• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021-22ರಲ್ಲಿ 614.53 ಕೋಟಿ ದೇಣಿಗೆ ಪಡೆದ ಬಿಜೆಪಿ, ಕಾಂಗ್ರೆಸ್ ಪಡೆದದ್ದು ಎಷ್ಟು ಗೊತ್ತಾ?

|
Google Oneindia Kannada News

ನವದೆಹಲಿ, ನವೆಂಬರ್‌ 30: 2021-22ರ ಆರ್ಥಿಕ ವರ್ಷದಲ್ಲಿ ಆಡಳಿತಾರೂಢ ಬಿಜೆಪಿಯು 614.53 ಕೋಟಿ ರೂ.ಗಳನ್ನು ಕೊಡುಗೆಯಾಗಿ ಸ್ವೀಕರಿಸಿದೆ. ಇದು ಪ್ರತಿಪಕ್ಷ ಕಾಂಗ್ರೆಸ್ ಗಳಿಸಿದ ನಿಧಿಗಿಂತ ಆರು ಪಟ್ಟು ಹೆಚ್ಚಾಗಿದೆ.

ಚುನಾವಣಾ ಆಯೋಗದ ಅಂಕಿ ಅಂಶಗಳ ಪ್ರಕಾರ ಕಾಂಗ್ರೆಸ್ 95.46 ಕೋಟಿ ರೂಪಾಯಿ ಹಣವನ್ನು ಪಡೆದಿದೆ. ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ ಈ ಅವಧಿಯಲ್ಲಿ 43 ಲಕ್ಷ ರೂಪಾಯಿಗಳನ್ನು ಕೊಡುಗೆಯಾಗಿ ಸ್ವೀಕರಿಸಿದ್ದರೆ, ಕೇರಳದಲ್ಲಿ ಸರ್ಕಾರದಲ್ಲಿರುವ ಸಿಪಿಐ ಎಂ 10.05 ಕೋಟಿ ರೂಪಾಯಿಗಳನ್ನು ಪಡೆದಿದೆ.

ನೆಲಮಂಗಲ ಸ್ಯಾಟಲೈಟ್ ಸಿಟಿ; ಮೂರು ವರ್ಷದಲ್ಲಿ ಮಾಡದವರು, ಮೂರು ತಿಂಗಳಲ್ಲಿ ಮಾಡ್ತಾರಾ ಹೆಚ್ಡಿಕೆ ವ್ಯಂಗ್ಯನೆಲಮಂಗಲ ಸ್ಯಾಟಲೈಟ್ ಸಿಟಿ; ಮೂರು ವರ್ಷದಲ್ಲಿ ಮಾಡದವರು, ಮೂರು ತಿಂಗಳಲ್ಲಿ ಮಾಡ್ತಾರಾ ಹೆಚ್ಡಿಕೆ ವ್ಯಂಗ್ಯ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯು 2021 ಮಾರ್ಚ್- ಏಪ್ರಿಲ್‌ನಲ್ಲಿ ನಡೆಯಿತು. ಕೇರಳದಲ್ಲಿಯೂ ಸಹ ಏಪ್ರಿಲ್ 2021 ರಲ್ಲಿ ವಿಧಾನಸಭಾ ಚುನಾವಣೆಯನ್ನು ನಡೆಸಲಾಯಿತು. ಈ ನಾಲ್ಕು ರಾಷ್ಟ್ರೀಯ ಪಕ್ಷಗಳು ಇತ್ತೀಚೆಗೆ ಚುನಾವಣಾ ಆಯೋಗಕ್ಕೆ ತಮ್ಮ ಇತ್ತೀಚಿನ ಕೊಡುಗೆಗಳ ವರದಿಗಳನ್ನು ಸಲ್ಲಿಸಿದ್ದು ಅದು ಮಂಗಳವಾರ ದಾಖಲೆಗಳನ್ನು ಬಿಡುಗಡೆ ಮಾಡಿದೆ.

ವೈಯಕ್ತಿಕ ದಾನಿಗಳು ಮತ್ತು ಘಟಕಗಳಿಂದ ಪಡೆದ 20,000 ರೂ.ಗಿಂತ ಹೆಚ್ಚಿನ ಕೊಡುಗೆಗಳ ವಾರ್ಷಿಕ ವರದಿಯನ್ನು ಪಕ್ಷಗಳು ಸಲ್ಲಿಸಬೇಕೆಂದು ಜನತಾ ಪ್ರಾತಿನಿಧ್ಯ ಕಾಯಿದೆ ಷರತ್ತು ವಿಧಿಸುತ್ತದೆ. ವ್ಯಕ್ತಿಗಳು ಮತ್ತು ಘಟಕಗಳಲ್ಲದೆ ಚುನಾವಣಾ ಟ್ರಸ್ಟ್‌ಗಳು ಸಹ ಪಕ್ಷಗಳ ಖಜಾನೆಗೆ ಕೊಡುಗೆ ನೀಡುತ್ತವೆ. ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ಸೇರಿದಂತೆ ಚುನಾವಣಾ ಟ್ರಸ್ಟ್‌ಗಳು ಬಿಜೆಪಿಯ ಖಜಾನೆಗೆ ಪ್ರಮುಖ ಕೊಡುಗೆ ನೀಡಿವೆ.

BJP received 614.53 crore donations in 2021-22

ದೆಹಲಿ ಮತ್ತು ಪಂಜಾಬ್‌ನಲ್ಲಿ ಅಧಿಕಾರದಲ್ಲಿರುವ ಮತ್ತು ಮೂರು ರಾಜ್ಯಗಳಲ್ಲಿ ಮಾನ್ಯತೆ ಪಡೆದ ರಾಜ್ಯ ಪಕ್ಷವಾಗಿರುವ ಆಮ್ ಆದ್ಮಿ ಪಕ್ಷವು 2021-22 ರ ಆರ್ಥಿಕ ವರ್ಷದಲ್ಲಿ 44.54 ಕೋಟಿ ರೂಪಾಯಿಗಳನ್ನು ಪಡೆದಿದೆ ಎಂದು ಚುನಾವಣಾ ಸಮಿತಿಗೆ ವರದಿ ಮಾಡಿದೆ. ಈ ವರ್ಷದ ಅಕ್ಟೋಬರ್‌ನಲ್ಲಿ ಆಯೋಗಕ್ಕೆ ಸಲ್ಲಿಸಿದ ಇತ್ತೀಚಿನ ಲೆಕ್ಕಪರಿಶೋಧನಾ ವರದಿಯಲ್ಲಿ 30.30 ಕೋಟಿ ರೂಪಾಯಿ ವೆಚ್ಚವನ್ನು ತೋರಿಸಿದೆ. ಎಎಪಿ ದೆಹಲಿ ಮತ್ತು ಪಂಜಾಬ್ ಅಲ್ಲದೆ, ಗೋವಾದಲ್ಲಿ ಮಾನ್ಯತೆ ಪಡೆದ ರಾಜ್ಯ ಪಕ್ಷವಾಗಿದೆ.

English summary
In the financial year 2021-22, the ruling BJP received Rs 614.53 crore as contribution. This is six times more than the funds earned by the opposition Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X