ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಠಾಣ್ ಕೋಟ್‌ನಲ್ಲಿ ಉಗ್ರನನ್ನು ಕೊಂದ ಬಿಎಸ್‌ಎಫ್‌ ಯೋಧರು

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜನವರಿ 21 : ಪಾಕಿಸ್ತಾನದಿಂದ ಗಡಿ ನುಸುಳಿ ಪಠಾಣ್ ಕೋಟ್‌ ಪ್ರವೇಶಿಸಲು ಯತ್ನಿಸಿದ ಉಗ್ರನನ್ನು ಯೋಧರು ಹತ್ಯೆ ಮಾಡಿದ್ದಾರೆ. ಒಟ್ಟು ಮೂವರು ಉಗ್ರರು ಒಳನುಸುಳಲು ಯತ್ನಿಸಿದ್ದು, ಗುಂಡಿನ ಶಬ್ದ ಕೇಳಿದ ಬಳಿಕ ಇಬ್ಬರು ಪರಾರಿಯಾಗಿದ್ದಾರೆ.

ಗುರುವಾರ ಮುಂಜಾನೆ ತಾಷ್ ಚೆಕ್‌ಪೋಸ್ಟ್ ಬಳಿ ಈ ಘಟನೆ ನಡೆದಿದೆ. ಮುಂಜು ಮುಸುಕಿದ ವಾತಾವರಣವಿದ್ದ ವೇಳೆ ಮೂವರು ಗಡಿ ನುಸುಳಲು ಯತ್ನಿಸಿದ್ದರು. ಇದನ್ನು ಗಮನಿಸಿದ ಬಿಎಸ್‌ಎಫ್‌ ಯೋಧರು ಗುಂಡು ಹಾರಿಸಿದ್ದು, ಒಬ್ಬ ಉಗ್ರ ಸಾವನ್ನಪ್ಪಿದ್ದಾನೆ. [ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]

pathankot

ಗುಂಡು ಹಾರಿಸಿದ ತಕ್ಷಣ ಇಬ್ಬರು ಪಾಕಿಸ್ತಾನದ ಕಡೆ ಓಡಿ ಹೋಗಿದ್ದಾರೆ. ಮೂವರು ಅಕ್ರಮವಾಗಿ ಗಡಿ ನುಸುಳಲು ಯತ್ನಿಸುತ್ತಿದ್ದರು ಎಂದು ಬಿಎಸ್‌ಎಫ್ ಪಡೆಗಳು ಹೇಳಿವೆ. ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಯ ಬಳಿಕ ಭಾರತ-ಪಾಕ್ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಆದರೆ, ದಟ್ಟವಾದ ಮಂಜು ಕವಿದಿರುವಾಗ ಉಗ್ರರು ಒಳನುಗ್ಗಲು ಯತ್ನಿಸಿದ್ದಾರೆ. [ಪಾಕ್ ತನಿಖಾ ತಂಡ ಪಠಾಣ್ ಕೋಟ್ ಪ್ರವೇಶಿಸುವಂತಿಲ್ಲ]

ಪಠಾಣ್ ಕೋಟ್ ದಾಳಿಯ ಬಳಿಕ ಬಿಎಸ್‌ಎಫ್‌ ಯೋಧರು ಗಸ್ತು ಹೆಚ್ಚಿಸಿದ್ದಾರೆ. ಕೇಂದ್ರ ರಕ್ಷಣಾ ಇಲಾಖೆಯೂ ಅಕ್ರಮವಾಗಿ ಒಳನುಸುಳಿ ಉಗ್ರರು ಬಂದರೆ ಪಡೆಗಳೇ ಜಬಾಬ್ದಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿದೆ. ಮೃತಪಟ್ಟ ವ್ಯಕ್ತಿಯ ಮಾಹಿತಿಗಳನ್ನು ಸಂಗ್ರಹಣೆ ಮಾಡಲಾಗುತ್ತಿದೆ.

ಜನವರಿ 2ರಂದು ಪಠಾಣ್ ಕೋಟ್ ವಾಯುನೆಲೆಗೆ 6 ಉಗ್ರರು ನುಗ್ಗಿದ್ದರು. ಸುಮಾರು 60 ಗಂಟೆಗಳ ಕಾರ್ಯಾಚರಣೆ ಬಳಿಕ ವಾಯುನೆಲೆಯಲ್ಲಿ ಅಡಗಿದ್ದ ಎಲ್ಲಾ ಉಗ್ರರನ್ನು ಎನ್‌ಎಸ್‌ಜಿ ಕಮಾಂಡೋಗಳು ಹತ್ಯೆ ಮಾಡಿದ್ದರು. ಈ ದಾಳಿಯ ಬಳಿಕ ಪಠಾಣ್‌ ಕೋಟ್‌ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

English summary
One person suspected to be an infiltrator from Pakistan has been shot down at the Tash village in Pathankot. Two others managed to escape back to Pakistan. Three persons were attempting to infiltrate into India when the BSF spotted them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X