ಕೋಲ್ಕೊತಾದಲ್ಲಿ ಕಚ್ಚಾ ಬಾಂಬ್ ಸ್ಫೋಟ, 2 ಮಕ್ಕಳಿಗೆ ಗಾಯ
ಕೋಲ್ಕೊತಾ, ಜ. 10: ನಗರದ ಡಂಡಂ ರೈಲ್ವೆ ನಿಲ್ದಾಣದ 2ನೇ ಗೇಟ್‌ನಲ್ಲಿ ಶನಿವಾರ ರಾತ್ರಿ ಕಚ್ಚಾ ಬಾಂಬ್ ಒಂದು ಸ್ಫೋಟಗೊಂಡಿದ್ದು, ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿ ಈ ಮಕ್ಕಳು ಆಟವಾಡುತ್ತಿದ್ದಾಗ ಅಪರಿಚಿತ ಬ್ಯಾಗ್ ಒಂದು ಕಣ್ಣಿಗೆ ಬಿದ್ದಿದೆ. ಅದರೊಳಗೆ ಕಾಣಿಸಿದ ಟಿಫನ್ ಬಾಕ್ಸ್ ತೆರೆಯಲು ಯತ್ನಿಸಿದ್ದಾರೆ. ಆಗ ಬಾಂಬ್ ಸ್ಫೋಟಗೊಂಡಿದೆ ಎಂದು ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ದೇಬಶಿಶ್ ಬೇಗ್ ತಿಳಿಸಿದ್ದಾರೆ. [ಬಾಂಬ್ ಸ್ಫೋಟಕ್ಕೆ ಮಹಿಳೆ ಬಲಿ]

ಗಾಯಗೊಂಡಿರುವ ಮಕ್ಕಳಾದ ಸಫಿಕ್ ಹಾಗೂ ಸಾಹರುಖ್ ಅವರನ್ನು ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿದೆ. [ಬಾಂಬ್ ಸ್ಫೋಟ ನಂತರದ ಬೆಳವಣಿಗೆ]
ಬಾಂಬ್ ಸ್ಫೋಟಗೊಂಡ ಸ್ಥಳದಲ್ಲಿ ಇನ್ನೂ ಎರಡು ಬ್ಯಾಗ್‌ಗಳು ಕಂಡುಬಂದಿವೆ. ಅಲ್ಲದೆ, ಕಸಗಳ ಮಧ್ಯೆ ಮೂರು ಕಚ್ಚಾ ಬಾಂಬ್‌ಗಳು ಸಿಕ್ಕಿವೆ. ಸ್ಥಳಕ್ಕೆ ಬಾಂಬ್ ಪತ್ತೆ ದಳ ಬಂದಿದ್ದು, ಪರಿಶೀಲನೆ ಕೈಗೊಂಡಿದೆ.












Click it and Unblock the Notifications