BREAKING: ಬಾಲಿವುಡ್ ಖ್ಯಾತ ನಟಿಯ ತಂದೆ ಆತ್ಮಹತ್ಯೆ: ಬಿಲ್ಡಿಂಗ್‌ನಿಂದ ಜಿಗಿದು ಸಾವು

ಮುಂಬೈ, ಸೆಪ್ಟಂಬರ್ 11: ಬಾಲಿವುಡ್ ಖ್ಯಾತ ನಟಿಯ ತಂದೆಯೊಬ್ಬರು ಬುಧವಾರ ಮುಂಬೈನ ಬಿಲ್ಡಿಂಗ್‌ವೊಂದರಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ. ಮುಂಬೈ ಬಾದ್ರಾದಲ್ಲಿರುವ ಬೃಹತ್ ಕಟ್ಟಡದ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.

ಬಾಲಿವುಡ್ ಖ್ಯಾತ ನಟಿ ಮಲೈಕಾ ಆರೋರಾ ಅವರ ತಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟಿ ಮಲೈಕಾ ಆರೋರಾ ತಂದೆ ಅನೀಲ್ ಆರೋರಾ ಅವರು ಇಂದು ಬೆಳಗ್ಗೆ ಮುಂಬೈ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Bollywood Actress Malaika Arora s Father Suicide to Jump by Building at Mumbai Bandra

ಘಟನೆ ಬಗ್ಗೆ ಮಾಹಿತಿ ಪಡೆದ ನಟಿ ಮಲೈಕಾ ಅರೋರಾ ಪತಿ ಅರ್ಬಾಜ್ ಖಾನ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ನಟಿ ನಿವಾಸಕ್ಕೆ ಬೇಟಿ ನೀಡಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಲೈಕಾ ಮತ್ತು ತಂದೆ ಅನಿಲ್ ಆರೋರಾ ಪರಿಚಯ

ನಟಿ ಮಲೈಕಾ ಅರೋರಾ ಅವರು ಮಹಾರಾಷ್ಟ್ರ ರಾಜ್ಯದ ಥಾಣೆಯಲ್ಲಿ ಜನಿಸಿದ್ದಾರೆ. ನಟಿ 11 ವರ್ಷದಲ್ಲಿದ್ದಾಗಲೇ ಅವರ ಪೋಷಕರು ವಿಚ್ಛೇದನ ಪಡೆದು ದೂರವಾಗಿದ್ದು. ಬಾಲ್ಯದಲ್ಲಿ ಇಂತಹ ಕಹಿ ಘಟನೆಗಳನ್ನು ಎದುರಿಸಿದ್ದ ನಟಿ ಪೋಷಕರ ವಿಚ್ಛೇದನ ನಂತರ ತಾಯಿ ಮತ್ತು ಸಹೋದರಿ ಅಮೃತಾ ಅರೋರಾ ಜೊತೆ ಚೆಂಬೂರ್‌ನಲ್ಲಿ ವಾಸಿಸಿದರು.

ಮಲೈಕಾ ತಾಯಿ ಜಾಯ್ಸ್ ಪಾಲಿಕಾರ್ಪ್ ಮೂಲತಃ ಮಲಯಾಳಿ ಕ್ರಿಶ್ಚಿಯನ್ ಆಗಿದ್ದು ಅವರ ತಂದೆ ಅನಿಲ್ ಅರೋರಾ, ಪಂಜಾಬ್‌ದವರಾಗಿದ್ದು, ಅವರು ಭಾರತೀಯ ಮರ್ಚೆಂಟ್ ನೇವಿಯಲ್ಲಿ ಸೇವೆ ಸಲ್ಲಿಸಿದ್ದರು.

ಇತ್ತೀಚೆಗೆ ನೀಡಿದ್ದ ಸಂದರ್ಶನವೊಂದರಲ್ಲಿ ನಟಿ ಮಲೈಕಾ ಅವರು 11 ವರ್ಷ ಇದ್ದಾಗ ತಮ್ಮ ಬದುಕಿನಲ್ಲಿ ಆದ ಕಹಿ ಘಟನೆಗಳನ್ನು ಹಂಚಿಕೊಂಡಿದ್ದರು. ತಂದೆ ತಾಯಿ ವಿಚ್ಛೇದನ ವಿಚಾರ ಪ್ರಸ್ಥಾಪಿಸಿ ಭಾವುಕರಾಗಿದ್ದರು. ನನ್ನ ಬಾಲ್ಯ ಅದ್ಭುತ ಅನ್ನಿಸಿದರೂ ಸಹ ಸುಲಭವ ಜೀವನ ಅದಾಗಿರಲಿಲ್ಲ ಎಂದು ಸವಾಲುಗಳ ಕುರಿತು ಅವರು ಮಾಹಿತಿ ಹಂಚಿಕೊಂಡಿದ್ದರು.

ತಂದೆ ವಿಚ್ಛೇದನ ಕೊಟ್ಟ ದೂರವಾದಾಗ ನನ್ನ ತಾಯಿಯನ್ನು ಹೊಸ ಬದುಕು ಕಟ್ಟಿಕೊಂಡ ರೀತಿ, ಅವರ ಧೈರ್ಯ ಏನೆಂಬುದು ನನಗೆ ತಿಳಿಯಿತು ಎಂದು ನಟಿ ಮಲೈಕಾ ಆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಸದ್ಯ ಅವರ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ನಿರ್ಧಾರ ಕೈಗೊಳ್ಳಲು ಕಾರಣವೇನು ಎಂಬುದು ಗೊತ್ತಾಗಬೇಕಿದೆ. ಸದ್ಯ ಪ್ರಕರಣ ತನಿಖೆ ಹಂತದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+