ಉತ್ತರ ಪ್ರದೇಶ: ವಿವಾದಾತ್ಮಕ 'ಬ್ಲೂ ವ್ಹೇಲ್' ಗೆ ಬಾಲಕ ಬಲಿ

Posted By:
Subscribe to Oneindia Kannada

ಲಕ್ನೊ, ಆಗಸ್ಟ್ 28: ವಿವಾದಾತ್ಮಕ ಆನ್ ಲೈನ್ ಗೇಮ್ 'ಬ್ಲೂ ವ್ಹೇಲ್' ಗೆ ಉತ್ತರ ಪ್ರದೇಶದ ಹಮಿರ್ಪುರ ಜಿಲ್ಲೆಯ 13 ವರ್ಷದ ಬಾಲಕನೊಬ್ಬ ಬಲಿಯಾದ ಸುದ್ದಿ ವರದಿಯಾಗಿದೆ.

ಬ್ಲೂ ವ್ಹೇಲ್ ಚಾಲೆಂಜ್ ಆತ್ಮಹತ್ಯಾ ಕೂಪ: ತಿಳಿಯಬೇಕಾದ 10 ಸಂಗತಿ

ಹಮಿರ್ಪುರ ಜಿಲ್ಲೆ ಮೌದಾಹಾ ಎಂಬ ಹಳ್ಳಿಯ ಪರ್ಥ್ ಸಿಂಗ್ ಎಂಬ ಬಾಲಕ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಸಮಯದಲ್ಲಿ ಆತನ ಕೈಯಲ್ಲಿ ಮೊಬೈಲ್ ಫೋನ್ ಇದ್ದಿದ್ದು, ಮತ್ತು ಆ ಫೋನಿನಲ್ಲಿ ವಿವಾದಾತ್ಮಕ ಬ್ಲೂ ವ್ಹೇಲ್ ಗೇಮ್ ವಿಂಡೋ ತೆರೆದಿರುವುದು ಕಂಡುಬಂದಿದ್ದು, ಬಾಲಕನ ಸಾವಿಗೆ ಬ್ಲೂ ವ್ಹೇಲ್ ಗೇಮ್ ಕಾರಣ ಎಂಬುದು ಮೇಲ್ನೋಟಕ್ಕೆ ದೃಢವಾಗಿದೆ.

Blue whale game: A boy commits suicide in Uttar Pradesh

ಆತ ಬ್ಲೂ ವ್ಹೇಲ್ ಗೇಮ್ ಆಡುವುದು ಮನೆಜನರಿಗೆ ತಿಳಿದಿದ್ದರಿಂದ ಆತನಿಗೆ ಹೆದರಿಸಿ, ಆ ಆಟ ಆಡದಂತೆ ತಾಕೀತು ಹಾಕಲಾಗಿತ್ತಾದರೂ, ತಂದೆ ಮಲಗಿದ್ದ ಸಮಯದಲ್ಲಿ ಅವರ ಫೋನ್ ತೆಗೆದುಕೊಂಡು ಈತ ಆಟವಾಡುತ್ತಿದ್ದ. ಆಗಸ್ಟ್ 27 ರಂದು ಸಂಜೆ ಸ್ನೇಹಿತರೊಬ್ಬರ ಬರ್ಥಡೇ ಪಾರ್ಟಿಗೆ ಹೋಗಬೇಕಿದ್ದ ಪರ್ಥ್ ಎಷ್ಟು ಹೊತ್ತಾದರೂ ತನ್ನ ರೂಮಿನಿಂದ ಆಚೆ ಬಾರದಿದ್ದಾಗ ತಂದೆ ವಿಕ್ರಂ ಸಿಂಗ್ ಮಗನ ಕೋಣೆಯತ್ತ ತೆರಳಿದ್ದಾರೆ. ಮುಚ್ಚಿದ ಬಾಗಿಲನ್ನು ತಟ್ಟಿದರೆ ಅತ್ತೆಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಭಯದಿಂದ ಕೋಣೆಯ ಬಾಗಿಲು ಒಡೆದು ನೋಡಿದರೆ ಮಗ ನೇಣಿಗೆ ಶರಣಾಗಿದ್ದು ಕಾಣಿಸಿದೆ.

ಇಂಥ ವಿಕೃತ ಆಟಕ್ಕೆ ಇದ್ದೊಬ್ಬ ಮಗನನ್ನು ಕಳೆದುಕೊಂಡ ಪಾಲಕರು ಗೋಳು ದೇವರಿಗೇ ಪ್ರೀತಿ! ಮೌದಾನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಬಾಲಕನ ಕೈಯಲ್ಲಿದ್ದ ಮೊಬೈಲ್ ಅನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A boy commits suicide by hanging himself in Maudaha village in Hamirpur, Lucknow, Uttar Pradesh. The boy was playing controversial blue whale game in his father's mobile.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ