ಗೇಲಿಗೊಳಗಾದ ಬಿಜೆಪಿಯ ಟ್ವೀಟ್: ರೀಟ್ವೀಟ್ ಮಾಡಿ ಕಾಲೆಳೆದ ಕಾಂಗ್ರೆಸ್
ನವದೆಹಲಿ, ಸೆಪ್ಟೆಂಬರ್ 10: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಭಾರಿ ಮೂದಲಿಕೆ, ಟೀಕೆಗೆ ಒಳಗಾಗಿರುವ ಬಿಜೆಪಿಯು ಅದರಿಂದ ಬಚಾವಾಗಲು ಹೊಸ-ಹೊಸ ವಾದಗಳನ್ನು ಮುಂದಿಡುತ್ತಿದೆ. ಇದೇ ಉದ್ದೇಶದಿಂದ ಬಿಜೆಪಿ ಮಾಡಿರುವ ಟ್ವೀಟ್ ಭಾರಿ ನಗೆಪಾಟಲಿಗೆ ಈಡಾಗಿದೆ.
ಡೀಸೆಲ್ ಬೆಲೆ ಏರಿಕೆಯ ಬಗ್ಗೆ ಬಿಜೆಪಿ ಇಂದು ಮಾಡಿರುವ ಟ್ವೀಟ್‌ನಲ್ಲಿ ಯುಪಿಎ ಸರ್ಕಾರದ ಅವಧಿಯ ಡೀಸೆಲ್ ಬೆಲೆ ಏರಿಕೆಯನ್ನು ದೊಡ್ಡದಾಗಿ ಬಿಂದಿಸಿ, ತನ್ನ ಅವಧಿಯಲ್ಲಿ ಏರಿಕೆಯಾದ ಬೆಲೆಯನ್ನು ಕಡಿಮೆ ಎಂದು ತೋರಿಸುವ ಅಂಕಿ-ಅಂಶವನ್ನು ಪ್ರಕಟಿಸಿದೆ.

ಬಿಜೆಪಿಯ ಈ ಟ್ವೀಟ್‌ನಲ್ಲಿ ಬೆಲೆ ಏರಿಕೆಯನ್ನೂ ಸಹ ಇಳಿಕೆಯ ಹಾದಿಯಲ್ಲಿ ತೋರಿಸಿರುವುದು ನೆಟ್ಟಿಗರಿಂದ ವ್ಯಂಗ್ಯಕ್ಕೆ ಗುರಿಯಾಗಿದೆ. ಈ ಟ್ವೀಟ್ ಎಷ್ಟು ವ್ಯಂಗ್ಯವಾಗಿದೆಯೆಂದರೆ ಬಿಜೆಪಿಯ ಕಟ್ಟಾ ಎದುರಾಳಿ ಕಾಂಗ್ರೆಸ್ ಸಹ ಇದನ್ನು ರೀಟ್ವೀಟ್ ಮಾಡಿದೆ!
Truth of hike in diesel prices! pic.twitter.com/gF7CWHeiti
— BJP (@BJP4India) September 10, 2018
ಆ ನಂತರ ಇದೇ ಟ್ವೀಟ್‌ಗೆ ಸಂಬಂಧಪಟ್ಟಂತೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಬಳಸಿದ್ದ ಗ್ರಾಫಿಕ್ಸ್ ಮಾದರಿಯನ್ನೇ ಬಳಸಿ ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಏರಿಕೆಯ ಬಗ್ಗೆ ಅಂಕಿ-ಅಂಶಗಳನ್ನು ನೀಡಿದೆ. ಜೊತೆಗೆ ಬಿಜೆಪಿ ಮಾಡಿದ್ದ ತಪ್ಪು ಮಾಹಿತಿಯುಳ್ಳ ಟ್ವೀಟ್ ಅನ್ನು ನಾವು ಸರಿಪಡಿಸಿದ್ದೇವೆ ಎಂದು ಕ್ಯಾಪ್ಷನ್ ಸಹ ನೀಡಿದೆ.
There! Fixed it for you @BJP4India#MehangiPadiModiSarkar pic.twitter.com/kbKBjUi0M7
— Congress (@INCIndia) September 10, 2018











Click it and Unblock the Notifications