ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು-ಕಾಶ್ಮೀರ: ಸಚಿವರ ಸಾಮೂಹಿಕ ರಾಜೀನಾಮೆ ಕೇಳಿದ ಬಿಜೆಪಿ

|
Google Oneindia Kannada News

ಶ್ರೀನಗರ, ಏಪ್ರಿಲ್ 18: ಜಮ್ಮು-ಕಾಶ್ಮೀರದಲ್ಲಿ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ ಮತ್ತು ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ. ಇದೀಗ ಮಂತ್ರಿಮಂಡಲವನ್ನು ಸಂಪೂರ್ಣ ಬದಲಾಯಿಸುವ ಕಾರಣದಿಂದ ಜಮ್ಮು-ಕಾಶ್ಮೀರ ಸರ್ಕಾರದ ಎಲ್ಲಾ ಬಿಜೆಪಿ ಸಚಿವರ ರಾಜೀನಾಮೆಯನ್ನು ಪಕ್ಷದ ಉನ್ನತ ನಾಯಕರು ಕೇಳಿದ್ದಾರೆ.

ಆಂಧ್ರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಹರಿ ಬಾಬು ರಾಜೀನಾಮೆಆಂಧ್ರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಹರಿ ಬಾಬು ರಾಜೀನಾಮೆ

ನಿನ್ನೆ(ಏ.17) ನಡೆದ ಈ ದಿಢೀರ್ ಬೆಳವಣಿಗೆ ರಾಜಕೀಯ ವಲಯಲ್ಲಿ ಕೆಲಕಾಲ ತಲ್ಲಣ ಎಬ್ಬಿಸಿತ್ತು. ಕತುವಾ ಅತ್ಯಾಚಾರ ಪ್ರಕರಣದ ನಂತರ ಕಾಶ್ಮೀರದ ಬಿಜೆಪಿ-ಪಿಡಿಪಿ ಸರ್ಕಾರ ಮೊದಲಿನಷ್ಟು ಉತ್ತಮ ಬಾಂಧವ್ಯ ಹೊಂದಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಕತುವಾ ಪ್ರಕರಣದ ಆರೋಪಿಗಳ ಪರವಾಗಿ ನಡೆದ rally ಯೊಂದರಲ್ಲಿ ಬಿಜೆಪಿ ಸಚಿವರಿಬ್ಬರು ಕಾಣಿಸಿಕೊಂಡ ನಂತರ ಪರಿಸ್ಥಿತಿ ಮತ್ತಷ್ಟು ಬಿಗಿಯಾಗಿತ್ತು. ಇಬ್ಬರು ಸಚಿವರು ರಾಜೀನಾಮೆ ನೀಡಿದ್ದರೂ, ಕತುವಾ ಪ್ರಕರಣ ಜಮ್ಮು-ಕಾಶ್ಮೀರದ ಮೈತ್ರಿ ಸರ್ಕಾರವನ್ನೇ ಅಲ್ಲಾಡಿಸಬಹುದು ಎಂದು ನಿರೀಕ್ಷಿಸಲಾಗಿತ್ತು.

BJP ministers asked to resign in Jammu and Kashmir government.

ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕರು ಎಲ್ಲಾ ಸಚಿವರ ರಾಜೀನಾಮೆ ಕೇಳಿದ್ದು ಕೆಲಕಾಲ ಅನುಮಾನ ಹುಟ್ಟಿಸಿತ್ತಾದರೂ, 'ರಾಜೀನಾಮೆ ಕೇಳಿದ್ದರೆ ಹಿಂದೆ ಬೇರೆ ಯಾವ ಉದ್ದೇಶವೂ ಇಲ್ಲ. ಸಚಿವ ಸಂಪುಟ ಪುನಾರಚನೆಗಷ್ಟೇ ಈ ನಿರ್ಧಾರ' ಎಂದು ಜಮ್ಮು-ಕಾಶ್ಮೀರದ ಬಿಜೆಪಿ ಮೂಲಗಳು ತಿಳಿಸಿವೆ.

English summary
The Bharatiya Janata Party (BJP) on Tuesday asked its ministers in Mehbooba Mufti-led government to submit their resignation as the party wants to reshuffle its ministers. The ministers were asked to resign to make way for the new inductees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X