
ವರ Kiss ಕೊಟ್ಟಿದ್ದಕ್ಕೆ ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು!
ಸಂಭಾಲ್, ಡಿಸೆಂಬರ್ 01: ಇತ್ತೀಚಿನ ದಿನಮಾನಗಳಲ್ಲಿ ಮದುವೆ ಮುರಿಯೋದಕ್ಕೆ ಸಣ್ಣ ಸಣ್ಣ ವಿಷಯಗಳೇ ಕಾರಣಗಳಾಗುತ್ತಿವೆ. ಅಂಥದ್ದೇ ಒಂದು ಕಾರಣಕ್ಕೆ ವಧುವೇ ತನ್ನ ಮದುವೆಯನ್ನು ನಿಲ್ಲಿಸಿದ ಘಟನೆಯು ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆದಿದೆ.
ಕಳೆದ ಮಂಗಳವಾರ ರಾತ್ರಿ ಸುಮಾರು 300 ಅತಿಥಿಗಳ ಸಮ್ಮುಖದಲ್ಲಿ ವರನು ವೇದಿಕೆಯಲ್ಲೇ ತನ್ನ ಸಂಗಾತಿಗೆ ಚುಂಬಿಸಿದ ಎಂಬ ಕಾರಣಕ್ಕೆ ವಧುವು ತನ್ನ ಮದುವೆಯನ್ನೇ ರದ್ದುಗೊಳಿಸಿದ್ದಾಳೆ ಎಂದು ತಿಳಿದು ಬಂದಿದೆ.
ಬ್ಯಾಚುಲರ್ಸ್ ಬೆಚ್ಚಿ ಬೀಳುವ ಸುದ್ದಿ: ಈ ದೇಶದಲ್ಲಿ ಮದುವೆ ಆಗದಿದ್ರೆ ಮುಗೀತು ಕಥೆ!
ಸಾಮಾನ್ಯವಾಗಿ ದಂಪತಿಗಳು ಹಾರವನ್ನು ಬದಲಾಯಿಸಿಕೊಂಡ ನಂತರದಲ್ಲಿ ಅನಿರೀಕ್ಷಿತ ಹಾಗೂ ಆಶ್ಚರ್ಯಕರ ರೀತಿಯಲ್ಲಿ ವರನು ತನ್ನ ವಧುವಿಗೆ ಕಿಸ್ ಕೊಟ್ಟನು. ಇದರಿಂದ ಕುಪಿತಗೊಂಡ ವಧು ತಕ್ಷಣವೇ ವೇದಿಕೆಯಿಂದ ಹೊರನಡೆದರು, ನಂತರ ಪೊಲೀಸರಿಗೆ ಕರೆ ಮಾಡಿದರು. ಸ್ವತಃ ಪೊಲೀಸರೇ ರಾಜಿಗೆ ಮುಂದಾದರೂ ವಧು ಕೋಪಗೊಂಡು ಮದುವೆ ನಿರಾಕರಿಸುವುದಕ್ಕೆ ನಿಜವಾಗಿಯೂ ಒಂದು ಮುತ್ತು ಕಾರಣವಾಯಿತೇ ಎಂಬುದನ್ನು ಈ ವರದಿಯಲ್ಲಿ ಓದಿ ತಿಳಿಯಿರಿ.

ವರ ಕಿಸ್ ಕೊಡಲು ಕಾರಣವಾಯಿತೇ ಬೆಟ್?
23 ವರ್ಷದ ವಧು ಪದವೀಧರೆ ಆಗಿದ್ದಾರೆ. ವರನು ತನ್ನ ಸ್ನೇಹಿತರೊಂದಿಗೆ ಬೆಟ್ ಗೆಲ್ಲಲು ತನಗೆ ಕಿಸ್ ಕೊಟ್ಟಿದ್ದಾನೆ ಎಂಬುದನ್ನು ವಧು ಅರಿತುಕೊಂಡಿದ್ದಾಳೆ. ಇದರಿಂದಂ "ಅವನ ನಡುವಳಿಕೆ ಬಗ್ಗೆ ವಧುವಿಗೆ ಅನುಮಾನ ಹುಟ್ಟಿಕೊಂಡಿದೆ. ಆದ್ದರಿಂದಲೇ ಆತನೊಂದಿಗೆ ಮದುವೆಯನ್ನು ಕ್ಯಾನ್ಸಲ್ ಮಾಡುವುದಾಗಿ ವಧು ಹೇಳಿಕೊಂಡಿದ್ದಾಳೆ. ಈ ಹಂತದಲ್ಲಿ ಪೊಲೀಸರು ಮಧ್ಯಸ್ಥಿಕೆ ವಹಿಸಿ ರಾಜಿ ಸಂಧಾನ ಮಾಡುವುದಕ್ಕೆ ಮುಂದಾದರೂ ಸಹಿತ ವಧು ಮದುವೆಗೆ ನಿರಾಕರಿಸಿದ್ದಾಳೆ ಎಂದು ತಿಳಿದು ಬಂದಿದೆ.

ಪೊಲೀಸ್ ಠಾಣೆಯಲ್ಲಿ ಒಂದು ಮುತ್ತಿನ ಕಥೆ
ಮದುವೆ ಕ್ಯಾನ್ಸಲ್ ಆದ ನಂತರದಲ್ಲಿ ವರ ಮತ್ತು ವಧುವನ್ನು ಕರೆದುಕೊಂಡು ಪೊಲೀಸರು ಠಾಣೆಗೆ ತೆರಳಿದರು. ಈ ಸಂದರ್ಭದಲ್ಲಿ ಮದುವೆ ಮಂಟಪದಲ್ಲಿ ನಡೆದ ಘಟನೆಯ ಬಗ್ಗೆ ವಧುವು ಪೊಲೀಸರ ಎದುರಿನಲ್ಲಿ ಹೇಳಿದರು. "ನಾವು ವೇದಿಕೆಯಲ್ಲಿದ್ದಾಗ ಅವನು ನನ್ನನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದನು, ಆದರೆ ನಾನು ಅದನ್ನು ನಿರ್ಲಕ್ಷಿಸಿದೆ. ನಂತರ ಅವನು ಅನಿರೀಕ್ಷಿತವಾಗಿ ಚುಂಬಿಸಿದನು, ಇದರಿಂದ ನಾನು ಆಘಾತಕ್ಕೊಳಗಾಗಿದ್ದೇನೆ ಮತ್ತು ಅವಮಾನಿತಳಾಗಿದ್ದೇನೆ. ಅವರು ನನ್ನ ಸ್ವಾಭಿಮಾನದ ಬಗ್ಗೆ ಕಾಳಜಿ ವಹಿಸಲಿಲ್ಲ. ಹಲವು ಅತಿಥಿಗಳ ಮುಂದೆ ಕೆಟ್ಟದಾಗಿ ವರ್ತಿಸಿದರು. ಅವರು ಭವಿಷ್ಯದಲ್ಲಿ ಹೇಗೆ ವರ್ತಿಸುತ್ತಾರೆ? ಎಂಬುದೇ ಅನುಮಾನವಾಗಿದೆ. ಹಾಗಾಗಿ ನಾನು ಅವನೊಂದಿಗೆ ಹೋಗದಿರಲು ನಿರ್ಧರಿಸಿದೆ," ಎಂದು ವಧು ಹೇಳಿಕೊಂಡಿದ್ದಾರೆ.

ಮುದ್ದು ಅಳಿಯನ ಮುತ್ತಿನ ಕಥೆ ಹೇಳಿದ ಅತ್ತೆ!
"ನನ್ನ ಅಳಿಯ ಅವನ ಸ್ನೇಹಿತರಿಂದ ಪ್ರಚೋದಿಸಲ್ಪಟ್ಟಿದ್ದಾನೆ. ಈಗ ನನ್ನ ಮಗಳು ಅವನೊಂದಿಗೆ ಹೋಗಲು ಬಯಸುವುದಿಲ್ಲ, ನಾವು ಅವಳ ಮನವೊಲಿಸಲು ಪ್ರಯತ್ನಿಸಿದ್ದೇವೆ, ಆದರೆ ಅವಳು ಒಪ್ಪಲಿಲ್ಲ. ಕೆಲವು ದಿನ ಕಾಯಲು ಮತ್ತು ಆಕೆಗೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು," ಎಂದು ಅತ್ತೆ ಹೇಳಿದ್ದಾರೆ.

ಪೊಲೀಸರು ಹೇಳುವ ಆ ಒಂದು ಮುತ್ತಿನ ಕಥೆಯ ಮಾಹಿತಿ
ಈ ದಂಪತಿಗಳು ಟೆಕ್ನಿಕಲಿ ಮದುವೆ ಆಗಿದ್ದು ಆಗಿದೆ. ಈ ಘಟನೆ ಸಂಭವಿಸುವ ವೇಳೆಗೆ ಆಚರಣೆಗಳು ನಡೆಯುತ್ತಿದ್ದವು, ಆದರೆ ಇದೇ ಸಂದರ್ಭದಲ್ಲಿ 26 ವರ್ಷದ ವರ ವಿವೇಕ್ ಅಗ್ನಿಹೋತ್ರಿ ತೋರಿದ ವರ್ತನೆಯು ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗಿ ಬಿಟ್ಟಿದೆ. ವಿಷಯಗಳು ತಣ್ಣಗಾಗಲು ಒಂದೆರಡು ದಿನ ಕಾಯುವ ನಂತರ ನಾವು ಏನು ಮಾಡಬೇಕೆಂದು ನಿರ್ಧರಿಸುತ್ತೇವೆ," ಎಂದು ಬಹ್ಜೋಯ್ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಪಂಕಜ್ ಲಾವಾನಿಯಾ ತಿಳಿಸಿದ್ದಾರೆ. ಇದೇ ರೀತಿ ಶಹಜಹಾನ್‌ಪುರ ಮತ್ತು ಲಖೀಂಪುರ ಖೇರಿಯಲ್ಲಿ ವರಗಳು "ನಾಗಿನ್ (ಹಾವು) ನೃತ್ಯ" ವನ್ನು ಮಾಡದ ಕಾರಣಕ್ಕೆ ಈ ಹಿಂದೆ ಎರಡು ಮದುವೆಗಳನ್ನು ರದ್ದುಗೊಂಡಿದ್ದವು.