ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ಪಾಸ್ ವರ್ಡ್ ಬದಲಿಸಲು ಕೋರಿದ BSNL

Posted By:
Subscribe to Oneindia Kannada

ನವದೆಹಲಿ, ಜುಲೈ 28: ತನ್ನ ನೆಟ್ ವರ್ಕ್ ವ್ಯವಸ್ಥೆಯು ನಿಗೂಢ ವೈರಸ್ ನ ತೊಂದರೆಗೆ ಒಳಗಾಗಿರುವ ಹಿನ್ನೆಲೆಯಲ್ಲಿ ತನ್ನೆಲ್ಲಾ ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ತಕ್ಷಣವೇ ತಮ್ಮ ಡಿಫಾಲ್ಟ್ ಸಿಸ್ಟಂ ಪಾಸ್ ವರ್ಡ್ ಗಳನ್ನು ಬದಲಿಸುವಂತೆ ಬಿಎಸ್ಸೆನ್ನೆಲ್ ಸೂಚನೆ ನೀಡಿದೆ.

ಗುರುವಾರವೇ ತನ್ನ ಗ್ರಾಹಕರಿಗೆ ಈ ಸೂಚನೆ ರವಾನಿಸಿರುವ ಬಿಎಸ್ಸೆನ್ನೆಲ್, ಸದ್ಯಕ್ಕೆ ತನಗೆ ಆಗಿರುವ ತೊಂದರೆಯ ನಿವಾರಣೆಯಲ್ಲಿ ನಿರತವಾಗಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಸದ್ಯಕ್ಕೆ ಬಂದಿರುವ ಮಾಹಿತಿ ಪ್ರಕಾರ, ಸುಮಾರು 2000 ಗ್ರಾಹಕರ ಮಾಡೆಮ್ ಗಳು ವೈರಸ್ ದಾಳಿಗೆ ತುತ್ತಾಗಿವೆ ಎಂದು ಹೇಳಲಾಗಿದೆ. ಆದರೆ, ಬಿಎಸ್ಸೆನ್ನೆಲ್ ನ ಆಂತರಿಕ ವ್ಯವಸ್ಥೆಗೆ ಇದರಿಂದ ಯಾವುದೇ ಧಕ್ಕೆಯಾಗಿಲ್ಲ ಎಂದು ಸಂಸ್ಥೆ ಹೇಳಿದೆ.

BSNL Asks Broadband Users to Change Passwords After Malware Attack

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಬಿಎಸ್ಸೆನ್ನೆಲ್ ಮುಖ್ಯಸ್ಥ ಅನುಪಮ್ ಶ್ರೀವಾಸ್ತವ ಅವರು, ''ಬಿಎಸ್ಸೆನ್ನೆಲ್ ಗ್ರಾಹಕರು ಈವರೆಗೆ ಯಾರು admin ಎಂಬ ಪಾಸ್ ವರ್ಡ್ ಅನ್ನು ಬಳಸುತ್ತಿದ್ದರೋ ಅವರ ಮಾಡೆಮ್ ಗಳಿಗೆ ವೈರಸ್ ತೊಂದರೆಯಾಗಿದೆಯಷ್ಟೇ. ಹಾಗಾಗಿ, ಆ ವೈರಸ್ ಗಳು ಮತ್ತಷ್ಟು ಮಾಡೆಮ್ ಗಳಿಗೆ ತಗಲುವ ಮುನ್ನವೇ ತಕ್ಷಣವೇ ಪಾಸ್ ವರ್ಡ್ ಬದಲಿಸಬೇಕೆಂದು ಕೋರಲಾಗಿದೆ'' ಎಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
State-owned telecom operator BSNL on Thursday said it has advised broadband users to change the default system password after a section of its broadband system was hit by a malware attack earlier this week.
Please Wait while comments are loading...