರತಿ ಸೆಕೆಂಡ್‌ಗೆ 980 Mb ವೇಗದಲ್ಲಿ ವಿಡಿಯೋ, ಇತರ ಮಾಹಿತಿ ಡೌನ್‌ಲೋಡ್ ಆಗಿದೆ. 140 Mbps ಅಪ್‌ಲೋಡ್ ವೇಗ ಹೊಂದಿದೆ. 10 ಎಂಎಸ್ ಲೇಟೆನ್ಸಿ ಸಹ ಒದಗಿಸಿದೆ. 4ಕೆ ವಿಡಿಯೋ ವೀಕ್ಷಣೆ, ಕ್ಲೌಡ್ ಗೇಮಿಂಗ್ ಗೂ ಸಹಕಾರಿಯಾಗಿದೆ.
ಸುಲಭವಾಗಿ ಸ್ಥಾಪಿಸಬಹುದಾದ ಸೇವೆ ಇದಾಗಿದೆ. ಗ್ರಾಹಕರ ಬಳೆಗೆ ಫೈಬರ್ ರೀತಿ ನೆಲ ಅಗೆಯುವುದು ಅಗತ್ಯವಿಲ್ಲ. ಪ್ಲಗ್-ಅಂಡ್-ಪ್ಲೇ ಮಾಡಬೇಕಷ್ಟೆ. ಹೈದರಾಬಾದ್‌ನಲ್ಲಿ ಟವರ್ ಗ್ರಿಡ್ ಅನ್ನು ಬಳಸಿ ಶೇಕಡಾ 85ರಷ್ಟು ಮನೆಗಳಿಗೆ ಸೇವೆ ನೀಡಲಾಗುತ್ತದೆ.
ಬಿಎಸ್‌ಎನ್‌ಎಲ್ 5ಜಿ FWA ನಂತರ ಮುಂದೇನು?
FWA 5ಜಿ 100 ಎಂಬಿಪಿಎಸ್ ಸೇವೆಗೆ ರೂ.999 ಹಾಗೂ 300 ಎಂಬಿಪಿಎಸ್ ಗೆ ರೂ. 1499 ರಿಂದ ಆರಂಭವಾಗಲಿದೆ. ಕೈಗಾರಿಕೆ, ಸಣ್ಣ, ಮೈಕ್ರೋ ಕೈಗಾರಿಕೆ ವಲಯಗಳಲ್ಲಿ ಇದರ ಅಗತ್ಯತೆ ಇರುತ್ತದೆ. ಅದನ್ನು ಗಮನಿಸಿ ಈ ಸೇವೆ ಆರಂಭಿಸಲಾಗಿದೆ. ಸದ್ಯ BSNL ದೇಶದ ಆರು ಪ್ರಮುಖ ನಗರಗಳಾದ ಬೆಂಗಳೂರು, ಪಾಂಡಿಚೇರಿ, ವಿಶಾಖಪಟ್ಟಣಂ, ಪುಣೆ, ಗ್ವಾಲಿಯರ್ ಮತ್ತು ಚಂಡೀಗಢ ನಗರಗಳಲ್ಲಿ ಇದೇ ವರ್ಷ ಸೆಪ್ಟೆಂಬರ್ ವೇಳೆಗೆ ಪೈಲಟ್ ಸೇವೆಯನ್ನು ಆರಂಭಿಸಲಿದೆ.












Click it and Unblock the Notifications