62,250 ಕೋಟಿ ರು ಕಪ್ಪುಹಣ ಘೋಷಣೆ: ಅರುಣ್ ಜೇಟ್ಲಿ

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್ 01: ಕಪ್ಪು ಹಣ ಸ್ವಯಂ ಘೋಷಣೆ ಯೋಜನೆ ಮೂಲಕ ಸರಿ ಸುಮಾರು 64,275 ಮಂದಿ ಘೋಷಿಸಿದ ಮೊತ್ತ 62,250 ಕೋಟಿ ರು ಆಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಶನಿವಾರ ವಿವರ ನೀಡಿದರು. ನಾಲ್ಕು ತಿಂಗಳುಗಳ ಕಾಲ ನಡೆದ ಸ್ವಯಂ ಘೋಷಣೆ ಯೋಜನೆ ಸೆಪ್ಟೆಂಬರ್ 30ಕ್ಕೆ ಕೊನೆಗೊಂಡಿತ್ತು.

ಅರುಣ್ ಜೇಟ್ಲಿ ಸುದ್ದಿಗೋಷ್ಠಿ ವಿವರಗಳು:
* ಒಟ್ಟು 64,275 ಮಂದಿ ಈ ಯೋಜನೆ ಬಳಸಿ ಸ್ವಯಂಘೋಷಣೆ ಮಾಡಿದ್ದಾರೆ.
* 62,250 ಕೋಟಿ ರು ಮೊತ್ತ ಅಘೋಷಿತ ಆದಾಯ ಹಾಗೂ ಆಸ್ತಿ ಘೋಷಣೆಯಾಗಿದೆ. ಸರಾಸರಿ ವ್ಯಕ್ತಿಯೊಬ್ಬರಿಗೆ 1ಕೋಟಿ ರು ನಂತೆ ಲೆಕ್ಕ ಸಿಗುತ್ತದೆ.
* 56,378 ಕೋಟಿ ರು ಮೊತ್ತವನ್ನು ಆದಾಯ ತೆರಿಗೆ ಇಲಾಖೆ ಶೋಧ ಕಾರ್ಯಗಳ ಮೂಲಕ ವಶಕ್ಕೆ ತೆಗೆದುಕೊಂಡಿದೆ.

Black money worth Rs 62,250 crore declared under Disclosure Scheme says Arun Jaitely

* ಎಚ್ ಎಸ್ ಬಿಸಿ ಪಟ್ಟಿಯಲ್ಲಿದ್ದ ತೆರಿಗೆ ವಂಚಕರ ವಿರುದ್ಧ 164 ಕ್ರಿಮಿನಲ್ ಕೇಸುಗಳನ್ನು ದಾಖಲಿಸಿದ್ದು, ಕೇಸ್ ಇತ್ಯರ್ಥವಾದ ಮೇಲೆ ಇನ್ನಷ್ಟು ಮೊತ್ತ ಸರ್ಕಾರದ ಬೊಕ್ಕಸ ಸೇರುವ ನಿರೀಕ್ಷೆಯಿದೆ.
* ಕಪ್ಪು ಹಣ ಸ್ವಯಂ ಘೋಷಣೆ ಯೋಜನೆ ಅಡಿಯಲ್ಲಿ ಘೋಷಣೆ ಮಾಡಿದ ವ್ಯಕ್ತಿ, ಸಂಸ್ಥೆಯ ಹೆಸರನ್ನು ಗೌಪ್ಯವಾಗಿಡಲಾಗುವುದು.
* ಈ ಯೋಜನೆ ಅಡಿಯಲ್ಲಿ ಸಂಗ್ರಹಿತವಾದ ಮೊತ್ತವನ್ನು ಸಾಮಾಜಿಕ ಅಭಿವೃದ್ಧಿಗೆ ಬಳಸಲಾಗುವುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Black money worth Rs 62,250 crore have been declared by 64,275 people under the latest Income Tax Disclosure Scheme says Finance Minister Arun Jaitely. "Roughly, the declarations work out to Rs 1 crore per declarant. Some will be higher, some will be lower," he said,
Please Wait while comments are loading...