ಹುಡುಗನ ಮೇಲೆ ಟ್ಯೂಷನ್ ಟೀಚರ್ ಲೈಂಗಿಕ ದೌರ್ಜನ್ಯ, ಹಣಕ್ಕೆ ಒತ್ತಾಯ

Posted By:
Subscribe to Oneindia Kannada

ಆಗ್ರಾ, ಆಗಸ್ಟ್ 23: ಹದಿನೈದು ವರ್ಷದ- ಹತ್ತನೇ ತರಗತಿ ಓದುತ್ತಿರುವ ಈ ಹುಡುಗನ ಆರೋಪ ಏನು ಗೊತ್ತೆ? ಟ್ಯೂಷನ್ ಮಾಡುತ್ತಿದ್ದ ಶಿಕ್ಷಕಿ ಹಾಗೂ ಆಕೆಯ ಸೋದರಿ ಕಳೆದ ಒಂಬತ್ತು ತಿಂಗಳಿಂದ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ. ಆಕ್ಷೇಪಾರ್ಹ ಭಂಗಿಯ ಫೋಟೋ-ವಿಡಿಯೋ ತೆಗೆದು ಹಣಕ್ಕಾಗಿ ಬೆದರಿಸಿದ್ದಾರೆ. ಈ ಕೃತ್ಯಕ್ಕೆ ಅವರ ಸೋದರ ಕೂಡ ಸಹಾಯ ಮಾಡಿದ್ದಾನೆ ಎಂದು ಹುಡುಗ ಆರೋಪಿಸಿದ್ದಾನೆ.

ಅಕ್ರಮ ಸಂಬಂಧದ ಶಂಕೆ, ಪತ್ನಿಯನ್ನು ಕತ್ತಿಯಿಂದ ಕಡಿದು ಕೊಂದ ಪತಿ

ಆಭರಣ ಮಾರಾಟಗಾರರ ಮಗನಾದ ಈ ಹುಡುಗ ಮಹಿಳೆಯರ ಬೆದರಿಕೆಗೆ ಕಂಗಾಲಾಗಿ ಆಭರಣ, ನಗದು ಮತ್ತಿತರ ವಸ್ತುಗಳನ್ನು ಮನೆಯಿಂದ ಕಳವು ಮಾಡಿ ತಂದುಕೊಟ್ಟಿದ್ದಾನೆ. ಈ ರೀತಿ ತಂದುಕೊಡದೆ ಇದ್ದರೆ ವಿಡಿಯೋ, ಫೋಟೋಗಳನ್ನು ಆನ್ ಲೈನ್ ಗೆ ಹಾಕುವುದಾಗಿ ಮಹಿಳೆಯರು ಹೆದರಿಸಿದ್ದಾರೆ.

Boy caught in woman tutor’s trap in UP

"ಒಂದು ವರ್ಷದ ಹಿಂದೆ ಟ್ಯೂಷನ್ ಸೇರಿದೆ. ಅದನ್ನು ಮಹಿಳೆಯೊಬ್ಬರು ನಡೆಸುತ್ತಿದ್ದರು. ಆಕೆ ಮತ್ತವರ ಸೋದರಿ ಒಂದು ದಿನ ನನಗೆ ಮತ್ತು ಬರುವ ಔಷಧಿ ನೀಡಿ, ಆಕ್ಷೇಪಾರ್ಹ ಭಂಗಿಯ ಫೋಟೋಗಳನ್ನು ತೆಗೆದುಕೊಂಡರು. ಆ ನಂತರ ಕೆಲವು ಪೋಲಿ ಸಿನಿಮಾಗಳನ್ನು ತೋರಿಸಿ, ಅದೇ ರೀತಿಯಲ್ಲಿ ನಡೆದುಕೊಳ್ಳುವಂತೆ ಒತ್ತಡ ಹಾಕಿ, ಅವರ ಸೋದರ ಆ ಫೋಟೋಗಳನ್ನು ತೆಗೆದುಕೊಂಡ" ಎಂದು ಆ ಹುಡುಗ ಹೇಳಿಕೊಂಡಿದ್ದಾನೆ.

ಪ್ರೇಯಸಿ ಮಾತು ಬಿಟ್ಟಳೆಂದು ರೈಲಿಗೆ ತಲೆ ಕೊಟ್ಟ ಉಡುಪಿ ಯುವಕ

ಆ ನಂತರ ಮನೆಯಿಂದ ಆಭರಣಗಳನ್ನು ಕದ್ದು ತರುವಂತೆ ಹೆದರಿಸಿ, ಬೆದರಿಸಿ ಆ ಹುಡುಗನಿಂದ ತರಿಸಿಕೊಂಡಿದ್ದಾರೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಇಬ್ಬರು ಸೋದರಿಯರು ನಾಪತ್ತೆ ಆಗಿದ್ದಾರೆ. ಅವರ ಸೋದರನನ್ನು ಬಂಧಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 15-year-old boy told police two sisters shot 'obscene videos and pictures' of him to extort money. Police said the sisters were absconding, while their brother had been arrested in Agra, Uttar Pradesh.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ