ಆಮೀರ್ ಖಾನ್‌ ಹೊಸ ಪತ್ನಿ ಗೌರಿ ಸ್ಪ್ರಾಟ್‌ ಇಸ್ಲಾಂಗೆ ಮತಾಂತರ ಆಗಿದ್ದಾರಾ? ವೈರಲ್ ಪ್ರಶ್ನೆಗೆ ಇಲ್ಲಿದೆ ಉತ್ತರ

ಬಾಲಿವುಡ್‌ ನಟ, ಲವರ್‌ ಬಾಯ್ ಆಮೀರ್‌ ಖಾನ್‌ ನಿನ್ನೆ ತಮ್ಮ ಬಹುಕಾಲದ ಗೆಳತಿ ಗೌರಿ ಸ್ಪ್ರಾಟ್‌ ಅವರನ್ನು ವಿವಾಹವಾದರು. ಇದು ಆಮೀರ್‌ನ ಮೂರನೇ ವಿವಾಹ. ಗೌರಿಗೆ ಎರಡನೇ ಮದುವೆ. ಈ ಸುದ್ದಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮದುವೆಯ ಫೋಟೋಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಬೆನ್ನಲ್ಲೇ, ಮತ್ತೊಂದು ಪ್ರಶ್ನೆ ಹೆಚ್ಚು ಸದ್ದು ಮಾಡುತ್ತಿದೆ. ಅದೇನೆಂದರೆ- ಗೌರಿ ಸ್ಪ್ರಾಟ್‌ ಇಸ್ಲಾಂ ಧರ್ಮಕ್ಕೆ ಮತಾಂತರ ಆದಿದ್ದಾರಾ, ಅಥವಾ ಆಗುತ್ತಾರಾ?

ಗೂಗಲ್‌ ಹುಡುಕಾಟದಿಂದ ಹಿಡಿದು ಯೂಟ್ಯೂಬ್‌, ಎಕ್ಸ್‌ , ಇನ್‌ಸ್ಟಾಗ್ರಾಂ ಮತ್ತು ರೆಡಿಟ್‌ವರೆಗೆ ಇದೇ ಪ್ರಶ್ನೆ ಸುತ್ತ ಚರ್ಚೆಗಳು ನಡೆಯುತ್ತಿವೆ. ನಿಜಕ್ಕೂ ಏನು ನಡೆಯುತ್ತಿದೆ?

ಬಾಲಿವುಡ್‌ನ 'ಮಿಸ್ಟರ್ ಪರ್ಫೆಕ್ಷನಿಸ್ಟ್' ಆಮೀರ್ ಖಾನ್ ಜುಲೈ 5ರಂದು ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಆಪ್ತರ ಸಮ್ಮುಖದಲ್ಲಿ ಗೌರಿ ಸ್ಪ್ರಾಟ್ ಅವರನ್ನು ವಿವಾಹವಾಗಿ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದರು. ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಅವರ ಪ್ರೇಮಕಥೆಯಿಂದ ಹಿಡಿದು ವಯಸ್ಸಿನ ಅಂತರ, ಗೌರಿ ಸ್ಪ್ರಾಟ್ ಮತಾಂತರವಾಗಿದ್ದಾರೆಯೇ ಎಂಬ ಪ್ರಶ್ನೆಯವರೆಗೆ ಹಲವು ವಿಷಯಗಳು ಚರ್ಚೆಗೆ ಗ್ರಾಸವಾದವು.

Aamir Khan

25 ವರ್ಷದ ಪರಿಚಯ

ಆಮೀರ್ ಖಾನ್ ಮತ್ತು ಗೌರಿ ಸ್ಪ್ರಾಟ್ ಪರಸ್ಪರ ಸುಮಾರು 25 ವರ್ಷಗಳಿಂದ ಪರಿಚಯಸ್ಥರು. ಆದರೆ ಆ ಸ್ನೇಹ ಪ್ರೇಮವಾಗಿ ಬದಲಾಗಿದ್ದು 2024ರಲ್ಲಿ. ವರದಿಗಳ ಪ್ರಕಾರ, ಬೆಂಗಳೂರಿನಲ್ಲಿ ಆಮೀರ್ ಅವರ ಸಂಬಂಧಿ ನುಝಾತ್ ಖಾನ್ ಮೂಲಕ ಇಬ್ಬರೂ ಮತ್ತೆ ಸಂಪರ್ಕಕ್ಕೆ ಬಂದಿದ್ದರು. ನಂತರ ಸುಮಾರು ಒಂದು ವರ್ಷ ದೂರದ ಸಂಬಂಧ (Long-distance Relationship) ಮುಂದುವರಿಸಿದ ಈ ಜೋಡಿ, ಆಮೀರ್ ಅವರ 60ನೇ ಹುಟ್ಟುಹಬ್ಬದ ವೇಳೆ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಅಧಿಕೃತಗೊಳಿಸಿತ್ತು.

ಆ ಬಳಿಕ ಗೌರಿ ತಮ್ಮ ಮೊದಲ ವಿವಾಹದಿಂದ ಜನಿಸಿದ ಮಗನೊಂದಿಗೆ ಮುಂಬೈಗೆ ಸ್ಥಳಾಂತರವಾಗಿದ್ದರು. ನಂತರ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಜುಲೈ 5ರಂದು ಮಧ್ಯಾಹ್ನ ಮುಂಬೈನಲ್ಲಿರುವ ಆಮೀರ್ ಖಾನ್ ನಿವಾಸದಲ್ಲಿ ಇಬ್ಬರೂ ನೋಂದಾಯಿತ ವಿವಾಹ ಮಾಡಿಕೊಂಡಿದ್ದಾರೆ.

ಮೂರನೇ ಬಾರಿ ಹಸೆಮಣೆ ಏರಿದ ಅಮೀರ್ ಖಾನ್: ಬೆಂಗಳೂರು ಮೂಲದ ಗೌರಿ ಸ್ಪ್ರ್ಯಾಟ್ ಜೊತೆ ಸರಳ ವಿವಾಹ
ಮೂರನೇ ಬಾರಿ ಹಸೆಮಣೆ ಏರಿದ ಅಮೀರ್ ಖಾನ್: ಬೆಂಗಳೂರು ಮೂಲದ ಗೌರಿ ಸ್ಪ್ರ್ಯಾಟ್ ಜೊತೆ ಸರಳ ವಿವಾಹ

ಕುಟುಂಬ ಸದಸ್ಯರು ಹಾಗೂ ಕೆಲವೇ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಡೆದ ಈ ಸಮಾರಂಭದಲ್ಲಿ ನಿರ್ದೇಶಕ ಅಶುತೋಷ್ ಗೋವಾರಿಕರ್, ನಟಿ ಎಲ್ಲಿ ಅವ್ರಾಮ್, ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಹಾಗೂ ರಾಜಕಾರಣಿ ರಾಜ್ ಠಾಕ್ರೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಆಮೀರ್ ಅವರ ಮಕ್ಕಳು ಐರಾ ಖಾನ್, ಜುನೈದ್ ಖಾನ್ ಮತ್ತು ಆಜಾದ್ ರಾವ್ ಖಾನ್ ಕೂಡ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

13 ವರ್ಷ ವಯಸ್ಸಿನ ಅಂತರ

ಆಮೀರ್ ಖಾನ್ ಅವರಿಗೆ ಈಗ 61 ವರ್ಷ. ಗೌರಿ ಸ್ಪ್ರಾಟ್ ಅವರಿಗೆ 47 ವರ್ಷ. ಇಬ್ಬರ ನಡುವೆ ಸುಮಾರು 13 ವರ್ಷ ವಯಸ್ಸಿನ ಅಂತರ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು "ವಯಸ್ಸಿಗಿಂತ ಪರಸ್ಪರ ಅರ್ಥ ಮಾಡಿಕೊಳ್ಳುವ ಗುಣ ಮುಖ್ಯ" ಎಂದು ಈ ಜೋಡಿಗೆ ಶುಭ ಹಾರೈಸುತ್ತಿದ್ದರೆ, ಕೆಲವರು ವಯಸ್ಸಿನ ಅಂತರದ ಬಗ್ಗೆಯೂ ಚರ್ಚೆ ನಡೆಸುತ್ತಿದ್ದಾರೆ.

ಗೌರಿ ಇಸ್ಲಾಂಗೆ ಮತಾಂತರವಾಗಿದ್ದಾರಾ?

ಮದುವೆಯ ನಂತರ ಈಗ ಹೆಚ್ಚು ಚರ್ಚೆಯಾಗುತ್ತಿರುವ ವಿಷಯ ಇದೇ. ಸಾಮಾಜಿಕ ಜಾಲತಾಣಗಳಲ್ಲಿ, ಗೌರಿ ಸ್ಪ್ರಾಟ್ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾರೆಯೇ ಎಂಬ ಪ್ರಶ್ನೆ ಕೇಳಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಇದನ್ನು ದೃಢಪಡಿಸುವ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಆಮೀರ್ ಖಾನ್ ಅಥವಾ ಗೌರಿ ಸ್ಪ್ರಾಟ್ ಈ ಕುರಿತು ಯಾವುದೇ ಹೇಳಿಕೆ ನೀಡಿಲ್ಲ.

ಬೆಂಗಳೂರಿನ ಗೌರಿ ಜೊತೆ ಮದುವೆ ಆಗೋಯ್ತು: ಶಾಕ್‌ ಕೊಟ್ಟ ನಟ ಅಮೀರ್‌ ಖಾನ್
ಬೆಂಗಳೂರಿನ ಗೌರಿ ಜೊತೆ ಮದುವೆ ಆಗೋಯ್ತು: ಶಾಕ್‌ ಕೊಟ್ಟ ನಟ ಅಮೀರ್‌ ಖಾನ್

ಆಮೀರ್‌ ಖಾನ್‌ನ ಹಿಂದಿನ ಇಬ್ಬರು ಪತ್ನಿಯರೂ ಮತಾಂತರವಾಗಿರಲಿಲ್ಲ. ಆಮೀರ್ ಖಾನ್ ಅವರ ಮೊದಲ ಪತ್ನಿ ರೀನಾ ದತ್ತಾ ಹಾಗೂ ಎರಡನೇ ಪತ್ನಿ ಕಿರಣ್ ರಾವ್ ಅವರು ಮದುವೆಯ ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು ಎಂಬ ಬಗ್ಗೆಯೂ ಯಾವುದೇ ದಾಖಲೆ ಇಲ್ಲ. ಇಬ್ಬರೂ ತಮ್ಮ ಮೊದಲಿನ ಹೆಸರನ್ನು ಹಾಗೇ ಉಳಿಸಿಕೊಂಡಿದ್ದರು. ಇಬ್ಬರೂ ತಮ್ಮ ಧರ್ಮದ ಆಚರಣೆಗಳನ್ನು ಮನೆಯಲ್ಲಿ ಮಾಡುತ್ತಿದ್ದರು, ಆಮೀರ್‌ ನಮಾಜ್‌ ಮಾಡುತ್ತಿದ್ದ. ಗಂಡ- ಹೆಂಡತಿ ಜೊತೆಯಾಗಿ ದೀಪಾವಳಿ ಆಚರಿಸುತ್ತಿದ್ದರು.

ಈ ಹಿನ್ನೆಲೆಯಲ್ಲೇ, ಗೌರಿಯೂ ತಮ್ಮ ಧರ್ಮವನ್ನು ಬದಲಿಸಿಕೊಳ್ಳುವ ಸಾಧ್ಯತೆ ಕಡಿಮೆ ಇರಬಹುದು. ಆದರೆ ಇದಕ್ಕೂ ಯಾವುದೇ ಅಧಿಕೃತ ದೃಢೀಕರಣ ಇಲ್ಲ.

ಸೋಶಿಯಲ್ ಮೀಡಿಯಾದಲ್ಲಿ ಎರಡು ಬಣ

ಈ ಮದುವೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಎರಡು ರೀತಿಯ ಚರ್ಚೆಗಳು ನಡೆಯುತ್ತಿವೆ. ಒಂದು ಕಡೆ ಆಮೀರ್ ಮತ್ತು ಗೌರಿ ಅವರ ಪ್ರೇಮಕಥೆ, ಸರಳ ವಿವಾಹ ಮತ್ತು ಹೊಸ ಜೀವನಕ್ಕೆ ಶುಭಾಶಯಗಳು ಹರಿದುಬರುತ್ತಿವೆ.

ಇನ್ನೊಂದು ಕಡೆ ಮತಾಂತರ, ವಯಸ್ಸಿನ ಅಂತರ ಹಾಗೂ ಇದು ಆಮೀರ್ ಅವರ ಮೂರನೇ ಮದುವೆ ಎಂಬ ವಿಷಯಗಳನ್ನು ಕೇಂದ್ರವಾಗಿಟ್ಟುಕೊಂಡು ಚರ್ಚೆಗಳು ನಡೆಯುತ್ತಿವೆ. ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ, ಆಮೀರ್ ಖಾನ್ ಮತ್ತು ಗೌರಿ ಸ್ಪ್ರಾಟ್ ಸರಳವಾಗಿ ನೋಂದಾಯಿತ ವಿವಾಹವಾಗಿದ್ದಾರೆ. ಆದರೆ ಗೌರಿ ಸ್ಪ್ರಾಟ್ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾರೆ ಅಥವಾ ಆಗಲಿದ್ದಾರೆ ಎಂಬುದಕ್ಕೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+