ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆಯಲ್ಲಿ ಮಲತಾಯಿ-ಮಗ ಒಟ್ಟಿಗೆ ಕೂರುವುದಿಲ್ಲ, ಯಾಕೆ?

|
Google Oneindia Kannada News

ನವದೆಹಲಿ, ಮೇ 29: ಬಾಲಿವುಡ್‌ನಲ್ಲಿ ಮಿಂಚಿದ್ದ ಮಲತಾಯಿ-ಮಗ ಇಬ್ಬರೂ ಒಂದೇ ಪಕ್ಷದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸತ್‌ ಪ್ರವೇಶಿಸಿದ್ದಾರೆ. ಆದರೆ, ಲೋಕಸಭೆ ಕಲಾಪದ ವೇಳೆ ಅವರಿಬ್ಬರೂ ಒಟ್ಟಿಗೆ ಕುಳಿತುಕೊಳ್ಳುವುದಿಲ್ಲ. ಜೂನ್ 6ರಿಂದ ಆರಂಭವಾಗಲಿರುವ ಕಲಾಪದಲ್ಲಿ ಅವರು ಪ್ರತ್ಯೇಕವಾಗಿ ಕೂರಲಿದ್ದಾರೆ.

ಮೊದಲ ಬಾರಿಗೆ ಸಂಸತ್ ಪ್ರವೇಶಿಸಿರುವ ನಟ ಧರ್ಮೇಂದ್ರ ಅವರ ಹಿರಿಯ ಪತ್ನಿಯ ಮಗ ಸನ್ನಿ ಡಿಯೋಲ್ ಅವರಿಗೆ, ಎರಡನೆಯ ಬಾರಿ ಗೆದ್ದಿರುವ ಧರ್ಮೇಂದ್ರ ಅವರ ಪತ್ನಿ ಹೇಮಾಮಾಲಿನಿ ಅವರ ಸಾಥ್ ಲೋಕಸಭೆಯಲ್ಲಿ ದೊರಕುವುದಿಲ್ಲ.

17ನೇ ಲೋಕಸಭೆಗೆ ಸನ್ನಿ ಡಿಯೋಲ್ ಅಲ್ಲದೆ, 300 ಮಂದಿ ಮೊದಲ ಸಲ ಆಯ್ಕೆಯಾಗಿದ್ದಾರೆ. ಸಂಸತ್‌ಗೆ ಪಾದಾರ್ಪಣೆ ಮಾಡುತ್ತಿರುವವರಲ್ಲಿ ಜನಪ್ರಿಯ ವ್ಯಕ್ತಿಗಳೂ ಇದ್ದಾರೆ. ಗೌತಮ್ ಗಂಭೀರ್, ಹನ್ಸರಾಜ್‌ ಹನ್ಸ್, ರವಿ ಕಿಶನ್,ಸುಮಲತಾ ಅಂಬರೀಷ್, ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಇದರಲ್ಲಿ ಸೇರಿದ್ದಾರೆ.

ಬಿಜೆಪಿಗೆ ದಿಗ್ವಿಜಯ: ಬಾಲಿವುಡ್ ನಟ ಧರ್ಮೇಂದ್ರ ಕುಟುಂಬಕ್ಕೆ ಡಬಲ್ ಧಮಾಕ! ಬಿಜೆಪಿಗೆ ದಿಗ್ವಿಜಯ: ಬಾಲಿವುಡ್ ನಟ ಧರ್ಮೇಂದ್ರ ಕುಟುಂಬಕ್ಕೆ ಡಬಲ್ ಧಮಾಕ!

ಆದರೆ, ಅವರ ಜನಪ್ರಿಯತೆ ಮತ್ತು ತಮ್ಮ ವೃತ್ತಿಯಲ್ಲಿನ ಹಿರಿತನವನ್ನು ಸಂಸತ್‌ನಲ್ಲಿ ಪರಿಗಣಿಸುವುದಿಲ್ಲ. ಹೀಗಾಗಿ ಹೊಸ ಮುಖಗಳು ಲೋಕಸಭೆಯಲ್ಲಿ ಹಿಂದಿನ ಸೀಟುಗಳಲ್ಲಿ ಕೂರಬೇಕಾಗುತ್ತದೆ. ಲೋಕಸಭೆಯ ಅಧಿಕೃತ ಆಸನ ವ್ಯವಸ್ಥೆಯ ಪದ್ಧತಿ ಪ್ರಕಾರ ಅನುಭವಿಗಳು ಮುಂದಿನ ಸಾಲುಗಳಲ್ಲಿ ಕೂರುತ್ತಾರೆ.

ಮಧ್ಯದ ಸಾಲಿನಲ್ಲಿ ಹೇಮಾ, ಕೊನೆ ಸಾಲಿನಲ್ಲಿ ಸನ್ನಿ

ಮಧ್ಯದ ಸಾಲಿನಲ್ಲಿ ಹೇಮಾ, ಕೊನೆ ಸಾಲಿನಲ್ಲಿ ಸನ್ನಿ

ಎರಡನೆಯ ಅವಧಿಗೆ ಆಯ್ಕೆಯಾಗಿರುವ ಹೇಮಾ ಮಾಲಿನಿ ಅವರು ಲೋಕಸಭೆಯ ಮಧ್ಯದಲ್ಲಿರುವ ಸೀಟುಗಳಲ್ಲಿ ಕೂರಲಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಗುರುದಾಸಪುರದಿಂದ ಗೆದ್ದಿರುವ ಅವರ ಮಲಮಗ ಸನ್ನಿ ಡಿಯೋಲ್ ಹಿಂಬದಿ ಬೆಂಚಿನ ಸಂಸದರ ಸಾಲಿನಲ್ಲಿ ಕೂರುತ್ತಾರೆ.

ಇದೇ ರೀತಿ ತಮಗಿಂತ ಕಿರಿಯರಾದರೂ, ನಾಲ್ಕನೆಯ ಅವಧಿಗೆ ಸಂಸತ್‌ಗೆ ಅಯ್ಕೆಯಾದ ಅನುರಾಗ್ ಠಾಕೂರ್ ಅವರ ಹಿಂದಿನ ಸಾಲಿನಲ್ಲಿ ಪ್ರಗ್ಯಾ ಸಿಂಗ್ ಠಾಕೂರ್ ಕೂರಲಿದ್ದಾರೆ.

ಬಿಜೆಪಿಯ 'ಪ್ರಾಡಕ್ಟ್' ಮೋದಿ, ಅದನ್ನವರು ಚೆನ್ನಾಗಿ ಮಾರ್ಕೆಟಿಂಗ್ ಮಾಡಿದರು: ತರೂರ್ಬಿಜೆಪಿಯ 'ಪ್ರಾಡಕ್ಟ್' ಮೋದಿ, ಅದನ್ನವರು ಚೆನ್ನಾಗಿ ಮಾರ್ಕೆಟಿಂಗ್ ಮಾಡಿದರು: ತರೂರ್

ಎಡಭಾಗದ ಸೀಟು ವಿರೋಧಪಕ್ಷಕ್ಕೆ

ಎಡಭಾಗದ ಸೀಟು ವಿರೋಧಪಕ್ಷಕ್ಕೆ

ಲೋಕಸಭೆಗೆ ಆಯ್ಕೆಯಾದ ಪ್ರತಿ ಸದಸ್ಯರಿಗೂ ನಿಗದಿತ ಸೀಟುಗಳನ್ನು ನಿಯೋಜಿಸಲಾಗುತ್ತದೆ. ಇದನ್ನು ನಿರ್ದಿಷ್ಟ ಫಾರ್ಮುಲಾದಡಿ ನಿರ್ಧರಿಸಲಾಗುತ್ತದೆ.

ಸದನದ ಸ್ಪೀಕರ್ ಅವರ ಬಲಬದಿಯಲ್ಲಿರುವ ಸೀಟುಗಳು ಆಡಳಿತ ಪಕ್ಷ ಅಥವಾ ಮೈತ್ರಿಕೂಟಕ್ಕೆ ಮೀಸಲು. ಎಡಭಾಗದ ಆಸನಗಳು ವಿರೋಧಪಕ್ಷದ ಸದಸ್ಯರಿಗೆ ಮೀಸಲಾಗಿರುತ್ತದೆ.

ಮೊದಲ ಸಾಲಿನಲ್ಲಿ ಸಂಪುಟ ಸಚಿವರು

ಮೊದಲ ಸಾಲಿನಲ್ಲಿ ಸಂಪುಟ ಸಚಿವರು

ಮೊದಲ ಸಾಲುಗಳಲ್ಲಿ ಪ್ರಧಾನಿ, ಸಂಪುಟ ಸಚಿವರು ಮತ್ತು ಆಡಳಿತ ಪಕ್ಷದ ಇತರೆ ಹಿರಿಯ ನಾಯಕರು ಕೂರುತ್ತಾರೆ. ಎಡಬದಿಯ ಮೊದಲ ಸಾಲಿನಲ್ಲಿ ಆಡಳಿತೇತರ ಪಕ್ಷದ ನಾಯಕರು ಹಾಗೂ ವಿರೋಧಪಕ್ಷದ ಮುಖಂಡರು ಕೂರುತ್ತಾರೆ. ಸದನದ ಉಪಾಧ್ಯಕ್ಷರು ಕೂಡ ಇದೇ ಸಾಲಿನಲ್ಲಿ ಕೂರುತ್ತಾರೆ.

ಮೋದಿ ಪ್ರಮಾಣವಚನಕ್ಕೆ ಆಗಮಿಸಲಿರುವ ವಿಶ್ವದ ನಾಯಕರು ಯಾರ್ಯಾರು? ಮೋದಿ ಪ್ರಮಾಣವಚನಕ್ಕೆ ಆಗಮಿಸಲಿರುವ ವಿಶ್ವದ ನಾಯಕರು ಯಾರ್ಯಾರು?

ಹಿರಿತನಕ್ಕೆ ಅನುಗುಣವಾಗಿ ಆಸನ

ಹಿರಿತನಕ್ಕೆ ಅನುಗುಣವಾಗಿ ಆಸನ

ಮಧ್ಯದ ಸಾಲುಗಳನ್ನು ಸಂಸದರ ಹಿರಿತನಕ್ಕೆ ಅನುಗುಣವಾಗಿ ನೀಡಲಾಗುತ್ತದೆ. ಕೊನೆಯ ಸಾಲುಗಳನ್ನು ಹೊಸದಾಗಿ ಆಯ್ಕೆಯಾದ ಸಂಸದರಿಗೆ ನೀಡಲಾಗುತ್ತದೆ. ಒಂದು ವೇಳೆ ಹೊಸಬರು ಸಂಪುಟದಲ್ಲಿ ಸೇರಿಕೊಂಡರೆ ಅವರಿಗೆ ಮುಂದಿನ ಸೀಟು ದೊರಕುತ್ತದೆ.

English summary
Newly elected MP Sunny Deol and his step mother, second time MP Hema Malini will not sit together in parliament as per official seating system.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X