ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IRCTC: ಟಿಕೆಟ್ ಬುಕ್ ಮಾಡಿ ಲ್ಯಾಪ್ಟಾಪ್ ಗೆಲ್ಲಿ

By Mahesh
|
Google Oneindia Kannada News

ನವದೆಹಲಿ, ನ.3: ಯಾರಿಗುಂಟು ಯಾರಿಗಿಲ್ಲ, ರೈಲ್ವೆ ಟಿಕೆಟ್ ಬುಕ್ಕಿಂಗ್ ಮಾಡುವುದೇ ಕಷ್ಟ ಎನ್ನುವ ಕಾಲದಲ್ಲಿ ಟಿಕೆಟ್ ಬುಕ್ ಮಾಡಿದರೆ ಲ್ಯಾಪ್ ಟಾಪ್, ಮೊಬೈಲ್ ಫೋನ್ ನೀಡುತ್ತೇವೆ ಎಂದು ಐಆರ್ ಸಿಟಿಸಿ ಭರ್ಜರಿ ಆಫರ್ ಘೋಷಿಸಿದೆ.

ಇಂಡಿಯನ್ ಏರ್ ಲೈನ್ಸ್ ನಂತರ ಇಂಡಿಯನ್ ರೈಲ್ವೆಸ್ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್(IRCTC) ಹೀಗೊಂಡು ಲಕ್ಕಿ ಡ್ರಾ ಧಮಾಕ ನೀಡುತ್ತಿದೆ. ನಾಲ್ಕು ಅದೃಷ್ಟಶಾಲಿಗಳಿಗೆ ಲ್ಯಾಪ್ ಟಾಪ್, ಮೊಬೈಲ್ ಫೋನ್ ಗೆಲ್ಲುವ ಅವಕಾಶ ನೀಡುತ್ತಿದೆ.

ಆದರೆ, ಐಆರ್ ಸಿಟಿಸಿ ಈ ಹೊಸ ಲಕ್ಕಿ ಡ್ರಾ ಎಲ್ಲರಿಗೂ ಮುಕ್ತವಾಗಿಲ್ಲ. ಹೊಸದಾಗಿ ವೆಬ್ ತಾಣಕ್ಕೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳುವ ಪ್ರಯಾಣಿಕರು ಹಾಗೂ ಕನಿಷ್ಠ ಒಂದು ಟಿಕೆಟ್ ಬುಕ್ ಮಾಡುವವರು ಲಕ್ಕಿ ಡ್ರಾಗೆ ಅರ್ಹರಾಗುತ್ತಾರೆ. ಸೋಮವಾರದಿಂದ ಭಾನುವಾರದ ತನಕ ಈ ವ್ಯವಸ್ಥೆ ಜಾರಿಯಲ್ಲಿರುತ್ತದೆ. ಪ್ರತಿ ಸೋಮವಾರ ಐಆರ್ ಸಿಟಿಸಿ ನಾಲ್ಕು ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿ ಪ್ರಕಟಿಸಲಾಗುತ್ತದೆ.

Book train ticket online

ಯಾವ ಯಾವ ಕೊಡುಗೆ ನೀಡಲಾಗುತ್ತಿದೆ?
* ಮೊದಲ ವಿಜೇತರಿಗೆ ಲ್ಯಾಪ್ ಟಾಪ್
* 2ನೇ ಹಾಗೂ 3ನೇ ವಿಜೇತರಿಗೆ ತಲಾ ಸ್ಮಾರ್ಟ್ ಫೋನ್.
* 4ನೇ ವಿಜೇತರಿಗೆ ನವದೆಹಲಿ-ಮಾತಾ ರಾಣಿ ಪ್ಯಾಕೇಜ್ (ಒಬ್ಬರಿಗೆ) NDR01(AC-3 Tier ರಿಟರ್ನ್ ಟಿಕೆಟ್ ಸಹಿತ)

ನಿಯಮಗಳು, ನಿಬಂಧನೆಗಳು:
* ಅದೃಷ್ಟಶಾಲಿ ವಿಜೇತರಾಗ ಬಯಸುವವರು IRCTC ವೆಬ್ ಸೈಟ್ ಗೆ ಹೊಸ ಬಳಕೆದಾರರಾಗಿರಬೇಕು. ಐಆರ್ ಸಿಟಿಸಿಯಲ್ಲಿ ಹೊಸ ಗ್ರಾಹಕರಾಗಿ ನೋಂದಾಯಿಸಿಕೊಂಡಿರಬೇಕು.
* ಗ್ರಾಹಕರು ವಾರದಲ್ಲಿ ಕನಿಷ್ಠ ಒಂದು ಟಿಕೆಟ್ ಅದರೂ ಬುಕ್ ಮಾಡಿರಬೇಕು. ಸೋಮವಾರ ದಿನ ಲಕ್ಕಿ ಡ್ರಾ ವಿಜೇತರ ಹೆಸರು ಪ್ರಕಟಿಸಲಾಗುತ್ತದೆ.
* ಒಂದು ವೇಳೆ ಸೋಮವಾರ ರಜಾ ದಿನವಾದರೆ, ಲಕ್ಕಿ ಡ್ರಾ ಮರುದಿನ ನಡೆಸಿ ಆಯ್ಕೆಯಾದವರ ವಿವರ ಪ್ರಕಟಿಸಲಾಗುತ್ತದೆ.
* ಗ್ರಾಹಕರು ಬೇನಾಮಿ ಹೆಸರನ್ನು ನೀಡುವಂತಿಲ್ಲ. ಸರಿಯಾದ ಹೆಸರು ವಿಳಾಸ ನೀಡಲುವುದು ಕಡ್ಡಾಯ. ವಿಳಾಸ ತಪ್ಪಾದರೆ ಗಿಫ್ಟ್ ಕೂಡಾ ಕೈತಪ್ಪಲಿದೆ.
* ವಿಜೇತರ ಹೆಸರನ್ನು ಐಆರ್ ಸಿಟಿಸಿ ವೆಬ್ ತಾಣದಲ್ಲಿ ಪ್ರಕಟಿಸಲಾಗುವುದು ಜೊತೆಗೆ ನೊಂದಾಯಿತ ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಗೆ ಸಂದೇಶ ಕಳಿಸಲಾಗುವುದು.
* ಲಕ್ಕಿ ಡ್ರಾ ಯೋಜನೆ ನಿಗದಿತ ಅವಧಿಗೆ ಮಾತ್ರ ಸೀಮಿತವಾಗಿದೆ. ಯೋಜನೆ ಅವಧಿ ಬಗ್ಗೆ ಗ್ರಾಹಕರಿಗೆ ತಿಳಿಸಲಾಗುವುದು.

English summary
After Indian airlines, now Indian Railway Catering and Tourism Corporation (IRCTC) too has come up with a new scheme under which four lucky persons will get the chance to win laptop and mobile phones.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X