ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ವೈ, ರೆಡ್ಡಿ ಬ್ರದರ್ಸ್ ಬಗ್ಗೆ ಬಿಜೆಪಿಗೆ ರಾಹುಲ್ ಪ್ರಶ್ನೆ

|
Google Oneindia Kannada News

ಅಹಮದಾಬಾದ್, ಮಾ.11 : ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಕುರಿತು ವಾಗ್ದಾಳಿ ನಡೆಸುವ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾತಿನ ಮೂಲಕವೇ ತಿರುಗೇಟು ನೀಡಿದ್ದಾರೆ. ಕರ್ನಾಟಕದಲ್ಲಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ನಾಯಕರು ಏಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

ಮಂಗಳವಾರ ಗುಜರಾತ್ ಪ್ರವಾಸ ಕೈಗೊಂಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಬೃಹತ್ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿದರು. ತಮ್ಮ ಭಾಷಣದ ತುಂಬಾ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿಲ್ಲ ಎಂದು ದೂರಿದರು.

Rahul Gandhi

ಸದಾ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಕರ್ನಾಟಕದಲ್ಲಿ ತಮ್ಮ ಪಕ್ಷದ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಡೆದ ಭ್ರಷ್ಟಾಚಾರದ ಕುರಿತು ಏಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು. ಈ ಕುರಿತು ನಿಮ್ಮ ಮುಖ್ಯಮಂತ್ರಿಗಳನ್ನು ಕೇಳಿ ಎಂದು ಗುಜರಾತ್ ಜನರಿಗೆ ಕರೆ ನೀಡಿದರು. [ಲೋಕಸಭೆ ಚುನಾವಣೆ ವೇಳಾಪಟ್ಟಿ]

ಕರ್ನಾಟಕದಲ್ಲಿನ ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆದ ಇಬ್ಬರು ಸಹೋದರರರಿಗೆ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಚಿವ ಸ್ಥಾನ ನೀಡಿದರು. ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಬಿಜೆಪಿ ನಾಯಕರು ರೆಡ್ಡಿ ಬ್ರದರ್ಸ್ ಬಗ್ಗೆ ಏಕೆ ಮೌನ ವಹಿಸಿದ್ದಾರೆ? ಎಂದು ರಾಹುಲ್ ಕೇಳಿದರು.

ರಾಹುಲ್ ಗಾಂಧಿ ಭಾಷಣದ ಮುಖ್ಯಾಂಶಗಳು

* ಗುಜರಾತ್‌ ರಾಜ್ಯದಲ್ಲಿ ಜನ ಮಿಂಚುತ್ತಾರೆಂಬುದು ಸುಳ್ಳು, ಕೇವಲ ಹಣ ಇರುವವರು ಮಾತ್ರ ಇಲ್ಲಿ ತಲೆ ಎತ್ತಿದ್ದಾರೆ. ಆದರೆ, ಇಲ್ಲಿನ ಬಡ ಜನತೆ ಮತ್ತು ಮಹಿಳೆಯರ ಸಮಸ್ಯೆಗೆ ಸ್ಪಂಧಿಸಲು ಸರ್ಕಾರ ವಿಫಲವಾಗಿದೆ.

* ಭಾರತ ದೇಶಕ್ಕೆ ಕಾವಲುಗಾರ ಬೇಡ. ಇಲ್ಲಿನ ಜನರಿಗೆ ಬೇಕಾಗಿರುವುದು ಅವರ ಹಕ್ಕು ಮತ್ತು ಅದನ್ನು ದೊರಕಿಸಿಕೊಡುವ ನಾಯಕ.

*ಗುಜರಾತ್ ರಾಜ್ಯ ದೇಶಕ್ಕೆ ಮಹಾತ್ಮ ಗಾಂಧಿ ಮತ್ತು ಸರ್ದಾರ್ ವಲ್ಲಬಾಯ್ ಪಟೇಲ್ ಅಂತಹವರನ್ನು ನೀಡಿದೆ. ಅವರು ಕೇವಲ ವ್ಯಕ್ತಿಗಳಲ್ಲ, ಆದರ್ಶವಾದಿಗಳು. ಪಟೇಲ್ ಪ್ರತಿಮೆ ನಿರ್ಮಿಸುವ ಮೊದಲು ಅವರ ತತ್ವ ಸಿದ್ಧಾಂತಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು.

* ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡೋಣ ಎಂದು ಬಿಜೆಪಿ ಕರೆ ನೀಡುತ್ತದೆ. ಆದರೆ ಇಂತಹ ಕಾಂಗ್ರೆಸ್ ಪಕ್ಷವನ್ನು ಕಟ್ಟಿದವರು ಗಾಂಧಿ ಮತ್ತು ಪಟೇಲ್. ಇದನ್ನು ಪ್ರತಿಪಕ್ಷ ಸಹ ಒಪ್ಪಿಕೊಂಡಿದೆ. ಅವರ ಸಿದ್ಧಾಂತಗಳಿಗೆ ನೀವು ಬೆಲೆ ಕೊಡುವುದಿಲ್ಲವೇ?

* ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹೋರಾಟ ಕೇಲವ ಪ್ರಚಾರಕ್ಕಾಗಿ, ಗುಜರಾತ್ ನಲ್ಲಿ ಹಲವು ಆರೋಪ ಎದುರಿಸುತ್ತಿರುವ ಮೂವರನ್ನು ಸಚಿವರನ್ನಾಗಿ ಮಾಡಿದ್ದೀರಿ. ಕರ್ನಾಟಕದಲ್ಲಿ ರಾಜ್ಯವನ್ನು ಕೊಳ್ಳೆ ಹೊಡೆದವರಿಗೆ ಸಚಿವ ಸ್ಥಾನವನ್ನು ಬಿಜೆಪಿ ಏಕೆ ನೀಡಿತು.

English summary
In Gujarat rally Congress vice president Rahul Gandhi mocked the BJPs claims of battling corruption and said "If you are so against corruption in Karnataka, there are two brothers who sold off the state so why were they kept in the cabinet?"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X