ಸಿ-ವೋಟರ್ ಸಮೀಕ್ಷೆಯಲ್ಲೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಗೆಲುವು

Subscribe to Oneindia Kannada
   Himachal Pradesh Assembly Poll 2017 : ಬಿಜೆಪಿಗೆ ಅಧಿಕಾರ ಎಂದು ನುಡಿದ ಸಿ ವೋಟರ್ ಸಮೀಕ್ಷೆ

   ನವದೆಹಲಿ, ನವೆಂಬರ್ 7: ಗುರುವಾರ ಚುನಾವಣೆ ನಡೆಯಲಿರುವ ಹಿಮಾಚಲ ಪ್ರದೇಶದ ಚುನಾವಣಾ ಪೂರ್ವ ಸಮೀಕ್ಷೆಯನ್ನು ಸಿ ವೋಟರ್ ಬಿಡುಗಡೆ ಮಾಡಿದೆ.

   ಗುಜರಾತ್, ಹಿ. ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯೇ ಬುಕ್ಕಿಗಳ ಗೆಲ್ಲುವ ಫೇವರಿಟ್

   ಬಿಜೆಪಿ ಶೇ. 11.8 ರಷ್ಟು ಹೆಚ್ಚಿನ ಮತಗಳನ್ನು ಪಡೆದುಕೊಂಡು ಅಧಿಕಾರಕ್ಕೇರಲಿದೆ. ಕಾಂಗ್ರೆಸ್ ಶೇಕಡಾ 5ರಷ್ಟು ಕಡಿಮೆ ಮತಗಳನ್ನು ಪಡೆದುಕೊಂಡು ಅಧಿಕಾರ ಕಳೆದುಕೊಳ್ಳಲಿದೆ ಎಂದು ಸಿ ವೋಟರ್ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ.

   ಸಮೀಕ್ಷೆ: ಹಿಮಾಚಲ ಪ್ರದೇಶದಲ್ಲೂ ಹಾರಲಿದೆ ಬಿಜೆಪಿ ಪತಾಕೆ

   ಬಿಜೆಪಿ ತನ್ನ ಸೀಟು ಗಳಿಕೆಯನ್ನು 26 ಸ್ಥಾನಗಳಿಂದ 52 ಸ್ಥಾನಗಳಿಗೆ ಹೆಚ್ಚಿಸಿಕೊಳ್ಳಲಿದೆ. ಕಾಂಗ್ರೆಸ್ ಹಾಲಿ 36 ಸ್ಥಾನಗಳಲ್ಲಿ 21 ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ.

    ನಿರುದ್ಯೋಗದ್ದೇ ಸಮಸ್ಯೆ

   ನಿರುದ್ಯೋಗದ್ದೇ ಸಮಸ್ಯೆ

   ಹಿಮಾಚಲ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆ ಮಿತಿ ಮೀರಿದೆ ಎಂದು ಶೇಕಡಾ 37ರಷ್ಟು ಜನರು ಹೇಳಿದ್ದಾರೆ. ನೀರು, ರಸ್ತೆ, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿ ಎರಡನೇ ಸ್ಥಾನದಲ್ಲಿದ್ದು ಶೇಕಡಾ 26 ರಷ್ಟು ಜನರು ಈ ಸಮಸ್ಯೆಗಳತ್ತ ಬೆಟ್ಟು ಮಾಡಿದ್ದಾರೆ. ಭ್ರಷ್ಟಾಚಾರ ಮತ್ತು ಇತರ ಕಾರಣಗಳನ್ನು ಶೇಕಡಾ 9ರಷ್ಟು ಜನರು ಬೆಂಬಲಿಸಿದ್ದಾರೆ.

   ಈ ಸಮಸ್ಯೆಗಳ ಪರಿಹಾರಕ್ಕೆ ಬಿಜೆಪಿಯೇ ಬೆಸ್ಟ್ ಎಂಬುದು ಜನರ ಅಭಿಪ್ರಾಯವಾಗಿದೆ.

    ಮುಂದಿನ ಸಿಎಂ ಯಾರು?

   ಮುಂದಿನ ಸಿಎಂ ಯಾರು?

   ಶೇಕಡಾ 33 ರಷ್ಟು ಜನರು ಮುಂದಿನ ಮುಖ್ಯಮಂತ್ರಿಯಾಗಿ ಬಿಜೆಪಿಯ ಪ್ರೇಮ್ ಕುಮಾರ್ ಧುಮಾಲ್ ರನ್ನು ನೋಡಲು ಬಯಸಿದ್ದಾರೆ. ಇನ್ನು ಶೇಕಡಾ 32ರಷ್ಟು ಜನರು ಹಾಲಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ರನ್ನು ಬೆಂಬಲಿಸಿದ್ದಾರೆ.

   ಬಿಜೆಪಿಯ ಕೇಂದ್ರ ಸಚಿವರಾದ ಜೆಪಿ ನಡ್ಡಾ ಹಾಗೂ ಅನುರಾಗ್ ಠಾಕೂರ್ ಮುಖ್ಯಮಂತ್ರಿಯಾಗಬೇಕು ಎಂದು ಕ್ರಮವಾಗಿ ಶೇಕಡಾ 12 ಮತ್ತು 5ರಷ್ಟು ಜನ ಬಯಸಿದ್ದಾರೆ.

    ವೀರಭದ್ರ ಸಿಂಗ್ ಬೆಸ್ಟ್ ಆದರೂ ಬಿಜೆಪಿ ಬೇಕು

   ವೀರಭದ್ರ ಸಿಂಗ್ ಬೆಸ್ಟ್ ಆದರೂ ಬಿಜೆಪಿ ಬೇಕು

   ಹಿಂದಿನ ಯಾವ ಸರಕಾರಗಳು ನಿಮಗೆ ಉತ್ತಮ ಎಂದು ಜನರ ಬಳಿ ಕೇಳಿದ್ದಕ್ಕೆ ಶೇಕಡಾ 41.2ರಷ್ಟು ಜನರು ವೀರಭದ್ರ ಸಿಂಗ್ ರ ಕಾಂಗ್ರೆಸ್ ಸರಕಾರವೇ ಉತ್ತಮ ಎಂದಿದ್ದಾರೆ. ಹೀಗಿದ್ದೂ ಈ ಬಾರಿ ಬಿಜೆಪಿ ಸರಕಾರ ಬೇಕು ಎಂದು ಜನರು ಬಯಸಿದ್ದಾರೆ. ಪ್ರೇಮ್ ಕುಮಾರ್ ಧುಮಾಲ್ ರ ಬಿಜೆಪಿ ಸರಕಾರ ಉತ್ತಮ ಎಂದು ಶೇಕಡಾ 26.9 ಜನರು ಹೇಳಿದ್ದಾರೆ.

   ಹಿಂದಿನ ಸಮೀಕ್ಷೆಗಳಲ್ಲೂ ಬಿಜೆಪಿಗೆ ಬೆಂಬಲ

   ಹಿಂದಿನ ಸಮೀಕ್ಷೆಗಳಲ್ಲೂ ಬಿಜೆಪಿಗೆ ಬೆಂಬಲ

   68 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 43-47 ಸ್ಥಾನಗಳನ್ನು ಗೆಲ್ಲಲಿದೆ ಎಂದು 'ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ' ಜನಾಭಿಪ್ರಾಯದಲ್ಲಿ ತಿಳಿದು ಬಂದಿತ್ತು. ಹಿಮಾಚಲ ಪ್ರದೇಶದಲ್ಲಿ ಬಹುಮತಕ್ಕೆ 35 ಸ್ಥಾನಗಳು ಬೇಕಾಗಿವೆ.

   ನವೆಂಬರ್ 7ರಂದು ಇಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 18ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   The BJP is heading for a big victory in the Himachal Pradesh assembly elections 2017 according to an opinion poll conducted by C-voter. According to the poll, BJP will garner 52 of the total 68 seats in the Himachal Pradesh Assembly. The majority mark in the state is 35.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ