ಸ್ತ್ರೀಕಂಟಕ ನಿವಾರಣೆ: ಕೋಡಿಶ್ರೀಗಳ ಕಾಲಿಗೆರಗಿದ ಅಮಿತ್ ಶಾ
ಹಿಂದೆ ಅಟಲ್ ಬಿಹಾರಿ ವಾಜಪೇಯಿಯವರ ಎನ್ಡಿಎ ಸರಕಾರ ಅಧಿಕಾರದಲ್ಲಿದ್ದಾಗಲೂ ಮಮತಾ ಬ್ಯಾನರ್ಜಿ, ಜಯಲಲಿತಾ ಅವರಿಂದ ಹಲವು ಬಾರಿ ಸರಕಾರ ಮುಜುಗರಕ್ಕೀಡಾಗಿತ್ತು.
ಈಗಿನ ನರೇಂದ್ರ ಮೋದಿ ಸರಕಾರಕ್ಕೂ ಸುಷ್ಮಾ ಸ್ವರಾಜ್, ಸ್ಮೃತಿ ಇರಾನಿ ಮತ್ತು ಪಂಕಜಾ ಮುಂಡೆಯವರ ಹಗರಣದಿಂದ ಹಲವು ಬಾರಿ ವಿರೋಧ ಪಕ್ಷಗಳಿಂದ ವಿರೋಧ ಎದುರಿಸಬೇಕಾಗಿ ಬಂದಿದೆ.
ಸಂಸತ್ತಿನ ಮಳೆಗಾಲದ ಅಧಿವೇಶನ ಇನ್ನೇನು ಆರಂಭವಾಗುತ್ತಿದೆ. ಅದಕ್ಕೂ ಮುನ್ನ ಇದಕ್ಕೊಂದು ಪರಿಹಾರ ಕಂಡುಹಿಡಿಯಲೇ ಬೇಕೆಂದು ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಮೋದಿ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಹಿಂದೆ ಕೂಡಾ ನಮ್ಮ ಸರಕಾರಕ್ಕೆ ಸ್ತ್ರೀಯರಿಂದ ಮುಜುಗರ ಎದುರಿಸಬೇಕಾಗಿ ಬಂದಿತ್ತು, ಈಗಲೂ ಮುಜುಗರ ಎದುರಿಸಬೇಕಾಗುತ್ತಿದೆ. ನಮ್ಮ ಸರಕಾರಕ್ಕೆ ಎಲ್ಲೋ ದೋಷ ಕಾಡುತ್ತಿದೆ, ಸರಕಾರದ ಉತ್ತಮ ಕೆಲಸಗಳು ಜನರಿಗೆ ಸರಿಯಾಗಿ ತಲುಪುತ್ತಿಲ್ಲ. (ಪ್ರಧಾನಿ ಬಗ್ಗೆ ಕೋಡಿಶ್ರೀ ಭವಿಷ್ಯ)

ಎಲ್ಲೋ ಏನೋ ರಿವಿಟ್ ಹೋಡೀತಾದೆ ಎಂದು ಅಮಿತ್ ಶಾ ಸೂಕ್ತ ಜ್ಯೋತಿಷಿಗಳ/ಸ್ವಾಮೀಜಿಯವರ ಬಳಿ ಭವಿಷ್ಯ ಕೇಳಲು ನಿರ್ಧರಿಸಿದ್ದರಂತೆ.
ಅದರಂತೇ, ದೆಹಲಿಯ ಕರ್ನಾಟಕ ಭವನದಲ್ಲಿದ್ದ ಹೆಸರು ಹೇಳಲು ಇಚ್ಚಿಸದ ರಾಜ್ಯದ ಸಂಸದರೊಬ್ಬರ ಸಲಹೆಯಂತೆ ವಿಶೇಷ ವಿಮಾನದಲ್ಲಿ ಅರಸೀಕರೆ ಕೋಡಿಮಠದ ಶ್ರೀಗಳಿಂದ ಭವಿಷ್ಯ ಕೇಳಿ ವಾಪಸ್ ಆಗಿದ್ದಾರೆ ಎನ್ನುವುದು ಸದ್ಯ ಬಿಜೆಪಿ ಪಡಶಾಲೆಯಲ್ಲಿ ಬಹು ಚರ್ಚಿತ ಸುದ್ದಿ.
ಸ್ವಾಮೀಜಿಗಳ ಜೊತೆ ನಡೆದ ಮಾತುಕತೆಯ ಸಂಪೂರ್ಣ ವಿವರವನ್ನು ರಾಜನಾಥ್ ಸಿಂಗ್ ಅವರನ್ನೂ ದೂರವಿಟ್ಟು ಅಮಿತ್ ಶಾ ಪ್ರಧಾನಿ ಮೋದಿಯವರಿಗೆ ವಿವರಿಸಿದ್ದಾರಂತೆ.
ಹೆಚ್ಚಾಗಿ ಕೆಲಸದ ಮೂಲಕವೇ ಮಾತನಾಡುವ ಮೋದಿ, ಅಮಿತ್ ಶಾ ಮಾತನ್ನು ತದೇಕಚಿತ್ತದಿಂದ ಆಲಿಸಿದ್ದಾರೆ. ಹಾಗೆಯೇ, ಕೋಡಿಶ್ರೀಗಳ ನಿರ್ದೇಶನದಂತೆ ತಾನೇ ಖುದ್ದಾಗಿ ನಿಂತು ದೇಶದ ಪ್ರಮುಖ ದೇವಾಲಯಗಳಿಗೆ ಪ್ರದಕ್ಷಿಣೆ, ಪೂಜೆ, ಹೋಮ ಹವನ ಮಾಡಿಸಲು ಪ್ರಧಾನಿ ಮೋದಿ ಓಕೆ ಎಂದಿದ್ದಾರೆ ಎನ್ನುವ ಸುದ್ದಿಯಿದೆ.
ಮೋದಿಯವರ ಅನುಮತಿ ಪಡೆದ ನಂತರ ಹದಿನೈದು ದಿನದೊಳಗೆ ಶ್ರೀಗಳ ಅಣತಿಯಂತೆ ಎಲ್ಲಾ ಧಾರ್ಮಿಕ ಕೆಲಸ ಮುಗಿಸಬೇಕಾಗಿರುವುದರಿಂದ, ಈ ವಿಚಾರದಲ್ಲಿ ಪಂಟ್ರಾಗಿರುವ ಮೂವರ ತಜ್ಞರ ಕಮಿಟಿಯನ್ನು ರಚಿಸಲು ಶಾ ನಿರ್ಧರಿಸಿದ್ದಾರೆ.
ಕಮಿಟಿಗೆ ರಾಜ್ಯದಿಂದ ಪೂಜೆ, ಹೋಮ ಹವನಗಳಲ್ಲಿ ಪಳಗಿರುವ ಯಡಿಯೂರಪ್ಪ, ಮೋದಿಯವರ ಮನವಿಯಂತೆ ದೇವೇಗೌಡ ಮತ್ತು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಆಯ್ಕೆ ಮಾಡಲಾಗಿದೆಯತೆ.
ಮೋದಿಯವರ ಕಷ್ಟಕ್ಕೆ ಕೂಡಲೇ ಸ್ಪಂಧಿಸಿರುವ ಮೂವರು, ಈಗಾಗಲೇ ಚರ್ಚೆ ನಡೆಸಿ ಯಾವ ಯಾವ ದೇವಸ್ಥಾನಕ್ಕೆ ಹೋಗಬೇಕು, ಯಾವ ದೇವಸ್ಥಾನದಲ್ಲಿ ಏನು ಪೂಜೆ ಮಾಡಿಸಬೇಕೆನ್ನುವ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ. ಜೊತೆಗೆ ಈ ಮೂವರು ಪ್ರಧಾನಿಯವರ ಜೊತೆ ಪ್ರಯಾಣಿಸಲು ನಿರ್ಧರಿಸಿದ್ದಾರೆ ಎನ್ನುವ ಸುದ್ದಿಯಿದೆ.

ರಾಜ್ಯದ ಧರ್ಮಸ್ಥಳ ದೇವಾಲಯದಲ್ಲಿ ವಿಶೇಷ ಪೂಜೆ, ಕುಕ್ಕೆಯಲ್ಲಿ ಸರ್ಪಸಂಸ್ಕಾರ ಮತ್ತು ಆಶ್ಲೇಷ ಬಲಿ, ನಂಜನಗೂಡಿನಲ್ಲಿ ರುದ್ರಾಭಿಷೇಕ ಮತ್ತು ಸವದತ್ತಿ ದೇವಾಲಯದಲ್ಲಿ ಪೂಜೆ ನಡೆಸಲು ಕಮಿಟಿಯ ಈ ಮೂವರು ನಿರ್ಧರಿಸಿದ್ದಾರೆ.
ಇನ್ನು ಕೇರಳದ ಗುರುವಾಯೂರು, ತಿರುವನಂತಪುರದ ಅನಂತ ಪದ್ಮನಾಭ ದೇವಾಲಯ, ಶಬರಿಮಲೆ, ಆಂಧ್ರ/ತೆಲಂಗಾಣದ ಕಾನಿಪಾಕ್ಕಂ ಗಣೇಶ ದೇವಾಲಯ, ತಿರುಪತಿ, ಮಂತ್ರಾಲಯ, ಕಾಳಹಸ್ತಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಲು ಕಮಿಟಿಯ ಸಭೆಯಲ್ಲಿ ನಿರ್ಧರಿಸಲಾಗಿದೆ. (ದಕ್ಷಿಣ ಭಾರತದಲ್ಲಿ ಕಮಲ ಅರಳಿಸಿ: ಅಮಿತ್ ಶಾ)
ಅಲ್ಲದೇ, ತಮಿಳುನಾಡಿನ ತಿರುವಳ್ಳಾಮಲೈ, ಮಧುರೈ ಮೀನಾಕ್ಷಿ, ತಿರುಚೆಂದೂರು, ತಿರುನಲ್ಲೂರು, ರಾಮೇಶ್ವರಂ ದೇವಾಲಯಗಳಲ್ಲಿ ಹೋಮ, ಹವನ ನಡೆಸಲು ನಿರ್ಧರಿಸಲಾಗಿದೆ.
ಇದಲ್ಲದೇ ದೇಶದ ಇತರ ಭಾಗದ ಶಿರಡಿ, ಶನಿಸಿಂಗನಾಪುರ, ನಾಸಿಕ್, ಪಂಡರಾಪುರ, ಅಕ್ಷರಧಾಮ, ವಾರಣಾಸಿ, ಕೇದಾರನಾಥ, ಪುರಿ ಜಗನ್ನಾಥ, ಸೋಮನಾಥ ದೇವಾಲಯ ಮತ್ತು ಕಾಮಾಕ್ಯ ದೇವಾಲಯದಲ್ಲೂ ಪೂಜೆ, ಪುನಸ್ಕಾರ ನಡೆಸಲು ನಿರ್ಧರಿಸಲಾಗಿದೆ.
ಈ ಎಲ್ಲಾ ಧಾರ್ಮಿಕ ಕಾರ್ಯಗಳನ್ನು ಅಧಿಕ ಆಷಾಢ ಮಾಸದ ಅವಧಿಯಲ್ಲೇ ಮುಗಿಸಲು ಕೋಡಿಶ್ರೀಗಳು ಸೂಚಿಸಿರುವುದರಿಂದ ಮೋದಿ, ದೇವೇಗೌಡ, ಬಿಎಸ್ವೈ, ಚಂದ್ರಬಾಬು, ಪ್ರಧಾನಿ ಭದ್ರತಾ ಪಡೆಯ ಮೂವರು ಸೇರಿದಂತೆ ಒಟ್ಟು ಹತ್ತು ಜನರು ಕೂರಬಹುದಾದ ವಿಶೇಷ ಕಾಪ್ಟರನ್ನು ಭಾರತೀಯ ವಾಯುಪಡೆ ಈಗಾಗಲೇ ರೆಡಿಯಾಗಿಟ್ಟಿದೆ ಎನ್ನುವ ಸುದ್ದಿಯಿದೆ.
ಸ್ತ್ರೀದೋಷ ಸೇರಿದಂತೆ ಹತ್ತು ಹಲವಾರು ಗಂಭೀರ ಸಮಸ್ಯೆಗಳ ತುರ್ತು ಪರಿಹಾರಕ್ಕಾಗಿ ಮೋದಿಯವರ ಈ ಧಾರ್ಮಿಕ ಕಾರ್ಯಕ್ರಮ ಎಷ್ಟರ ಮಟ್ಟಿಗೆ ಸರಕಾರಕ್ಕೆ ಮುಂದಿನ ದಿನಗಳಲ್ಲಿ ಲಾಭವಾಗುತ್ತೆ, ಕೋಡಿಶ್ರೀಗಳ ಭವಿಷ್ಯ ಎಷ್ಟ್ರರ ಮಟ್ಟಿಗೆ ಸರಿಯಾಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ. (ಕಾಲ್ಪನಿಕ ಲೇಖನ)
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications