ಸಂಸದ ಕೆ.ಸುಧಾಕರ್‌ಗೆ ಕೇಂದ್ರದಲ್ಲಿ ಮತ್ತೊಂದು ದೊಡ್ಡ ಜವಾಬ್ದಾರಿ

ಕೇಂದ್ರದ ಸಂಸದೀಯ ಸ್ಥಾಯಿ ಸಮಿತಿಗಳನ್ನು ರಚಿಸಲಾಗಿದ್ದು, ಇಂದು ಈ ಪಟ್ಟಿ ಬಿಡುಗಡೆಯಾಗಿದೆ. ಈ ಪೈಕಿ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಸಂಸದ ಕೆ.ಸುಧಾಕರ್‌ ಅವರಿಗೆ ಹಣಕಾಸು ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯ ಸ್ಥಾನ ನೀಡಲಾಗಿದೆ.

ಬಿಜೆಪಿಯ ಭರ್ತೃಹರಿ ಮಹತಾಬ್ ಅವರಿಗೆ ಹಣಕಾಸು ಸಮಿತಿಯ ಮುಖ್ಯಸ್ಥ ಸ್ಥಾನ ನೀಡಲಾಗಿದೆ. ಕಾಂಗ್ರೆಸ್‌ನ ಶಶಿ ತರೂರ್ ಅವರಿಗೆ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಸ್ಥಾನ ನೀಡಲಾಗಿದೆ.

BJP MP K Sudhakar Has Been Selected As A Member Of The Parliamentary Standing Committee

ಸದಸ್ಯ ಸ್ಥಾನ ಸಿಕ್ಕ ಕುರಿತು ಸಂತಸ ವ್ಯಕ್ತಪಡಿಸಿರುವ ಸಂಸದ ಕೆ.ಸುಧಾಕರ್‌, ಹಣಕಾಸು ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರಾಗಿ ನೇಮಕಗೊಂಡಿರುವುದು ನಿಜಕ್ಕೂ ಅತೀವ ಸಂತಸ ತಂದಿದೆ. ನನಗೆ ಈ ಜವಾಬ್ದಾರಿಯನ್ನು ನನಗೆ ವಹಿಸಿದ್ದಕ್ಕಾಗಿ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ, ಸ್ಪೀಕರ್‌ ಓಂ ಬಿರ್ಲಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹಸಚಿವರಾದ ಅಮಿತ್‌ ಶಾ ಹಾಗೂ ಬಿ.ಎಲ್‌.ಸಂತೋಷ್‌ ಅವರಿಗೆ ಧನ್ಯವಾದಗಳು ಎಂದಿದ್ದಾರೆ.

ಈ ಸಂಸದೀಯ ಸ್ಥಾಯಿ ಸಮಿತಿಗಳು ಮಾರ್ಗದರ್ಶನ ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. 2025ರ ವೇಳೆಗೆ ಭಾರತವನ್ನ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಮಾಡುವ ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿಯ ಸದಸ್ಯನಾಗಿ ನನ್ನದೇ ಆದ ಸಣ್ಣ ಅಳಿಲು ಸೇವೆ ಸಲ್ಲಿಸಲು ಉತ್ಸುಕನಾಗಿದ್ದೇನೆ ಎಂದು ಸುಧಾಕರ್‌ ಟ್ವೀಟ್‌ ಮಾಡಿದ್ದಾರೆ.

ಹಣಕಾಸು ಸಮಿತಿ: ಲೋಕಸಭೆಯಿಂದ ಅರುಣ್‌ ಭಾತ್ರಿ, ಪಿ.ಪಿ.ಚೌದರಿ, ಲವು ಶ್ರೀ ಕೃಷ್ಣ ದೇವರಾಯಲು, ಗೌರವ್‌ ಗೊಗೊಯ್‌, ಕೆ.ಗೋಪಿನಾಥ್‌, ಸುರೇಶ್‌ ಕುಮಾರ್‌ ಕಶ್ಯಪ್‌, ಕಿಶೋರ್‌ ಲಾಲ್‌, ಭಾರ್ತುಹರಿ ಮಹ್ತಾಬ್‌, ಹರೇಂದ್ರ ಸಿಂಗ್‌ ಮಲಿಕ್‌, ರಾಜೇಶ್‌ಭಾಯ್‌ ನರಭಾಯ್‌, ತಿರು ಅರುಣ್‌ ನೆಹ್ರು, ಎನ್‌.ಕೆ.ಪರಮಚಂದ್ರನ್‌, ಸಿ.ಎಂ.ರಮೇಶ್‌, ಸಂಧ್ಯಾ ರಾಯ್‌, ಸೌಗತಾ ರಾಯ್‌, ಪಿ.ವಿ.ಮಿಥುನ್‌ ರೆಡ್ಡಿ, ಜಯಂತ್‌ ಕುಮಾರ್‌ ರಾಯ್‌, ಡಾ.ಕೆ.ಸುಧಾಕರ್‌, ಮನೀಶ್‌ ತಿವಾರಿ, ಬಾಲಶೌರಿ ವಲ್ಲಭನೇನಿ, ಪ್ರಭಾಕರ್‌ ರೆಡ್ಡಿ ವೇಮಿರೆಡ್ಡಿ ಅವರನ್ನು ನೇಮಿಸಲಾಗಿದೆ.

BJP MP K Sudhakar Has Been Selected As A Member Of The Parliamentary Standing Committee

ರಾಜ್ಯಸಭೆಯಿಂದ ಪಿ.ಚಿದಂಬರಂ, ಮಿಲಿಂದ್‌ ಮುರಳಿ ದಿಯೋರ, ಅಶೋಕ್‌ ಕುಮಾರ್‌ ಮಿತ್ತಲ್‌, ಯೆರ್ರಂ ವೆಂಕಟ ಸುಬ್ಬಾರೆಡ್ಡಿ, ಎಸ್‌.ಸೆಲ್ವಗಣಪತಿ, ಸಂಜಯ್‌ ಸೇಠ, ದಿನೇಶ್‌ ಶರ್ಮ, ದರ್ಶನ್‌ ಸಿಂಗ್‌, ಎಂ.ತಂಬಿದೊರೈ, ಪ್ರಮೋದ್‌ ತಿವಾರಿ ಅವರನ್ನು ನೇಮಿಸಲಾಗಿದೆ.

ವಿದೇಶಾಂಗ ವ್ಯವಹಾರಗಳ ಸಮಿತಿ: ಲೋಕಸಭೆಯಿಂದ ಡಿ.ಕೆ.ಅರುಣಾ, ವಿಜಯ್‌ ಬಘೇಲ್‌, ಮಿತೇಶ್‌ ಪಟೇಲ್‌ ಬಕಭಾಯ್‌, ಅಭಿಷೇಕ್‌ ಬ್ಯಾನರ್ಜಿ, ಅರುಣ್‌ ಗೋವಿಲ್‌, ದೀಪೇಂದರ್‌ ಸಿಂಗ್‌ ಹೂಡಾ, ನವಸ್ಕನಿ, ಕೃಪನಾಥ್‌ ಮಲ್ಲಾ, ಬ್ರಿಜೇಂದ್ರ ಸಿಂಗ್‌ ಒಲಾ, ಅಸಾದುದ್ದೀನ್‌ ಓವೈಸಿ, ಸನಾತನ್‌ ಪಾಂಡೆ, ಪ್ರದೀಪ್‌ ಕುಮಾರ್‌ ಪನಿಗ್ರಹೀ, ರವಿಶಂಕರ್‌ ಪ್ರಸಾದ್‌, ವೈ.ಎಸ್‌.ಅವಿನಾಶ್‌ ರೆಡ್ಡಿ, ಅಪರಾಜಿತ ಸಾರಂಗಿ, ಅರವಿಂದ್‌ ಗುನ್ಪತ್‌ ಸಾವಂತ್‌, ಪರಿಣಿತಿ ಸುಶೀಲ್‌ಕುಮಾರ್‌ ಶಿಂಧೆ, ಬನ್ಸುರಿ ಸ್ವರಾಜ್‌, ಶಶಿ ತರೂರ್‌, ಅಕ್ಷಯ್‌ ಯಾದವ್‌ ಅವರು ಸಮಿತಿ ಸದಸ್ಯ ಸ್ಥಾನ ಪಡೆದುಕೊಂಡಿದ್ದಾರೆ.

ರಾಜ್ಯಸಭೆಯಿಂದ ಜಾನ್‌ ಬ್ರಿಟ್ಟಾಸ್‌, ಕಿರಣ್‌ ಚೌಧರಿ, ಸಾಗರಿಕಾ ಘೋಸ್‌, ಆರ್‌.ಗಿರಿರಾಜನ್‌, ಕೆ.ಲಕ್ಷ್ಮಣ್‌, ಕವಿತಾ ಪಟಿದಾರ್‌, ಎ.ಎ.ರಹೀಂ, ಎ.ಡಿ.ಸಿಂಗ್‌, ಕುನ್ವಾರ್‌ ರತನ್‌ಜೀತ್‌ ಪ್ರತಾಪ್‌ ನಾರಾಯಣ್‌ ಸಿಂಗ್‌, ಸುಧಾಂಶು ತ್ರಿವೇದಿ ಅವರು ಸಮಿತಿಯಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+