BSNL 24gb Free Data: ಗ್ರಾಹಕರಿಗೆ ಸಹಿ ಸುದ್ದಿ, 24gb ಉಚಿತ ಇಂಟರ್‌ನೆಟ್ ಕೊಡುಗೆ: ಪಡೆಯುವುದು ಹೇಗೆ?
ಬೆಂಗಳೂರು, ಅಕ್ಟೋಬರ್ 05: ಖಾಸಗಿ ಟೆಲಿಕಾಂ ಸಂಸ್ಥೆಗಳ ದುಬಾರಿ ರಿಚಾರ್ಜ್ ಪ್ಲಾನ್, ದುಬಾರಿ ಯೋಜನೆಗಳ ಮಧ್ಯೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಕೆಲವು ತಿಂಗಳುಗಳಿಂದ ಜನಸ್ನೇಹಿ ಪ್ಲಾನ್‌ಗಳಿಂದ ಗಮನ ಸೆಳೆಯುತ್ತದೆ. ತನ್ನ ಗ್ರಾಹಕರಿಗೆ BSNL ಕಡಿಮೆ ಬೆಲೆಗೆ ರಿಚಾರ್ಜ್ ಯೋಜನೆ ಘೋಷಣೆ ಬೆನ್ನಲ್ಲೆ ಇದೀಗ, 24GB ಇಂಟರ್‌ನೆಟ್ ಡೇಟಾ ಅನ್ನು ಉಚಿತವಾಗಿ ನೀಡುವುದಾಗಿ ತಿಳಿಸಿದೆ.
ಜಿಯೋ, ಏರ್‌ಟೆಲ್ ಮತ್ತು ವಡಾಫೋನ್‌ನಂತಹ ಖಾಸಗಿ ಟೆಲಿಕಾಂ ಸಂಸ್ಥೆಗಳು ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಮೊಬೈಲ್ ರಿಚಾರ್ಜ್ ಮೇಲೆ ಹೆಚ್ಚಿನ ಸುಂಕ ಹೇರಿವೆ. ಈಗಾಗಲೇ ಶೇಕಡಾ 15 ರಷ್ಟು ಹೆಚ್ಚಿಸಿವೆ. ಹೀಗಾಗಿ ಕೈಗೆಟುವ ಬೆಲೆಯಲ್ಲಿ ಹಲವು ರಿಚಾರ್ಜ್ ಪ್ಲಾನ್ ಒದಗಿಸುತ್ತಿರುವ BSNL ಸಿಮ್‌ಗೆ ಅನೇಕ ಗ್ರಾಹಕರು ಪೋರ್ಟ್ ಆಗುತ್ತಿದ್ದಾರೆ. ಕೆಲವರಂತು ಹೊಸ ಸಿಮ್ ಖರೀದಿಸುತ್ತಿದ್ದಾರೆ.

ಸದ್ಯ ಕೇಂದ್ರ ಸರ್ಕಾರಿ ವ್ಯಾಪ್ತಿಯ ಟೆಲಿಕಾಂ ಸಂಸ್ಥೆ BSNL 24 ವರ್ಷ ನಿರಂತರ ಸೇವೆ ಪೂರ್ಣಗೊಳಿಸಿ 25ನೇ ವರ್ಷಕ್ಕೆ ಕಾಲಿಟ್ಟಿದೆ. ಹೀಗಾಗಿ ಕಂಪನಿಯು ತನ್ನ ಚಂದಾದಾರರಿಗೆ ಹೆಚ್ಚುವರಿ ಉಚಿತ ಡೇಟಾ ನೀಡುವುದಾಗಿ ಘೋಷಿಸಿ ಟ್ವೀಟ್ ಮಾಡಿದೆ. BSNL ಬಳಕೆದಾರರು 24GB ಡೇಟಾ ಅನ್ನು ಉಚಿತವಾಗಿ ಪಡೆಯಲು ಏನು ಮಾಡಬೇಕು? ಯಾರು ಈ ಕೊಡುಗೆಗೆ ಅರ್ಹರು ಎಂಬ ಮಾಹಿತಿ ಇಲ್ಲಿದೆ.
ಉಚಿತ ಡೇಟಾ ಹೇಗೆ ಪಡೆಯಬೇಕು, ಮಾನದಂಡಗಳು
BSNL ಚಂದಾದಾರರು 24 GB ಹೆಚ್ಚುವರಿ ಡೇಟಾ ಪಡೆಯಲು ಬಯಸಿದರೆ, ನೀವು 500 ರೂಪಾಯಿಗಿಂತಲೂ ಹೆಚ್ಚು ಮೌಲ್ಯದ ವೋಚರ್‌ಗಳೊಂದಿಗೆ ರೀಚಾರ್ಜ್ ಮಾಡಬೇಕಾಗುತ್ತದೆ. ಅಂದರೆ ಇದೇ ತಿಂಗಳ ಅಕ್ಟೋಬರ್ 1ರಿಂದ ಅಕ್ಟೋಬರ್ 24ರ ವರೆಗೆ ರೀಚಾರ್ಜ್ ಮಾಡಿಸಿರಬೇಕು.

ಕಳೆದ ಎರಡೂವರೆ ದಶಕದಲ್ಲಿ ಬಿಎಸ್‌ಎನ್‌ಎಲ್ ಕಂಪನಿಯು ತನ್ನದೇ ಆದ ರೀತಿಯಲ್ಲಿ ಹಳ್ಳಿ ಹಳ್ಳಿಗೂ ಸೇವೆ ನೀಡುತ್ತಾರೆ ಬಂದಿದೆ. 24 ವರ್ಷಗಳಿಂದ BSNL ಭಾರತವನ್ನು ಹಳ್ಳಿಯಿಂದ ಪಟ್ಟಣ, ನಗರಗಳಿಗೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಿದೆ. ಈ ಮೂಲಕ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ₹500 ಕ್ಕಿಂತ ಹೆಚ್ಚಿನ ರೀಚಾರ್ಜ್ ಸಹಿ ರಿಚಾರ್ಜ್ ಮಾಡಿಸಿದರೆ ನೀವು 24 GB ಹೆಚ್ಚುವರಿ ಉಚಿತ ಡೇಟಾದ ವೋಚರ್ ಪಡೆಯುತ್ತೀರಿ ಎಂದು ಸಂಸ್ಥೆ ತಿಳಿಸಿದೆ.
2000ರ ಅಕ್ಟೋಬರ್ ನಲ್ಲಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಅನ್ನು ಹಿಂದಿನ ಟೆಲಿಕಾಂ ಸೇವೆಗಳ ಕಾರ್ಪೊರೇಟೀಕರಣದ ಮೂಲಕ ಸ್ಥಾಪನೆ ಆಯಿತು. ಅಲ್ಲಿಂದ ಬಿಎಸ್ಎನ್‌ಎಲ್ ದೇಶಾದ್ಯಂತ ದೂರಸಂಪರ್ಕ ಸೇವೆ ನೀಡುತ್ತಾ ಬಂತು. ಪ್ರತಿ ಗ್ರಾಮೀಣ ಭಾಗದಲ್ಲೂ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಇದ್ದು, ಇಂದು 4g ಮತ್ತು 5gಗೆ ಅಪ್‌ಗ್ರೇಡ್ ಆಗುತ್ತಿದೆ.












Click it and Unblock the Notifications