ಖೋಟೋ ನೋಟು ಪತ್ತೆಗಾಗಿ ಬಿಎಸ್ಎಫ್ ಯೋಧರಿಗೆ ತರಬೇತಿ

Posted By:
Subscribe to Oneindia Kannada

ನವದೆಹಲಿ, ಫೆಬ್ರವರಿ 12: ಭಾರತೀಯ ಕರೆನ್ಸಿಯ ಖೋಟಾ ನೋಟುಗಳು ನೆರೆಯ ಬಾಂಗ್ಲಾದೇಶದಿಂದ ಭಾರತದೊಳಕ್ಕೆ ಆಗಮಿಸುತ್ತಿರುವುದನ್ನು ತಡೆಯಲು ಭಾರತ-ಬಾಂಗ್ಲಾದೇಶದ ಗಡಿ ಕಾಯುತ್ತಿರುವ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಸೈನಿಕರಿಗೆ ಖೋಟಾ ನೋಟುಗಳನ್ನು ಪತ್ತೆ ಹಚ್ಚುವ ವಿಶೇಷ ತರಬೇತಿ ನೀಡುವ ಕುರಿತಂತೆ ಬಿಎಸ್ಎಫ್ ಚಿಂತನೆ ನಡೆಸಿದೆ.

ಈ ಕುರಿತಂತೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಬಿಎಸ್ಎಫ್ ಮಾತುಕತೆ ಆರಂಭಿಸಿದೆ ಎಂದು ಮೂಲಗಳು ಹೇಳಿವೆ.

ನೂತನವಾಗಿ ಬಿಡುಗಡೆಗೊಂಡಿರುವ 2000 ರು. ಮುಖಬೆಲೆಯ ನೋಟುಗಳನ್ನು ಹೋಲುವ ಖೋಟಾ ನೋಟುಗಳನ್ನು ಮುದ್ರಿಸಿ ಬಾಂಗ್ಲಾದೇಶದಿಂದ ಭಾರತಕ್ಕೆ ರವಾನೆ ಮಾಡಲಾಗುತ್ತಿದೆ.[ಹಠಾತ್ ನೋಟ್ ಬ್ಯಾನ್ ನಿಂದ ಸಂಕಷ್ಟ ಆಯ್ತು ಎಂದ ಊರ್ಜಿತ್]

BSF in talks with RBI to train jawans to identify fake notes

ದಿನನಿತ್ಯವೂ ಇಲ್ಲಿಂದ ಖೋಟಾ ನೋಟುಗಳು ಭಾರತವನ್ನು ಪ್ರವೇಶಿಸದಂತೆ ಹಗಲು-ರಾತ್ರಿ ಬಿಎಸ್ಎಫ್ ಯೋಧರು ಗಡಿಗಳಲ್ಲಿನ ಚೆಕ್ ಪೋಸ್ಟ್ ಗಳ ಮೇಲೆ ಹದ್ದಿನ ಕಣ್ಣಿಟ್ಟು ತಪಾಸಣೆ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ 2000 ರು. ಮುಖಬೆಲೆಯ ನಕಲಿ ನೋಟುಗಳ ಬಂಡಲ್ ಗಳನ್ನೂ ಯೋಧರು ವಶಪಡಿಸಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಖೋಟಾ ನೋಟುಗಳನ್ನು ಥಟ್ಟನೆ ಗುರುತಿಸಲು ಅನುಕೂಲವಾಗುವಂತೆ ಯೋಧರಿಗೆ ವಿಶೇಷ ತರಬೇತಿಯ ಅವಶ್ಯಕತೆಯಿದ್ದು, ಈ ಬಗ್ಗೆ ರಿಸರ್ವ್ ಬ್ಯಾಂಕ್ ನ ನೆರವು ಪಡೆಯಲು ಯೋಚಿಸಲಾಗಿದೆ ಎಂದು ಹೇಳಲಾಗಿದೆ.[500, 1000 ರು. ನೋಟು ನಿಷೇಧ ಸರ್ಕಾರದ್ದು, ಆರ್ ಬಿಐನದ್ದಲ್ಲ!]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Border Security Force (BSF) is in talks with Reserve Bank of India (RBI) for imparting of training to its soldiers for identifying fake notes smuggled through India-Bangladesh border.
Please Wait while comments are loading...