BMC Election 2026: ಮುಂಬೈ ಸೇರಿ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳಲ್ಲಿ ಯಾರಿಗೆ ಎಷ್ಟು ಸ್ಥಾನ? ಇಲ್ಲಿದೆ ಎಕ್ಸಿಟ್ ಪೋಲ್ ವಿವರ
ನವದೆಹಲಿ: ಮಹಾರಾಷ್ಟ್ರದ ಬೃಹನ್‌ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಸೇರಿ ಒಟ್ಟು 28 ಪಾಲಿಕೆಗಳಿಗೆ ಗುರುವಾರ (ಜ. 15) ಚುನಾವಣೆ ನಡೆಯಿತು. ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಆಕ್ಸಿಸ್ ಮೈ ಇಂಡಿಯಾದ ನಿರ್ಗಮನ ಸಮೀಕ್ಷೆ (BMC Axis My India Exit Poll 2026) ಪ್ರಕಟಿಸಿತು. ಅದರ ಪ್ರಕಾರ, ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಲಿದೆ. ಉದ್ಧವ್ ಠಾಕ್ರೆ ಸಹೋದರರಿಗೆ ಹಿನ್ನಡೆ ಉಂಟಾಗಲಿದೆ ಎಂದು ಭವಿಷ್ಯ ಹೊರ ಬಿದ್ದಿದೆ.
ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯನ್ನು ಒಳಗೊಂಡ ಬಿಜೆಪಿ ಮೈತ್ರಿಕೂಟವು ಒಟ್ಟು 227 ಸ್ಥಾನಗಳಲ್ಲಿ 131 ರಿಂದ 151 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಮುಂಬೈ, ಪುಣೆ ಹಾಗೂ ನಾಗಪುರ ವ್ಯಾಪ್ತಿಯ ಸ್ಥಳೀಯ ಪಾಲಿಕೆಯಲ್ಲಿ ಮತ್ತೆ ಕೇಸರಿ ಪಡೆಯ ಅಧಿಕೃತ ವಿಜೃಂಭಿಸಲಿದೆ.

ಭಾರತದ ಇತರ ರಾಜ್ಯಗಳಿಗಿಂತ ಮಹಾರಾಷ್ಟ್ರದ ಮುಂಬೈನ ನಾಗರಿಕ ಸಂಸ್ಥೆಯ ಬಜೆಟ್ ಗಾತ್ರ ದೊಡ್ಡದು ಎನ್ನಲಾಗಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಎಂಎನ್‌ಎಸ್ ಮತ್ತು ಎನ್‌ಸಿಪಿ (ಎಸ್‌ಪಿ) ಗಳನ್ನು ಒಳಗೊಂಡಿರುವ ಯುಬಿಟಿ+ ಬ್ಲಾಕ್ 58-68 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ. ಉಳಿದಂತೆ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವು ಕೇವಲ 12-16 ಸೀಟುಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ. ಇತರರು ಪಕ್ಷಗಳಿಗೆ ಆರರಿಂದ 12 ಸ್ಥಾನಗಳ ಲಭಿಸಬಹುದೆಂದು ಈ ಎಕ್ಸಿಟ್ ಪೋಲ್ ಸಮೀಕ್ಷೆಗಳು ತಿಳಿಸಿವೆ.
ಕೇವಲ ಶೇ. 46-50 ರಷ್ಟು ಮತದಾನ
ಇಂದು ನಡೆದ ಮುಂಬೈ ಮಹಾರಾಷ್ಟ್ರ ಸೇರಿದಂತೆ 28 ನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಒಟ್ಟು ಕೇವಲ ಶೇ. 46-50 ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದು 2017 ರ ಇದೇ ಪಾಲಿಕೆ ಚುನಾವಣೆಯಲ್ಲಿ ಮುಂಬೈನಲ್ಲಿ ದಾಖಲಾದ ಶೇ. 55.53 ಕ್ಕಿಂತ ಕಡಿಮೆ ಆಗಿದೆ. ಬೆಳಗ್ಗೆ 7.30ಕ್ಕೆ ಮತದಾನ ಆರಂಭವಾಯಿತು. ಸೂಕ್ತ ಪೊಲೀಸ್ ಬಿಗಿ ಭದ್ರತೆ ನಡುವೆ ಸುಸೂತ್ರವಾಗಿ ಮತದಾನ ನಡೆಯಿತು. ಸಂಜೆ 5.30 ಗಂಟೆಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿತು. ಚುನಾವಣೆ ಸಂಬಂಧ 25,000 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.
ತೀವ್ರ ಪೈಪೋಟಿಗೆ ಸಾಕ್ಷಿಯಾದ ಚುನಾವಣೆ
ಮಹಾರಾಷ್ಟ್ರಗೆ ಸಂಬಂಧಿಸಿದಂತೆ ಕೋರ್ಟ್ ಸಾಂಕ್ರಾಮಿಕ ರೋಗ, ಒಬಿಸಿ ಮೀಸಲಾತಿ ಮತ್ತು ವಾರ್ಡ್ ಪುನರ್‌ವಿಂಗಡಣೆ ಕುರಿತು ನೀಡಿದ ತೀರ್ಪುಗಳಿಂದ ಉಂಟಾದ ವಿಳಂಬದ ಬಳಿಕ ಒಂಬತ್ತು ವರ್ಷಗಳ ಅಂತರದ ನಂತರ ಈ ಬಿಎಂಸಿ ಚುನಾವಣೆ ನಡೆದಿದೆ. ಆಡಳಿತಾರೂಢ ಮಹಾಯುತಿ ಹಾಗೂ ಮತ್ತೆ ಒಂದಾಗಿರುವ ಉದ್ಧವ್ ಠಾಕ್ರೆ ಸೋದರರ ಮಧ್ಯ ತೀವ್ರ ಪೈಪೋಟಿ ನಡೆಯಿತು. ಈ ಚುನಾವಣೆಯು ಮತ್ತೊಂದು ಹಂತದ ಸ್ಪರ್ಧೆಗೆ ಸಾಕ್ಷಿ ಆಯಿತು. ಈ ಬಾರಿ ಮುಂಬೈನಲ್ಲಿ 1,700 ಕ್ಕೂ ಅಧಿಕ ಅಭ್ಯರ್ಥಿಗಳು ಸ್ಪರ್ಧಿಸಿದ್ದು ವಿಶೇಷವಾಗಿತ್ತು.
ಇನ್ನೂ ಈ ಚುನಾವಣೆಯಲ್ಲಿ ಮತದಾರರ ಬೆರಳಿಗೆ ಹಾಕಿ ಶಾಹಿ ಅಳಿಸುತ್ತದೆ. ಸುಲಭವಾಗಿ ಅದನ್ನು ತೆಗೆಯಬಹುದಾಗಿದೆ ಎಂಬ ಹೇಳಿಕೆಗಳು ಈ ಚುನಾವಣೆಯಲ್ಲಿ ಭಾರೀ ಸದ್ದು ಮಾಡಿದವು. ರಾಜ್ಯ ಚುನಾವಣಾ ಆಯೋಗ ಈ ಆರೋಪ ತಿರಸ್ಕೃರಿಸಿತು. ವಿರೋಧ ಪಕ್ಷದ ನಾಯಕರಾದ ಉದ್ಧವ್ ಮತ್ತು ರಾಜ್ ಠಾಕ್ರೆ ಚುನಾವಣಾ ಅಕ್ರಮಗಳ ಕುರಿತು ಆಯೋಗದ ಮೇಲೆ ಗಂಭೀರ ಆರೋಪ ಮಾಡಿದರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications