ಉಗ್ರರ ಪೆನ್ ಡ್ರೈವಿನಲ್ಲಿ ಮೋದಿ ಚಿತ್ರವಿದ್ದದ್ದು ಏಕೆ?

Posted By: Ananthanag
Subscribe to Oneindia Kannada

ಕೇರಳ, ನವೆಂಬರ್ 3: ಮಲ್ಲಪುರಂ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ಮಹತ್ವದ ಪೆನ್‌ ಡ್ರೈವೊಂದು ರಾಷ್ಟ್ರೀಯ ತನಿಖಾ ದಳಕ್ಕೆ ದೊರೆತಿದೆ.

ಉಗ್ರರ ದಾಳಿ ಹಿನ್ನೆಲೆ ರಾಷ್ಟ್ರೀಯ ತನಿಖಾ ದಳವು ನಡೆಸಿದ ಪರಿಶೀಲನೆಯಿಂದ ಪೆನ್ ಡ್ರೈವ್ ಸಿಕ್ಕಿದ್ದು ಪೆನ್ ಡ್ರೈವಿನಲ್ಲಿ ಅನೇಕ ಮಹತ್ವದ ವಿಷಯಗಳು ಇವೆ ಎಂದು ತನಿಖಾ ದಳ ತಿಳಿಸಿದೆ.

ಅಲ್ಲದೆ ಪೆನ್‌ಡ್ರೈವ್‌ನಲ್ಲಿ ದೇಶ ಪ್ರಧಾನ ಮಂತ್ರಿ ಮೋದಿ ಚಿತ್ರವಿದೆ. ಹಾಗೂ ಮತ್ತೆ ಕೆಲವು ಕಡೆ ಬಾಂಬ್ ದಾಳಿ ನಡೆಸಲು ಸಂಬಂಧಿಸಿದ ಮಾಹಿತಿಗಳು ದೊರೆತಿವೆ.[ಮೈಸೂರು ಕೋರ್ಟ್ ಸ್ಫೋಟ : ಮಲಯಾಳಂ ಪತ್ರಿಕೆಯಲ್ಲಿತ್ತು ಸ್ಫೋಟಕ]

Blast at Malappuram found pen drive have modi picture

ಸ್ಫೋಟಕ್ಕೆ ನಡೆಸಿದ ಆಪರೇಷನ್‌ಗೆ ಭೀತಿಗೊಳಿಸುವ ಅಲ್- ಉಮ್ಹಾ ಎಂದು ಹೆಸರಿಡಲಾಗಿತ್ತು. ಸ್ಫೋಟಕ್ಕೆ ಸಂಬಂಧಿಸಿದ ತಂಡಕ್ಕೆ ಬೇಸ್ ಮೂಮೆಂಟ್ ಎಂದು ಕರೆಯಲಾಗಿದೆ

ಕೇರಳದ ಮಲ್ಲಪುರಂ ಕೋರ್ಟ್ ಬಳಿ ನಡೆದ ಸ್ಫೋಟದಿಂದ ಮೂರು ಕಾರು ಡ್ಯಾಮೇಜ್ ಆಗಿತ್ತು. ಯಾರಿಗೂ ತೊಂದರೆಯಾಗಿರಲಿಲ್ಲ. ತನಿಖೆ ನಡೆಸಿದ ಡ್ರೈವ್ನಲ್ಲಿ ಭಾರತದ ನಕ್ಷೆ, ಒಸಮಾ ಬಿನ್ ಲಾಡೆನ್ನಿನ ಚಿತ್ರಗಳೂ ಸಹ ಇವೆ.

ಬೇಸ್‌ ಮೂಮೆಂಟಿನ ಸ್ಪೋಟಗಳ ಬಗ್ಗೆ ಮಾಹಿತಿ ನಿಡುವ ಪತ್ರವೊಂದು ಸಿಕ್ಕಿದೆ. ಅದರಲ್ಲಿ ಏಪ್ರಿಲ್ ಮತ್ತು ಆಗಸ್ಟ್‌ನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಗಳ ಬಗ್ಗೆ ಮಾಹಿತಿ ಇದೆ. ಮೈಸೂರು ಕೋರ್ಟ್ ಬಳಿ ನಡೆದ ಸ್ಪೋಟ ಮಾಡಿದ್ದು ಇದೇ ಗುಂಪು.

Blast at Malappuram found pen drive have modi picture

ಇದರ ನಂತರ ಚಿತ್ತೂರು ಕೋರ್ಟ್ ಸ್ಫೋಟಕ್ಕೆ ಸಂಬಂಧಿಸಿದಂತೆ ಪತ್ರದಲ್ಲಿ ಬೇಸ್‌ ಮೂಮೆಂಟಿನ ಜವಾಬ್ದಾರಿಯಲ್ಲಿ ಎಂದು ಬರೆದಿದೆ, ಜೊತೆಗೆ ಕಲ್ಲಾಮ್ ಸ್ಪೋಟಕ್ಕೂ ಇದೇ ಜವಾಬ್ದಾರಿ ಹೊಂದಿದೆ ಎಂಬ ವಿಷಯ ಜಾಹೀರಾಗಿದೆ.[ಮೈಸೂರು ಬ್ಲಾಸ್ಟ್‌ನಲ್ಲಿ ಹೊಸ ಉಗ್ರ ಸಂಘಟನೆಯ ಹೆಸರು]

ಈ ಅಲ್- ಉಮ್ಹಾ ಆಪರೇಷನ್ ನಲ್ಲಿ ಹಲವು ಸ್ಪೋಟದ ಜೊತೆಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ಬಿಜೆಪಿ ಆಫಿಸಿನ ಮುಂಭಾಗ ನಡೆದ ಸ್ಪೋಟವು ಸೇರಿದೆ.

ಹೀಗೆ ಬೇಸ್‌ ಮೂಮೆಂಟ್ ಸಂಘವು ದೇಶದ ಆಂತರಿಕವಾಗಿ ಭಯವನ್ನು ಉತ್ತೇಜಿಸಲು ಇನ್ನು ಯಾವ ಯಾವ ಮಾದರೆ ಪ್ರಯೋಗಗಳನ್ನು ನಡೆಸುತ್ತಿದ್ದೇಯೋ ತಿಳಿದಿಲ್ಲ. ಅಧರೆ ಈ ರೀತಿಯದ್ದೊಂದು ಸುಳಿವು ಸಿಕ್ಕಿರುವುದು ಉಗ್ರರನ್ನು ಸೆದೆಬಡಿಯಲು ಅವಕಾಶವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A pen drive that was recovered from the blast site at Mallapuram hadpictures of the Prime Minister among other leaders. A blast had takenplace outside a court in Mallapuram, Kerala two days back. The blastwas claimed by the Base Movement.
Please Wait while comments are loading...