ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ರಾಮ ಮಂದಿರ ಕಟ್ಟುತ್ತೇವೆ'... ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಆಶ್ವಾಸನೆ

ಧರ್ಮದ ಆಧಾರದಲ್ಲಿ ಮತಯಾಚನೆ ಮಾಡಕೂಡದೆಂದು ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ದೇಶದ ಎಲ್ಲಾ ರಾಜಕೀಯ ಪಕ್ಷಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಬೆನ್ನಲ್ಲೇ ಬಿಜೆಪಿಯಿಂದ 'ರಾಮ ಮಂದಿರ' ಜಪ ಶುರುವಾಗಿದೆ.

By ವಿಕಾಸ್ ನಂಜಪ್ಪ
|
Google Oneindia Kannada News

ಅಲಹಾಬಾದ್, ಜನವರಿ 28: ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯು ಶುಕ್ರವಾರ ಬಿಡುಗಡೆಗೊಳಿಸಿರುವ ಚುನಾವಣಾ ಪ್ರಣಾಳಿಕೆಯಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವ ಭರವಸೆ ನೀಡಲಾಗಿದೆ.

ಶುಕ್ರವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಈ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ.

ಬಿಜೆಪಿಗೆ ಉತ್ತರ ಪ್ರದೇಶದಲ್ಲಿ ಅಧಿಕಾರ ಸಿಕ್ಕರೆ ರಾಮ ಮಂದಿರ ನಿರ್ಮಿಸುತ್ತೇವೆ ಎಂದು ಹೇಳಿರುವ ಬಿಜೆಪಿ ಆ ಮಂದಿರವನ್ನು ಕಾನೂನಿಗನುಗುಣವಾಗಿ ನಿರ್ಮಿಸುತ್ತೇವೆ ಎಂದು ಹೇಳುವ ಮೂಲಕ ಜಾಣ್ಮೆ ಮೆರೆದಿದೆ.

ಇನ್ನುಳಿದಂತೆ, ಪ್ರಣಾಳಿಕೆಯಲ್ಲಿರುವ ಇತರ ಪ್ರಮುಖ ಅಂಶಗಳು ಹೀಗಿವೆ.

-ರಾಜ್ಯದ ಶಾಲಾ ಕಾಲೇಜುಗಳ ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಆ್ಯಂಟಿ ರೋಮಿಯೋ ದಳ ರಚನೆ

- ರಾಜ್ಯದ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕಾಗಿ 500 ಕೋಟಿ ರು.

- ಜನ ಕಲ್ಯಾಣ ಸಂಕಲ್ಪ ಯೋಜನೆಯಡಿ ಸಣ್ಣ ಹಾಗೂ ಕನಿಷ್ಟ ಆದಾಯವಿರುವ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ.

-ಕಬ್ಬು ಬೆಳೆಗಾರರ ಬಾಕಿ ಬಿಜೆಪಿ ಅಧಿಕಾರಕ್ಕೆ ಬಂದ 120 ದಿನಗಳಲ್ಲಿ ಪಾವತಿ

- ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಹಾಗೂ 1 ಜಿಬಿ ಡೇಟಾ

- ಕಾನೂನಿನ ಬಲೆಯಿಂದ ತಪ್ಪಿಸಿಕೊಂಡಿರುವ ಎಲ್ಲಾ ಸಮಾಜ ಘಾತುಕರೂ 45 ದಿನಗಳಲ್ಲಿ ಅಂದರ್

- ರಾಜ್ಯದಲ್ಲಿ ಆಹಾರ ಸಂಸ್ಕರಣಾ ಪಾರ್ಕ್ ಸ್ಥಾಪನೆ

- ರಾಜ್ಯದಲ್ಲಿ 24 ಗಂಟೆ ನಿರಂತರ ವಿದ್ಯುತ್, ಬಡವರಿಗೆ ಕಡಿಮೆ ದರದಲ್ಲಿ

- ಜಿಲ್ಲಾಮಟ್ಟದಲ್ಲಿ ಮತೀಯ ಗಲಭೆಗಳಿಂದ ಜನರು ಬೇರೆಡೆ ಗುಳೆ ಹೋಗದಂತೆ ತಡೆಯಲು ಬಿಜೆಪಿಯಿಂದ ವಿಶೇಷ ದಳಗಳ ರಚನೆ

- ಭ್ರಷ್ಟಾಚಾರ ತಡೆಯುವ ಸಲುವಾಗಿ ಸರ್ಕಾರಿ ವಲಯದಲ್ಲಿ ಮೂರನೇ ಹಾಗೂ ನಾಲ್ಕನೇ ದರ್ಜೆ ನೌಕರಿಗಿರುವ ಸಂದರ್ಶನ ರದ್ದು

English summary
In its manifesto for Uttar Pradesh Assembly elections 2017 BJP has promised the construction of the Ram Temple at Ayodhya as per the law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X