ಸಿಎಂ, ಡಿಸಿಎಂ ಕ್ಷೇತ್ರಗಳಲ್ಲೇ ಬಿಜೆಪಿಗೆ ಸೋಲು : ಸಿದ್ದು ವ್ಯಂಗ್ಯ

ಬೆಂಗಳೂರು, ಮಾರ್ಚ್ 15: ಉತ್ತರ ಪ್ರದೇಶ ಉಪ ಚುನಾವಣೆಯಲ್ಲಿ ಬಿಜೆಪಿ ಭಾರಿ ಮುಖಭಂಗ ಅನುಭವಿಸಿದ್ದು, ಕಾಂಗ್ರೆಸ್ ಸಂಭ್ರಮಕ್ಕೆ ನಾಂದಿ ಹಾಡಿದೆ.

ಉತ್ತರ ಪ್ರದೇಶ ಉಪ ಚುನಾವಣೆಯ ಫಲಿತಾಂಶ ಕುರಿತಂತೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ, ವ್ಯಂಗ್ಯವಾಡಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಅವರ ಸ್ವಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಕಂಡಿರುವುದನ್ನು ಮುಖ್ಯವಾಗಿ ಉಲ್ಲೇಖಿಸಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಲೋಕಸಭೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ.

ಸಿಎಂ ಹಾಗೂ ಡಿಸಿಎಂ ಕ್ಷೇತ್ರಗಳಲ್ಲೇ ಕಳೆದುಕೊಂಡಿದ್ದಾರೆ. ಐತಿಹಾಸಿಕ ಜಯ ದಾಖಲಿಸಿದ ಎಸ್ ಪಿ ಹಾಗೂ ಬಿಎಸ್ ಪಿಗೆ ಶುಭಹಾರೈಕೆಗಳು ಎಂದಿದ್ದಾರೆ. ಬಿಜೆಪಿಯೇತರ ಪಕ್ಷಗಳ ಒಗ್ಗಟ್ಟು ಇಲ್ಲಿ ಮುಖ್ಯ ಎಂದು ಟ್ವೀಟ್ ಮಾಡಿದ್ದಾರೆ.

BJP has suffered humiliating loss in the Lok Sabha seats held by the CM & DyCM of UP

ಪ್ರತಿಷ್ಠೆಯ ಕಣದಲ್ಲಿಯೇ ಬಿಜೆಪಿ ಸೋತು ಸುಣ್ಣವಾಗಿರುವುದರಿಂದ ಆಡಿಕೊಂಡು ನಗುವವರ ಮುಂದೆ ಆದಿತ್ಯನಾಥ್ ಅವರು ಎಡವಿ ಬಿದ್ದಂತೆ ಆಗಿದೆ.

ಕರ್ನಾಟಕ ಕೂಡ ಉಪ ಚುನಾವಣೆಯನ್ನು ದೇಶವೇ ಕುತೂಹಲದಿಂದ ವೀಕ್ಷಣೆ ಮಾಡುತ್ತಿದೆ. ಈಗ ಸ್ವಕ್ಷೇತ್ರದಲ್ಲೇ ಸೋಲು ಕಂಡಿರುವ ಯೋಗಿ ಆದಿತ್ಯನಾಥ್ ಅವರು ಕರ್ನಾಟಕದಲ್ಲಿ ಭಾಷಣ ಮಾಡಲು ಬಂದು, ಅಭಿವೃದ್ಧಿಯ ಬಗ್ಗೆ ಮಾತನಾಡುವುದನ್ನು ಕಡಿಮೆ ಮಾಡಲಿ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+