ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಚ ರಾಜ್ಯ ಸೋಲಿನ ಬಳಿಕ ಬಿಜೆಪಿಗೆ ಉಳಿದದ್ದು ಎಷ್ಟು ರಾಜ್ಯಗಳು?

|
Google Oneindia Kannada News

Recommended Video

5 States Election Results 2018 : ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ಬಿಜೆಪಿಗೆ ಉಳಿದ ರಾಜ್ಯಗಳೆಷ್ಟು?

ನವದೆಹಲಿ, ಡಿಸೆಂಬರ್ 11: ದೇಶದಲ್ಲಿ ಇರುವ 29 ರಾಜ್ಯಗಳಲ್ಲಿ ಮುಕ್ಕಾಲು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಸ್ಥಾನದಲ್ಲಿತ್ತು. ಇದು ಆ ಪಕ್ಷಕ್ಕೆ ಇದ್ದ ಬಹುದೊಡ್ಡ ಹೆಮ್ಮೆ ಆಗಿತ್ತು. ಈ ಬಗ್ಗೆ ಸ್ವತಃ ಮೋದಿ ಅವರೇ ಹಲವು ಬಾರಿ ಎದೆತಟ್ಟಿಕೊಂಡಿದ್ದರು. ಆದರೆ ಇಂದಿನ ಚುನಾವಣೆ ಬಳಿಕ ಈ ಅವಕಾಶ ತಪ್ಪಿದೆ.

ಹೌದು, ನಿನ್ನೆಯವರೆಗೂ ಬಿಜೆಪಿಯು ದೇಶದ 18 ರಾಜ್ಯಗಳಲ್ಲಿ ಅಧಿಕಾರ ಸ್ಥಾನದಲ್ಲಿತ್ತು. ಜಮ್ಮು ಕಾಶ್ಮೀರದಲ್ಲಿ ಮೈತ್ರಿ ಮುರಿಯುವ ಮುನ್ನಾ ಬಿಜೆಪಿ 19 ರಾಜ್ಯದಲ್ಲಿ ಆಡಳಿತದಲ್ಲಿತ್ತು. 14 ರಾಜ್ಯಗಳಲ್ಲಿ ಬಿಜೆಪಿ ಪಕ್ಷದವರ ಮುಖ್ಯಮಂತ್ರಿ ಆಗಿದ್ದರು. ಉಳಿದ ಐದು ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಪಕ್ಷಕ್ಕೆ ಬೆಂಬಲ ನೀಡಿ ಆಡಳಿತದ ಭಾಗವಾಗಿತ್ತು.

ಲೋಕಸಭೆಗೆ ಬಿಜೆಪಿಗೆ ಕೌಂಟ್ ಡೌನ್ ಶುರುವಾಗಿದೆ: ಮಮತಾ ಬ್ಯಾನರ್ಜಿಲೋಕಸಭೆಗೆ ಬಿಜೆಪಿಗೆ ಕೌಂಟ್ ಡೌನ್ ಶುರುವಾಗಿದೆ: ಮಮತಾ ಬ್ಯಾನರ್ಜಿ

ಆದರೆ ಇಂದಿನ ಚುನಾವಣೆ ಫಲಿತಾಂಶದ ನಂತರ ಬಿಜೆಪಿಯು ತನ್ನ ಬತ್ತಳಿಕೆಯ ಪ್ರಮುಖ ಮೂರು ರಾಜ್ಯಗಳನ್ನು ಕಳೆದುಕೊಂಡಿದೆ. ಬಿಜೆಪಿ ಆಡಳಿತವಿದ್ದ ಬಹುದೊಡ್ಡ ರಾಜ್ಯಗಳಾದ ಮಧ್ಯ ಪ್ರದೇಶ ಮತ್ತು ರಾಜಸ್ಥಾನ ಕೈಜಾರಿದ್ದು ಬಿಜೆಪಿಗೆ ಬಹುದೊಡ್ಡ ಹೊಡೆತವಾಗಿದೆ. ಹದಿನೈದು ವರ್ಷದಿಂದ ಬಿಜೆಪಿ ಆಡಳಿತವಿದ್ದ ಛತ್ತೀಸ್‌ಗಢ ಸಹ ಕಾಂಗ್ರೆಸ್ ಪಾಲಾಗಿದೆ.

ಬಿಜೆಪಿಯ ಹೆಮ್ಮೆಗೆ ಪೆಟ್ಟು

ಬಿಜೆಪಿಯ ಹೆಮ್ಮೆಗೆ ಪೆಟ್ಟು

ಮೂರು ಪ್ರಮುಖ ರಾಜ್ಯಗಳನ್ನು ಸೋತ ಬಳಿಕ ಬಿಜೆಪಿ ಬಳಿ ಈಗ 15 ರಾಜ್ಯಗಳಷ್ಟೆ ಉಳಿದಿವೆ. ಅದರಲ್ಲಿ ಬಿಜೆಪಿ ಸಿಎಂ ಆಡಳಿತವಿರುವುದು 11 ರಾಜ್ಯಗಳಲ್ಲಿ ಮಾತ್ರವೇ. ಇದು ಬಿಜೆಪಿಯ ಹೆಮ್ಮೆಗೆ ಬಿದ್ದ ಪೆಟ್ಟಾಗಿದೆ. ಅತಿ ಹೆಚ್ಚು ರಾಜ್ಯಗಳಲ್ಲಿ ತನ್ನ ಆಡಳಿತ ಹೊಂದಿರುವ ಬಗ್ಗೆ ಬಿಜೆಪಿಗೆ ಬಹು ಹೆಮ್ಮೆ ಇತ್ತು. ಈಗಲೂ ಅತಿ ಹೆಚ್ಚು ರಾಜ್ಯಗಳಲ್ಲಿ ಆಡಳಿತ ಹೊಂದಿರುವ ರಾಜ್ಯ ಬಿಜೆಪಿಯೇ ಆಗಿದೆ. ಆದರೆ ಮುಂಚಿನಷ್ಟು ಸಂಖ್ಯೆ ಈಗಿಲ್ಲವಷ್ಟೆ.

ಪ್ರಧಾನಿ ಸಹ ಹಲವು ಬಾರಿ ಹೇಳಿದ್ದರು

ಪ್ರಧಾನಿ ಸಹ ಹಲವು ಬಾರಿ ಹೇಳಿದ್ದರು

ದೇಶದ 19 ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ ಎಂಬುದನ್ನು ಮೋದಿ ಅವರೇ ಹಲವು ಬಾರಿ ಎದೆತಟ್ಟಿಕೊಂಡು ಹೇಳಿದ್ದರು. ಇಂದಿರಾಗಾಂಧಿಯ ನಂತರ ನಾನೇ ಅತಿ ಹೆಚ್ಚು ರಾಜ್ಯಗಳಲ್ಲಿ ಆಡಳಿತವಿರುವ ಪಕ್ಷದ ಪ್ರಧಾನಿ ಎಂದು ಸಹ ಅವರೇ ಹೇಳಿಕೊಂಡಿದ್ದರು. ಆದರೆ ಅವರು ಹೀಗೆ ಹೇಳಿದ ಕೆಲವೇ ತಿಂಗಳಲ್ಲಿ ಈ ದೊಡ್ಡ ಪೆಟ್ಟು ಬಿದ್ದಿದೆ.

ಪಂಚ ರಾಜ್ಯ ವಿಧಾನಸಭಾ ಚುನಾವಣೆಯ ಸಮಗ್ರ ಫಲಿತಾಂಶ ಪಂಚ ರಾಜ್ಯ ವಿಧಾನಸಭಾ ಚುನಾವಣೆಯ ಸಮಗ್ರ ಫಲಿತಾಂಶ

ಕೋಮಾದಿಂದ ಎದ್ದ ಕಾಂಗ್ರೆಸ್‌

ಕೋಮಾದಿಂದ ಎದ್ದ ಕಾಂಗ್ರೆಸ್‌

ಕೇವಲ ಎರಡು ರಾಜ್ಯಗಳಲ್ಲಿ ಮಾತ್ರವೇ ಉಳಿದುಕೊಂಡು ಕೋಮಾ ಸ್ಥಿತಿಯಲ್ಲಿದ್ದ ಕಾಂಗ್ರೆಸ್‌ ಕೈಗೆ ಈಗ ದೊಡ್ಡ ಮೂರು ರಾಜ್ಯಗಳು ಸೇರ್ಪಡೆ ಆಗಿವೆ. ಈ ಚುನಾವಣೆ ಫಲಿತಾಂಶಕ್ಕೆ ಮುನ್ನಾ ಕಾಂಗ್ರೆಸ್ ಪಕ್ಷವು ಪಂಜಾಬ್ ಮತ್ತು ಮಿಜೋರಂ ನಲ್ಲಿ ಮಾತ್ರ ಸ್ವತಂತ್ರ್ಯವಾಗಿ ಸರ್ಕಾರ ರಚಿಸಿತ್ತು. ಈಗ ಮಿಜೋರಂ ನಲ್ಲಿ ಅಧಿಕಾರ ಕಳೆದುಕೊಂಡಿದೆ ಆದರೆ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢವನ್ನು ತೆಕ್ಕೆಗೆ ಹಾಕಿಕೊಂಡಿದೆ.

ರಾಜಸ್ಥಾನದಲ್ಲಿ ಬಿಜೆಪಿಗೆ ಮುಖಭಂಗ : ಸೋಲಿಗೆ 5 ಕಾರಣಗಳು ರಾಜಸ್ಥಾನದಲ್ಲಿ ಬಿಜೆಪಿಗೆ ಮುಖಭಂಗ : ಸೋಲಿಗೆ 5 ಕಾರಣಗಳು

ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ

ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ

ಎರಡು ರಾಜ್ಯದಲ್ಲಿ ಮಾತ್ರವೇ ಸ್ವತಂತ್ರ್ಯವಾಗಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಈಗ ನಾಲ್ಕು ರಾಜ್ಯಗಳಲ್ಲಿ ಸ್ವತಂತ್ರ್ಯವಾಗಿ ಅಧಿಕಾರದಲ್ಲಿ ಹಾಗೂ ಕರ್ನಾಟಕದಲ್ಲಿ ಮೈತ್ರಿಯಲ್ಲಿ ಒಟ್ಟು ಐದು ರಾಜ್ಯದಲ್ಲಿ ಅಧಿಕಾರದಲ್ಲಿ ಇದೆ. ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ಸನಿಹದಲ್ಲಿದ್ದು ಈ ರಾಜ್ಯದ ಯಾವ ಪಕ್ಷದ್ದಾಗುತ್ತದೆಯೋ ನೋಡಬೇಕಿದೆ.

ದಕ್ಷಿಣದಲ್ಲಿ ಬಿಜೆಪಿ ಅರಳುವುದು ದೂರದ ಮಾತು

ದಕ್ಷಿಣದಲ್ಲಿ ಬಿಜೆಪಿ ಅರಳುವುದು ದೂರದ ಮಾತು

ದಕ್ಷಿಣ ಭಾರತದ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಕೇರಳಗಳಲ್ಲಿ ಬಿಜೆಪಿ ಬಹು ನಿಶ್ಯಕ್ತವಾಗಿದ್ದು ಅಧಿಕಾರಕ್ಕೇರುವುದು ಕನಸಿನ ಮಾತು. ಪಶ್ಚಿಮ ಬಂಗಾಳ, ಒರಿಸ್ಸಾ ಗಳಲ್ಲಿ ಸಹ ಬಿಜೆಪಿ ಮತ್ತು ಕಾಂಗ್ರೆಸ್‌ಯೇತರ ಸರ್ಕಾರಗಳು ಇವೆ. ದೆಹಲಿಯಲ್ಲೂ ಸಹ ಎಎಪಿ ಸರ್ಕಾರ ಆಡಳಿತದಲ್ಲಿದೆ.

ಕಾಂಗ್ರೆಸ್ ಮುಕ್ತ ಈಶಾನ್ಯ ಭಾರತ, ಬಿಜೆಪಿ ಕನಸು ನನಸಾಯ್ತು! ಕಾಂಗ್ರೆಸ್ ಮುಕ್ತ ಈಶಾನ್ಯ ಭಾರತ, ಬಿಜೆಪಿ ಕನಸು ನನಸಾಯ್ತು!

English summary
BJP remained in 15 states in ruling after defeating Madya Pradesh, Rajasthan and Chattisgarh. Now congress were ruling in 5 states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X