ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬೀನ್ ಹೊಸ ತಂಡ: ಬಿ.ಎಲ್.ಸಂತೋಷ್‌ಗೆ ಉಳಿದ ಸ್ಥಾನ, ಸ್ಮೃತಿ ಇರಾನಿಗೆ ಹೊಸ ಹೊಣೆ

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬೀನ್ ಅಧಿಕಾರ ವಹಿಸಿಕೊಂಡ ಸುಮಾರು ಆರು ತಿಂಗಳ ಬಳಿಕ ಪಕ್ಷದ ನೂತನ ರಾಷ್ಟ್ರೀಯ ತಂಡವನ್ನು ಘೋಷಿಸಲಾಗಿದೆ. ಅನುಭವ ಮತ್ತು ಯುವ ನಾಯಕತ್ವಕ್ಕೆ ಸಮಾನ ಆದ್ಯತೆ ನೀಡಿರುವ ಹೊಸ ತಂಡದಲ್ಲಿ ಮಹಿಳೆಯರಿಗೂ ಗಣನೀಯ ಪ್ರಾತಿನಿಧ್ಯ ಕಲ್ಪಿಸಲಾಗಿದೆ. ಹಲವು ಹಿರಿಯ ನಾಯಕರಿಗೆ ರಾಷ್ಟ್ರೀಯ ಮಟ್ಟದಲ್ಲಿ ಹೊಸ ಹೊಣೆಗಾರಿಕೆಗಳನ್ನು ವಹಿಸಲಾಗಿದೆ.

ಬಿಎಲ್ ಸಂತೋಷ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಹುದ್ದೆಯಲ್ಲೇ ಮುಂದುವರಿಯಲಿದ್ದಾರೆ. ಇದೇ ವೇಳೆ ಅಮೇಥಿಯ ಮಾಜಿ ಸಂಸದೆ ಸ್ಮೃತಿ ಇರಾನಿ , ತ್ರಿಪುರದ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ , ಸುನಿಲ್ ಬನ್ಸಾಲ್, ವಿನೋದ್ ತಾವ್ಡೆ, ಗಜೇಂದ್ರ ಪಟೇಲ್, ಸತೀಶ್ ಪೂನಿಯಾ, ಹರೀಶ್ ದ್ವಿವೇದಿ ಮತ್ತು ಸಂಜಯ್ ಭಾಟಿಯಾ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಿಸಲಾಗಿದೆ.

BJP Unveils New National Team Under Nitin Nabin BL Santosh Retains Post Smriti Irani Gets Key Role

13 ರಾಷ್ಟ್ರೀಯ ಉಪಾಧ್ಯಕ್ಷರು

ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರ ಪಟ್ಟಿಯಲ್ಲೂ ಹಲವು ಪ್ರಮುಖ ಹೆಸರುಗಳು ಕಾಣಿಸಿಕೊಂಡಿವೆ. ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ , ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ , ರಾಮ್ ಮಾಧವ್, ಬೈಜಯಂತ್ ಜಯ್ ಪಾಂಡಾ, ಡಿ. ಪುರಂದೇಶ್ವರಿ, ರೇಖಾ ವರ್ಮಾ, ವರ್ಷಾಬೆನ್ ನರೇಂದ್ರಭಾಯಿ ದೋಷಿ, ಡಾ. ಭಾರತಿ ಪ್ರವೀಣ್ ಪವಾರ್, ಮನ್ಪ್ರೀತ್ ಸಿಂಗ್ ಬಾದಲ್, ಲಾಲ್ ಸಿಂಗ್ ಆರ್ಯ, ಕರ್ನಾಟಕದ ಪ್ರೊ. ಎಂ. ನಾಗರಾಜ್, ಪ್ರೊ. ತಾರಿಕ್ ಮನ್ಸೂರ್ ಮತ್ತು ಡಾ. ಮಧುಚಂದ್ರ ಕಾರ್ ಅವರಿಗೆ ಉಪಾಧ್ಯಕ್ಷರ ಜವಾಬ್ದಾರಿ ನೀಡಲಾಗಿದೆ.

ರಾಷ್ಟ್ರೀಯ ಕಾರ್ಯದರ್ಶಿಗಳ ಪಟ್ಟಿ

ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ಕವಿತಾ ಪಾಟಿದಾರ್, ಕೆ. ಸುರೇಂದ್ರನ್, ಡಾ. ಭೋಲಾ ಸಿಂಗ್, ಪ್ರದೀಪ್ ವರ್ಮಾ, ಜಗದೀಶ್ ಈಶ್ವರಭಾಯಿ ಪಟೇಲ್, ಸಂದೀಪ್ ಪಾಠಕ್, ಫಾಂಗ್ನಾನ್ ಕೊನ್ಯಾಕ್, ಸಂಗೀತಾ ಯಾದವ್, ಅನಿಲ್ ಆಂಟೋನಿ, ಎಂ. ವೆಂಕಟೇಶನ್, ಮನೋಜ್ ಟಿಗ್ಗಾ, ಸಿದ್ಧಾರ್ಥ್ ಶಂಭು, ಸ್ವದೇಶ್ ಸಿಂಗ್, ಮೃಗಾಂಕ ಡಿಯೋ ಬರ್ಮನ್, ರೋಹನ್ ಗುಪ್ತಾ ಮತ್ತು ಜೈ ಪ್ರಕಾಶ್ ಅವರನ್ನು ನೇಮಕ ಮಾಡಲಾಗಿದೆ. ಪಿಯೂಷ್ ಗೋಯಲ್ ಅವರನ್ನು ಮತ್ತೊಮ್ಮೆ ಪಕ್ಷದ ರಾಷ್ಟ್ರೀಯ ಖಜಾಂಚಿಯಾಗಿ ಮುಂದುವರಿಸಲಾಗಿದೆ.

ಮೋರ್ಚಾಗಳಿಗೂ ಹೊಸ ಜವಾಬ್ದಾರಿ

ರಾಜ್ಯಸಭಾ ಸಂಸದ ತರುಣ್ ಚುಗ್ ಅವರಿಗೆ ಬಿಜೆಪಿ ಕೇಂದ್ರ ಕಚೇರಿ ಉಸ್ತುವಾರಿ ವಹಿಸಲಾಗಿದೆ. ಗುಜರಾತ್ ಸಂಸದ ಹೇಮಾಂಗ್ ಜೋಶಿ ಅವರಿಗೆ ಯುವ ಮೋರ್ಚಾ ಉಸ್ತುವಾರಿ ನೀಡಲಾಗಿದ್ದು, ಛತ್ತೀಸ್‌ಗಢದ ರೂಪ್ ಕುಮಾರಿ ಚೌಧರಿ ಮಹಿಳಾ ಮೋರ್ಚಾದ ಜವಾಬ್ದಾರಿ ವಹಿಸಲಿದ್ದಾರೆ.

ಲೋಕಸಭಾ ಸಂಸದ ಅನಿಲ್ ಬಲುನಿ ಅವರು ಮಾಧ್ಯಮ ಸಂಚಾಲಕರಾಗಿ ಮುಂದುವರಿಯಲಿದ್ದಾರೆ. ಆಶಿಶ್ ಉಷಾ ಅಗರ್ವಾಲ್, ಪ್ರದೀಪ್ ಭಂಡಾರಿ ಮತ್ತು ಸಿದ್ಧಾರ್ಥ್ ಯಾದವ್ ಸಹ ಸಂಚಾಲಕರಾಗಿ ನೇಮಕಗೊಂಡಿದ್ದಾರೆ. ಛತ್ತೀಸ್‌ಗಢದ ದೀಪಕ್ ಮಾಸ್ಕಿ ಅವರಿಗೆ ಸಾಮಾಜಿಕ ಮಾಧ್ಯಮ ಸಂಚಾಲಕರ ಹೊಣೆ ನೀಡಲಾಗಿದೆ.

ಪ್ರೋ. ಎಂ. ನಾಗರಾಜ್‌ ಒಲಿದ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ

ಬಿಜೆಪಿ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಜೊತೆಗೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ ನಬಿನ್‌ ಅವರು 13 ಜನ ರಾಷ್ಟ್ರೀಯ ಉಪಾಧ್ಯಕ್ಷರನ್ನೂ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಕರ್ನಾಟಕದ ರಾಜ್ಯಸಭಾ ಸಂಸದರಾಗಿರುವ ಹುಬ್ಬಳ್ಳಿಯ ಪ್ರೋ. ಎಂ. ನಾಗರಾಜ್‌ ಅವರ ಆಯ್ಕೆ ಮಾಡಿದ್ದಾರೆ. ಕಳೆದ ಬಾರಿ ನಡೆದ ರಾಜ್ಯಸಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಆಯ್ಕೆಯಾಗಿದ್ದ ಎಂ. ನಾಗರಾಜ್‌ ಅವರಿಗೆ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನವೂ ಒಲಿದು ಬಂದಿದೆ.

2027ರ ಚುನಾವಣೆಗಳೇ ಮೊದಲ ಸವಾಲು

ನಿತಿನ್ ನಬೀನ್ ಅವರ ಹೊಸ ತಂಡಕ್ಕೆ ಮುಂದಿನ ದಿನಗಳಲ್ಲಿ ಹಲವು ರಾಜಕೀಯ ಸವಾಲುಗಳು ಎದುರಾಗಲಿವೆ. ವಿಶೇಷವಾಗಿ 2027ರಲ್ಲಿ ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳು ಹೊಸ ತಂಡದ ಕಾರ್ಯಕ್ಷಮತೆಗೆ ಪ್ರಮುಖ ಪರೀಕ್ಷೆಯಾಗಲಿವೆ. ಪಕ್ಷದ ಸಂಘಟನೆಯಲ್ಲಿ ಮಾಡಿರುವ ಈ ಬದಲಾವಣೆಗಳು ಮುಂದಿನ ಚುನಾವಣಾ ತಂತ್ರಗಾರಿಕೆಗೆ ವೇಗ ನೀಡುವ ಉದ್ದೇಶ ಹೊಂದಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ರಾಷ್ಟ್ರೀಯ ತಂಡದ ಪುನರ್‌ರಚನೆಯ ಬೆನ್ನಲ್ಲೇ ಕೇಂದ್ರ ಸಚಿವ ಸಂಪುಟದಲ್ಲೂ ಬದಲಾವಣೆಗಳಾಗುವ ಸಾಧ್ಯತೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+